ಮಾ. 5: ಕೂಳೂರು ಮೀನುಗಾರಿಕಾ ಜಟ್ಟಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ- ಸಂಸದ ನಳಿನ್

ಮಂಗಳೂರು, ಮಾ. 4: ಕೇಂದ್ರ ಸರಕಾರದ ಭಾರತ್ ಮಾಲ ಯೋಜನೆಯ ಮೂಲಕ ಅನುಮೋದನೆಗೊಂಡ ವಿವಿಧ ರಸ್ತೆ ಕಾಮಗಾರಿ ಹಾಗೂ ಕೇಂದ್ರ ಸರಕಾರದ ಸಾಗರ ಮಾಲ ಯೋಜನೆಯ ಮೂಲಕ ಕೂಳೂರು ಮೀನುಗಾರಿಕಾ ಜಟ್ಟಿ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದು ಮಾ. 5ರಂದು ಶಿಲಾನ್ಯಾಸ ನಡೆಯಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಸಾಗರ ಮಾಲ ಯೋಜನೆಯ ಮೂಲಕ ನಿರ್ಮಾಣಗೊಳ್ಳುವ ಈ ಮೀನುಗಾರಿಕಾ ಜಟ್ಟಿಗೆ 196.5 ಕೋಟಿ ರೂ ಬಿಡುಗಡೆಯಾಗಿದೆ. ಈ ಕಾಮಗಾರಿಗೆ ಶೇ 50 ಕೇಂದ್ರ ಸರಕಾರ ,ಶೇ 45 ಎನ್‌ಎಂಪಿಟಿ ಹಾಗೂ ಶೇ 5 ರಾಜ್ಯ ಸರಕಾರ ಅನುದಾನ ನೀಡಲಿದೆ . ನೂತನವಾಗಿ ನಿರ್ಮಾಣವಾಗಿರುವ ಜಟ್ಟಿಯಲ್ಲಿ 350 ಮೀನು ಗಾರಿಕಾ ದೋಣಿಗಳು ನಿಲುಗಡೆಯಾಗಲು ಅವಕಾಶವಿದೆ. ಶಿಲಾನ್ಯಾಸ ಬೆಳಗ್ಗೆ ನಡೆಯಲಿದ್ದು ಬಳಿಕ 10 ಗಂಟೆಗೆ ಎನ್‌ಎಂಂಪಿಟಿ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಈ ಸಮಾರಂಭದಲ್ಲಿ ಬಿಕರ್ನ ಕಟ್ಟೆ ಯಿಂದ ಕಾರ್ಕಳದ ಸಾಣೂರು ವರೆಗಿನ ರಾಷ್ಟ್ರೀಯ ಹೆದ್ದಾರಿ 169ರ ಲ್ಲಿ 45.1 ಕಿ.ಮೀ ದೂರದ ಚಸುಷ್ಪಥ ರಸ್ತೆ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಸಿಟಿ ಬೈಫಾಸ್ ರಸ್ತೆ ಕಾಮಗಾರಿ:- ಮುಲ್ಕಿ-ಕಟೀಲು -ಬಜ್ಪೆ -ಕೈ ಕಂಬ-ತೆಂಕಬೆಳ್ಳೂರು-ಮೆಲ್ಕಾರು-ತೊಕ್ಕೊಟ್ಟು ಸಂಪರ್ಕಿಸುವ 91.20 ಕಿ.ಮೀ ದೂರದ ಬೈಪಾಸ್ ರಸ್ತೆಯ 2,500 ಕೋಟಿ ರೂ.ಕಾಮಗಾರಿಗೆ ಮಂಗಳವಾರ ಶಿಲಾನ್ಯಾಸ ನಡೆಯಲಿದೆ ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.*
ನೂತನ ಕೂಳೂರು ಸೇತುವೆಗೆ ಶಿಲಾನ್ಯಾಸ :- ಕೂಳೂರಿನಲ್ಲಿ ಫಲ್ಗುಣಿ ನದಿಗೆ ಬ್ರಿಟೀಷರ ಕಾಲದಲ್ಲಿ ನಿರ್ಮಾಣವಾದ ಸೇತುವೆ ಹಳೆಯದಾಗಿರುವ ಕಾರಣ 65 ಕೋಟಿ ರೂ ವೆಚ್ಚದೆಲ್ಲಿ ನೂತನ ಸೇತುವೆಯನ್ನು ನಿರ್ಮಿಸಲು ಶಿಲಾನ್ಯಾಸವನ್ನು ಇದೇ ಸಂದರ್ಭದಲ್ಲಿ ನೆರವೇರಿಸಲಾಗುವುದು ಎಂದು ಹೇಳಿದರು.
