ಪಿಎಂಎಸ್‌ವೈಎಂ ಯೋಜನೆ ನಾಳೆ ಲೋಕಾರ್ಪಣೆ
ಉಡುಪಿ, ಮಾ.4: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾಳೆ ಬೆಳಗ್ಗೆ ಹೊಸದಿಲ್ಲಿಯಲ್ಲಿ ಲೋಕಾರ್ಪಣೆಗೊಳಿಸುವ ಅಸಂಘಟಿತ ಕಾರ್ಮಿಕರಿಗಾಗಿ ಜಾರಿಗೊಳ್ಳುವ ನೂತನ ಪಿಂಚಣಿ ಯೋಜನೆ ಪ್ರಧಾನಮಂತ್ರಿ ಶ್ರಮ ಯೋಗಿ ಮಾನ್-ಧನ್ ಯೋಜನಾ (ಪಿಎಂಎಸ್‌ವೈಎಂ) ಕಾರ್ಯಕ್ರಮವನ್ನು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನೇರಪ್ರಸಾರ ಮಾಡಲಾಗುವುದು ಎಂದು ಪ್ರಾದೇಶಿಕ ಪಿಎಫ್ ಆಯುಕ್ತ ಡಾ.ಅಜಯ್‌ಸಿಂಗ್ ಚೌಧುರಿ ತಿಳಿಸಿದ್ದಾರೆ.
ನಾಳೆ ಬೆಳಗ್ಗೆ 10:30ಕ್ಕೆ ಜಿಲ್ಲಾ ಮಟ್ಟದ ಕಾರ್ಯಕ್ರಮವಿದ್ದು, 11:30ರಿಂದ ಅಪರಾಹ್ನ 1:30ರವರೆಗೆ ಹೊಸದಿಲ್ಲಿಯಿಂದ ದೂರದರ್ಶನದ ನೇರ ರಿಲೇ ಕಾರ್ಯಕ್ರಮವಿದೆ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





