ವೇಶ್ಯಾವಾಟಿಕೆ: ಮೂವರ ಬಂಧನ; ಇಬ್ಬರು ಯುವತಿಯರ ರಕ್ಷಣೆ

ಚಂದ್ರಶೇಖರ್, ಅಶೋಕ, ನಾಸಿರ್
ಮಂಗಳೂರು, ಮಾ.4: ಯುವತಿಯರನ್ನು ಅಕ್ರಮ ಮಾನವ ಕಳ್ಳ ಸಾಗಣೆ ಮಾಡಿ ವೇಶ್ಯಾವಾಟಿಕೆಗೆ ದಂಧೆ ನಡೆಸುತ್ತಿದ್ದ ಎನ್ನಲಾದ ಆರೋಪದಲ್ಲಿ ವಸತಿಗೃಹವೊಂದಕ್ಕೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಇಬ್ಬರು ಯುವತಿಯರನ್ನು ರಕ್ಷಿಸಿ, ಮೂವರನ್ನು ಬಂಧಿಸಿದ್ದಾರೆ.
ಬಂಟ್ವಾಳದ ಚಂದ್ರಶೇಖರ್ ಯಾನೆ ಚಂದ್ರು (32), ಉಪ್ಪಿನಂಗಡಿಯ ನಾಸಿರ್ (26), ಮಣ್ಣಗುಡ್ಡೆಯ ಅಶೋಕ (24) ಬಂಧಿತ ಆರೋಪಿಗಳು.
ಆರೋಪಿಗಳು ಬಿಜೈ ಸಮೀಪದ ವಸತಿ ಗೃಹವೊಂದರಲ್ಲಿ ಯುವತಿಯರನ್ನು ಮಾನವ ಕಳ್ಳ ಸಾಗಣೆ ನಡೆಸಿ ವೇಶ್ಯಾವಾಟಿಕೆಗೆ ಬಳಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ನಡೆಸಿದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನೊಂದ ಇಬ್ಬರು ಯುವತಿಯರನ್ನು ರಕ್ಷಿಸಿ ಮಹಿಳಾ ಮತ್ತು ಮಕ್ಕಳ ರಕ್ಷಣಾ ಘಟಕಕ್ಕೆ ಒಪ್ಪಿಸಲಾಗಿದೆ.
ಆರೋಪಿಗಳ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಕಾರ್ಯಾಚರಣೆಯಲ್ಲಿ ಸಿಸಿಬಿ ಇನ್ಸ್ಪೆಕ್ಟರ್ ಶಾಂತರಾಮ್, ಉರ್ವ ಇನ್ಸ್ಪೆಕ್ಟರ್ ಮುಹಮ್ಮದ್ ಶರೀಫ್ ಮತ್ತು ಸಿಬ್ಬಂದಿ ಇದ್ದರು.
Next Story