ರಾಷ್ಟ್ರೀಯ ಹೆದ್ದಾರಿಯವ ವಿವಿಧ ರಸ್ತೆಗಳಿಗೆ ಮರು ಡಾಮರೀಕರಣ
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸುರತ್ಕಲ್ ನಿಂದ ಬಿ.ಸಿ.ರೋಡ್‌ವರೆಗೆ ಸುಮಾರು 24 ಕೋಟಿ ರೂ ವೆಚ್ಚದಲ್ಲಿ ಮರು ಡಾಮರೀಕರಣವಾಗಲಿದೆ.ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಮಾಣಿಯಿಂದ ಸಂಪಾಜೆಯವರೆಗೆ 40.ಕಿ.ಮೀ ಮರು ಡಾಮರೀಕರಣಕ್ಕೆ 20 ಕೋಟಿ ರೂ ಬಿಡುಗಡೆಯಾಗಿದೆ. ಪೂಂಜಾಲ ಕಟ್ಟೆಯಿಂದ ಚಾರ್ಮಾಡಿ ಘಾಟ್‌ವರೆಗಿನ ರಾಷ್ಟ್ರೀಯ ಹೆದ್ದಾರಿ 234ರಲ್ಲಿ ರಲ್ಲಿ ಮರು ಡಾಮರೀಕರಣಕ್ಕಾಗಿ ರೂ 10 ಕೋಟಿ ಬಿಡುಗಡೆಮಾಡಿದೆ.
ಬಿ.ಸಿರೋಡ್ ಪೂಂಜಾಲ್ ಕಟ್ಟೆ ಮರು ಡಾಮರೀಕರಣ ಕಾಮಗಾರಿ 98 ಕೋಟಿ ರೂ ವೆಚ್ಚದಲ್ಲಿ ನಡೆಯುತ್ತಿದೆ. ಕುಲಶೇಖರದಿಂದ ಕಾರ್ಕಳದವರೆಗೆ ಡಾಂಬರೀಕರಣಕ್ಕೆ 12ಕೋಟಿ ರೂ ಬಿಡುಗಡೆ ಮಾಡಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಗುರುಪುರ ಸೇತುವೆ ಕಾಮಗಾರಿಗೆ ಎರಡು ವರ್ಷದೊಳಗೆ ಪೂರ್ಣ
ಗುರುಪುರ ದಲ್ಲಿ 39.4 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಸೇತುವೆ ಕಾಮಗಾರಿ ಎರಡು ವರ್ಷದೊಳಗೆ ಪೂರ್ಣಗೊಳ್ಳಲಿದೆ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಸಾಣೂರು- ಬಿಕರ್ನಕಟ್ಟೆ ನಡುವಿನ ರಾಷ್ಟ್ರೀಯ ಹೆದ್ದಾರಿ 169ರ ಅಗಲೀಕರಣ ಕಾಮಗಾರಿಗೆ ಭೂ ಸ್ವಾಧೀನ ಪ್ರಕ್ರೆಯೆಯಿಂದ ಸ್ವಲ್ಪ ವಿಳಂಬವಾಗಲು ಕಾರಣವಾಗಿದ್ದರೂ ಈಗ ತ್ವರಿತವಾಗಿ ಕಾಮಗಾರಿ ಪೂರ್ಣಗೊಳ್ಳಲು ಕ್ರಮ ಕೈ ಗೊಳ್ಳಲಾಗಿದೆ. ಅಗತ್ಯವಿರುವ ಭೂ ಸ್ವಾಧೀನ ಪ್ರಕ್ರೆಯೆ ಸಮಸ್ಯೆಗಳು ಬಹುತೇಕ ಬಗೆಹರಿದಿವೆ. ಹೊಸದಾಗಿ ಪರಿಷ್ಕರಿಸಲಾದ ಪರಿಹಾರವನ್ನು ಸಂತಸ್ತರಿಗೆ ನೀಡಲಾಗುತ್ತಿದೆ.
