ಗುಹ್ಯ ತರಬಿಯ್ಯತ್ತುಲ್ ಇಸ್ಲಾಂ ಸಮಿತಿಯ ಮಹಲ್ ಖಾಝಿಯಾಗಿ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಆಯ್ಕೆ

ಸಿದ್ದಾಪುರ,ಮಾ.5: ಗುಹ್ಯ ತರಬಿಯ್ಯತ್ತುಲ್ ಇಸ್ಲಾಂ ಸಮಿತಿಯ ಮಹಲ್ ಖಾಝಿಯಾಗಿ ಅಖಿಲ ಭಾರತ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಅವರನ್ನು ಆಯ್ಕೆ ಮಾಡಿರುವುದಾಗಿ ಸಮಿತಿ ಕಾರ್ಯದರ್ಶಿ ಕೆ.ಎಂ ಅಶ್ರಫ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹುಂಡಿ ಜುಮಾ ಮಸೀದಿ ಉದ್ಘಾಟನೆ ಸಮಾರಂಭದ ಸಂದರ್ಭ ಜಿಲ್ಲಾ ನಾಯಿಬ್ ಖಾಝಿ ಮುಹಮ್ಮದ್ ಮುಸ್ಲಿಯಾರ್ ಎಡಪ್ಪಾಲ ಹಾಗೂ ಗುಹ್ಯ ಜಮಾಅತ್ ಖತೀಬ್ ಶಿಹಾಬ್ ಲತೀಫಿ ಅವರ ಸಮ್ಮುಖದಲ್ಲಿ ಬೈಅತ್ ಮಾಡಲಾಗಿದ್ದು, ಉಸ್ತಾದ್ ಅವರು ಬೈಅತ್ ಸ್ವೀಕರಿಸಿರುವುದಾಗಿ ತಿಳಿಸಿದರು.
ಗೋಷ್ಟಿಯಲ್ಲಿ ಗುಹ್ಯ ತರಬಿಯ್ಯತ್ತುಲ್ ಇಸ್ಲಾಂ ಸಮಿತಿ ಅಧ್ಯಕ್ಷ ಸಿ.ಎಂ ಮುಸ್ತಫಾ, ಜಂಟಿ ಕಾರ್ಯದರ್ಶಿ ಕೆ.ಎಂ ಸಲೀಂ, ಸದಸ್ಯ ಇ.ಕೆ ಖಾದರ್ ಮತ್ತು ಸಿ.ಎ ಅಶ್ರಫ್ ಇದ್ದರು.

Next Story





