ಮಾ.14: ಮಾಣಿ ದಾರುಲ್ ಇರ್ಶಾದ್ ನಲ್ಲಿ ಅಜ್ಮೀರ್ ಮೌಲಿದ್

ಉಪ್ಪಿನಂಗಡಿ,ಮಾ.6: ದಾರುಲ್ ಇರ್ಶಾದ್ ಎಜ್ಯುಕೇಶನಲ್ ಸೆಂಟರ್ ಮಾಣಿ ಇದರ ವತಿಯಿಂದ ವರ್ಷಂಪ್ರತಿ ನಡೆಯುವ ಅಜ್ಮೀರ್ ಮೌಲಿದ್, ಏರ್ವಾಡಿ ಶುಹದಾ ನೇರ್ಚೆ, ಖತಮುಲ್ ಕುರ್'ಆನ್ ಮತ ಪ್ರಭಾಷಣ ಕಾರ್ಯಕ್ರಮವು ಮಾ.14 ಗುರುವಾರ ಬೆಳಗ್ಗೆ 7 ಗಂಟೆಗೆ ಮಿತ್ತೂರು ಕೆಜಿಎನ್ ವಿದ್ಯಾಲಯದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಶೈಖುನಾ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಖುರ್ರತುಸ್ಸಾದಾತ್ ಫಝಲ್ ಕೋಯಮ್ಮ ತಂಙಳ್ ಕೂರ, ಝೈನುಲ್ ಉಲಮಾ ಮಾಣಿ ಉಸ್ತಾದ್, ಶರಫುಲ್ ಉಲಮಾ ಮಂಜನಾಡಿ ಅಬ್ಬಾಸ್ ಉಸ್ತಾದ್ ಸಹಿತ ಹಲವಾರು ಉಲಮಾ ಉಮರಾ ಸಾದಾತುಗಳು ಭಾಗವಹಿಸಲಿದ್ದಾರೆ ಎಂದು ಪ್ರಚಾರ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
Next Story





