ಹಫೀಝ್ ಸಯೀದ್ ಸಂಘಟನೆಗಳ ಸೊತ್ತುಗಳ ಮುಟ್ಟುಗೋಲು
ಇಸ್ಲಾಮಾಬಾದ್, ಮಾ. 6: ನಿಷೇಧಿತ ಸಂಘಟನೆಗಳ ವಿರುದ್ಧದ ದಮನ ಕಾರ್ಯಾಚರಣೆಯನ್ನು ಪಾಕಿಸ್ತಾನ ಬುಧವಾರ ತೀವ್ರಗೊಳಿಸಿದೆ. ಮುಂಬೈ ಭಯೋತ್ಪಾದಕ ದಾಳಿಯ ಸೂತ್ರಧಾರ ಹಫೀಝ್ ಸಯೀದ್‌ನ ಜಮಾಅತುದಅವಾ ಮತ್ತು ಅದರ ಘಟಕ ಫಲಾಹೆ ಇನ್ಸಾನಿಯತ್ ಫೌಂಡೇಶನ್‌ಗೆ ಸೇರಿದ ಹಲವಾರು ಧಾರ್ಮಿಕ ಶಾಲೆಗಳು ಮತ್ತು ಸೊತ್ತುಗಳನ್ನು ವಶಕ್ಕೆ ತೆಗೆದುಕೊಂಡಿದೆ.
ನಿಷೇಧಿತ ಸಂಘಟನೆಗಳನ್ನು ಪಾಕಿಸ್ತಾನವು ಮಂಗಳವಾರ ನಿಷೇಧಿತ ಸಂಘಟನೆಗಳ ಪಟ್ಟಿಗೆ ಔಪಚಾರಿಕವಾಗಿ ಸೇರಿಸಿದ ಬಳಿಕ ಈ ಭಯೋತ್ಪಾದಕ ಸಂಘಟನೆಗಳ ವಸ್ತುಗಳನ್ನು ಮುಟ್ಟುಗೋಲು ಹಾಕಲಾಗಿದೆ.
1997ರ ಭಯೋತ್ಪಾದನೆ ನಿಗ್ರಹ ಕಾಯ್ದೆಯಡಿಯಲ್ಲಿ, ಆಂತರಿಕ ಸಚಿವಾಲಯವು ನಿಷೇಧಿತ ಸಂಘಟನೆಗಳ ಪಟ್ಟಿಗೆ ಸುಮಾರು 70 ಸಂಘಟನೆಗಳನ್ನು ಈವರೆಗೆ ಸೇರಿಸಿದೆ. ಅದರಲ್ಲಿ ಹಫೀಝ್ ಸಯೀದ್‌ನ ಈ ಸಂಘಟನೆಗಳೂ ಸೇರಿವೆ.
ಜಮಾಅತುದಅವಾ ಮತ್ತು ಫಲಾಹೆ ಇನ್ಸಾನಿಯತ್ ಫೌಂಡೇಶನ್‌ಗೆ ಸೇರಿದ ಕನಿಷ್ಠ ಎರಡು ಧಾರ್ಮಿಕ ಶಾಲೆಗಳು ಮತ್ತು ಸೊತ್ತುಗಳನ್ನು ಮಂಗಳವಾರ ಮುಟ್ಟುಗೋಲು ಹಾಕಲಾಗಿತ್ತು ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.
Next Story