ಹಣದ ವಿಚಾರಕ್ಕೆ ವ್ಯಕ್ತಿಗೆ ಹಲ್ಲೆ; ದೂರು
ಮಂಗಳೂರು, ಮಾ.4: ನಗರದ ಮಠದಕಣಿ ನಿವಾಸಿ ಗಣೇಶ್ ಶೆಣೈ ಎಂಬವರಿಗೆ ಹಣದ ವಿಚಾರಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಘಟನೆ ಸೋಮವಾರ ನಡೆದಿದೆ. ಸುಧಾಕರ್ ಹಲ್ಲೆ ನಡೆಸಿದ ಆರೋಪಿ.
ಸೋಮವಾರ ಗಣೇಶ್ ಶೆಣೈಯವರು ಮಠದಕಣಿಯ ತನ್ನ ಮನೆಯಲ್ಲಿ ಮಲಗಿರುವ ಸಂದರ್ಭ ನಗರದ ಟ್ರಾವೆಲ್ಸ್ ಕಂಪೆನಿಯೊಂದರ ಜನರಲ್ ಮ್ಯಾನೇಜರ್ ಸುಧಾಕರ್ ಎಂಬಾತ ಬಂದು ಶೆಣೈ ಅವರನ್ನು ಹೊರಗೆ ಕರೆದು ‘ನೀನು ನನ್ನ ಕಂಪೆನಿಗೆ ಕೊಡುವ ಹಣವನ್ನು ನೀಡದೆ ಮೋಸ ಮಾಡಿದ್ದಿ. ಅದನ್ನು ಕೊಡಬೇಕು’ ಎಂದು ಹೇಳಿ ಅವಾಚ್ಯ ಶಬ್ದದಿಂದ ನಿಂದಿಸಿ ರಾಡ್‌ನಿಂದ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಬರ್ಕೆ ಠಾಣೆಯಲ್ಲಿ ದೂರು ದಾಖಲಾಗಿದೆ.
Next Story