ಈ ಯೋಜನೆಯಲ್ಲಿ 4 ಪ್ಲೈ ಓವರ್‌ಗಳು,8 ಕಡೆ ವಾಹನಗಳು ಸಾಗುವ ಅಂಡರ್ ಪಾಸ್‌ಗಳು 6 ಕಡೆ ಮೇಲ್ ಸೇತುವೆಗಳು ಈ ಕಾಮಗಾರಿಗಳಲ್ಲಿ ಒಳಗೊಂಡಿದೆ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಹತ್ತು ವರ್ಷದಲ್ಲಿ ಮಾಡಿದ ಕೆಲಸ ತೃಪ್ತಿ ತಂದಿದೆ
ನಾನು ಕಳೆದ ಹತ್ತು ವರ್ಷದಲ್ಲಿ ಸಂಸದನಾಗಿ ಮಾಡಿರುವ ಕೆಲಸ ತೃಪ್ತಿ ತಂದಿದೆ. ಸುಮಾರು 16,000 ಕೋಟಿ ರೂ ಅನುದಾನ ವಿವಿಧ ಯೋಜನೆಗಳ ಮೂಲಕ ನನ್ನ ಕ್ಷೇತ್ರಕ್ಕೆ ತಂದಿರುವ ತೃಪ್ತಿ ಇದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಲೋಕ ಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಗುರುಪುರದಲ್ಲಿ ಪ್ಲಾಸ್ಟಿಕ್ ಪಾರ್ಕ್,ಕೋಸ್ಟ್ ಗಾರ್ಡ್ ತರಬೇತಿ ಕೇಂದ್ರ, ಎನ್‌ಯಟಿಕೆಯ ಒಳಗಡೆ ಕೇಂದ್ರೀಯ ವಿದ್ಯಾಲಯ ಸ್ಥಾಪನೆ, ಬಂಟ್ವಾಳದಲ್ಲಿ ತೆಂಗು ಪಾಕ್ ಆರಂಭಿಸಲು ಕೇಂದ್ರ ಸರಕಾರ ಒಪ್ಪಿಗೆ ನೀಡಿದೆ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಕೊಣಾಜೆಯಲ್ಲಿ ಐ.ಟಿ ಪಾರ್ಕ್,ಪುತ್ತೂರು-ಸುಳ್ಯ-ಬೆಳ್ತಂಗಡಿಯನ್ನು ಒಳಗೊಂಡಂತೆ ವಿಶೇಷ ಕೃಷಿ ವಲಯ ಹಾಗೂ ಮಂಗಳೂರು ರೈಲ್ವೇ ನಿಲ್ದಾಣವನ್ನು ಪಾಲ್ಘಾಟ್, ಮೈಸೂರು ವಿಭಾಗಕ್ಕೆ ಸೇರಿಸಿ ಪ್ರತ್ಯೆಕ ವಲಯವನ್ನಾಗಿ ಮಾಡುವ ಪ್ರಸ್ತಾವನೆಯನ್ನು ಸರಕಾರದ ಮುಂದೆ ಅನುಮೋದನೆಗಾಗಿ ಸಲ್ಲಿಸಲಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.







