ಸೈನಿಕರ ಶೌರ್ಯವನ್ನು ಮತ ಲೆಕ್ಕಕ್ಕೆ ಬಳಸಿದ ಬಿಎಸ್‍ವೈ ಹೇಳಿಕೆ ಸಮರ್ಥಿಸಿದ ಕೋಟ ಶ್ರೀನಿವಾಸ್ ಪೂಜಾರಿ

ಮಂಗಳೂರು, ಮಾ.4: ಸರ್ಜಿಕಲ್ ಸ್ಟೈಕ್ ಬಗ್ಗೆ ಬಿಎಸ್ ಯಡಿಯೂರಪ್ಪ ಅವರ ವಿವಾದಾತ್ಮಕ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸಮರ್ಥಿಸಿಕೊಂಡಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಯು ಸೇನೆ ದಾಳಿಯಿಂದ ಸಾಮಾನ್ಯವಾಗಿ ನರೇಂದ್ರ ಮೋದಿ ವರ್ಚಸ್ಸು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಗೆ ಲಾಭದಾಯಕವಾಗಲಿದೆ. ಬಿಎಸ್ ವೈ ಹೇಳಿಕೆಯಲ್ಲಿ ದುರುದ್ದೇಶ ಇರಲಿಲ್ಲ. ಯುದ್ದದಿಂದ ನಾವು ಗೆಲ್ಲುವುದಿಲ್ಲ. ಪ್ರಧಾನಿ ನರೇಂದ್ರ ಮೋದಿಯ ಕಠಿಣ ನಿರ್ಧಾರದ ಬಗ್ಗೆ ಬಿಎಸ್‌ವೈ ಹೇಳಿರುವುದು ಸತ್ಯ ಎಂದು ತಿಳಿಸಿದರು.
Next Story





