ಶಾರ್ಟ್ ಸಕ್ಯೂರ್ಟ್: ಸಂಪೂರ್ಣ ಸುಟ್ಟು ಕರಕಲಾದ ಮನೆ
ಮಂಗಳೂರು, ಮಾ.4: ನಗರದ ಜಪ್ಪುಪಟ್ಣದಲ್ಲಿ ರವಿವಾರ ತಡರಾತ್ರಿ ಸಂಭವಿಸಿದ ಬೆಂಕಿ ದುರಂತದಲ್ಲಿ ಸಂತೋಷ್ ಅವರ ಹೆಂಚಿನ ಮನೆ ಸಂಪೂರ್ಣ ಸುಟ್ಟು ಹೋಗಿದ್ದು, ಸಕಾಲದಲ್ಲಿ ಎಚ್ಚರವಾಗಿದ್ದರಿಂದ ಯಾರಿಗೂ ಅಪಾಯ ಸಂಭವಿಸಿಲ್ಲ.
ಮನೆಯ ಛಾವಣಿ ಪಕ್ಕಾಸು, ರೀಪು, ಬಟ್ಟೆ ಬರೆ, ರ್ನಿಚರ್ ಇತ್ಯಾದಿ ಪೂರ್ತಿ ಬೆಂಕಿಗಾಹುತಿಯಾಗಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಗ್ನಿ ಶಾಮಕ ದಳದ ಎರಡು ವಾಹನಗಳು ಸಕಾಲದಲ್ಲಿ ಬಂದು ಬೆಂಕಿ ನಂದಿಸಿದ ಕಾರಣ ಪಕ್ಕದ ಮನೆಗಳಿಗೆ ಬೆಂಕಿ ವ್ಯಾಪಿಸುವುದು ತಪ್ಪಿ ಹೋಗಿದೆ.
ಸಂತೋಷ್ ಮತ್ತು ಅವರ ಪತ್ನಿ ಹಾಗೂ ಮಗು ಮಲಗಿದ್ದು, ತಡ ರಾತ್ರಿ 12 ಗಂಟೆ ವೇಳೆಗೆ ಮನೆಯ ಮೂಲೆಯಲ್ಲಿ ಶಬ್ದ ಕೇಳಿಸಿತ್ತು. ಕೂಡಲೇ ಎಚ್ಚತ್ತು ನೋಡಿದಾಗ ಮನೆಯ ಒಂದು ಭಾಗಕ್ಕೆ ಬೆಂಕಿ ತಗುಲಿರುವುದು ಕಂಡು ಬಂದಿತ್ತು. ಪಕ್ಕದ ಮನೆಯವರನ್ನು ಎಬ್ಬಿಸಿ ಪೊಲೀಸ್ ಮತ್ತು ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ಪಾಂಡೇಶ್ವರ ಪೊಲೀಸರು, ಅಗ್ನಿ ಶಾಮಕ ದಳದ ಸಿಬಂದಿ ಹಾಗೂ ಸ್ಥಳೀಯರು ಸೇರಿ ಬೆಂಕಿ ನಂದಿಸಿದರು.
ವಿದ್ಯುತ್ ಶಾರ್ಟ್ ಸಕ್ಯೂರ್ಟ್ನಿಂದ ಈ ಘಟನೆ ಸಂಭವಿಸಿರಬಹುದೆಂದು ಶಂಕೆ ವ್ಯಕ್ತಪಡಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.







