ನಿಯಂತ್ರಣ ರೇಖೆ ಸಮೀಪ ಭಾರತ-ಪಾಕ್ ಸೇನೆ ಮಧ್ಯೆ ಘರ್ಷಣೆ
ಜಮ್ಮು,ಮಾ.5: ಜಮ್ಮು ಮತ್ತು ಕಾಶ್ಮೀರದ ನೌಶೇರ ಸೆಕ್ಟರ್ ನಲ್ಲಿ ಮಂಗಳವಾರ ಭಾರತ ಮತ್ತು ಪಾಕಿಸ್ತಾನ ಸೇನೆ ಘರ್ಷಣೆಕ್ಕಿಳಿದ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ.
ನಿಯಂತ್ರಣ ರೇಖೆಯ ಸಮೀಪ ಬೆಳಿಗ್ಗೆ 11.30ರ ಸುಮಾರಿಗೆ ಪಾಕ್ ಸೇನೆ ಅಪ್ರಚೋದಿತ ಮೋರ್ಟಾರ್ ಶೆಲ್ಲಿಂಗ್ ಮತ್ತು ಗುಂಡಿನ ದಾಳಿ ನಡೆಸಿದೆ ಎಂದು ಭದ್ರತಾ ಸಚಿವಾಲಯದ ವಕ್ತಾರ ಲೆ.ಕ.ದೇವೇಂದ್ರ ಆನಂದ್ ತಿಳಿಸಿದ್ದಾರೆ.
ಪಾಕ್ ದಾಳಿಗೆ ಭಾರತೀಯ ಸೇನೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು ಪ್ರತಿದಾಳಿ ನಡೆಸಿದೆ ಎಂದು ಅವರು ತಿಳಿಸಿದ್ದಾರೆ.
ಸೋಮವಾರವೂ ನೌಶೇರ ಮತ್ತು ಪೂಂಛ್ ಜಿಲ್ಲೆಯಲ್ಲಿ ಎರಡು ದೇಶಗಳ ಸೇನೆ ಪರಸ್ಪರ ಹೋರಾಟಕ್ಕಿಳಿದಿತ್ತು. ನಿಯಂತ್ರಣ ರೇಖೆಯ ಸಮೀಪ ಐದು ಕಿ.ಮೀ ವ್ಯಾಪ್ತಿಯಲ್ಲಿರುವ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Next Story