ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿದ ಸಚಿವ ಝಮೀರ್ ಅಹ್ಮದ್

ಬೆಂಗಳೂರು, ಮಾ.4: ರಾಜ್ಯ ಸರಕಾರ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಿವಿಧ ಯೋಜನೆಗಳಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ರವಿವಾರ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್ ಸೌಲಭ್ಯಗಳನ್ನು ವಿತರಿಸಿದರು.
19 ಫಲಾನುಭವಿಗಳಿಗೆ ಉಚಿತವಾಗಿ ಹೊಲಿಗೆ ಯಂತ್ರಗಳು, 14 ಲ್ಯಾಪ್‌ಟಾಪ್‌ಗಳು, ಆಝಾದ್ ನಗರ ವಾರ್ಡ್‌ನಲ್ಲಿ ಒಂಟಿ ಮನೆ ಯೋಜನೆಯಡಿ 5 ಲಕ್ಷ ರೂ.ಮಂಜೂರಾತಿ ಪತ್ರ, 29 ಮಂದಿ ಫಲಾನುಭವಿಗಳಿಗೆ ಬೈಸಿಕಲ್, 14 ಆಟೋ ರಿಕ್ಷಾಗಳು, ವಿಕಲಚೇತನರಿಗೆ ತ್ರಿಚಕ್ರ ವಾಹನಗಳನ್ನು ಝಮೀರ್ ಅಹ್ಮದ್ ಖಾನ್ ವಿತರಿಸಿದರು.
ಇದಲ್ಲದೇ, ಆಝಾದ್ ನಗರ ವಾರ್ಡ್‌ನಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಬೆಂಗಳೂರು ಒನ್ ಕೇಂದ್ರ, ಸಾರ್ವಜನಿಕ ಶೌಚಾಲಯ, ಉದ್ಯಾನವನವನ್ನು ಝಮೀರ್ ಅಹ್ಮದ್‌ಖಾನ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಶಾಸಕ ಆರ್.ಅಖಂಡ ಶ್ರೀನಿವಾಸಮೂರ್ತಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ.ಬಾವಾ, ಬಿಬಿಎಂಪಿ ಸದಸ್ಯೆ ಸುಜಾತಾ ಡಿ.ಸಿ.ರಮೇಶ್, ಕಾಂಗ್ರೆಸ್ ಮುಖಂಡ ಗೋವಿಂದರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.









