ಸುಖೋಯಿ-30 ಹೊಡೆದುರುಳಿಸಿರುವುದಾಗಿ ಪಾಕ್ ಪ್ರತಿಪಾದನೆ ಸುಳ್ಳು ಎಂದ ರಕ್ಷಣಾ ಸಚಿವಾಲಯ

ಹೊಸದಿಲ್ಲಿ, ಮಾ. 6: ಕಳೆದ ವಾರ ಪಾಕಿಸ್ತಾನ ಹಾಗೂ ಭಾರತದ ನಡುವೆ ನಡೆದ ವೈಮಾನಿಕ ಸಂಘರ್ಷದಲ್ಲಿ ಭಾರತದ ವಾಯು ಪಡೆಯ ಸುಖೋಯಿ-30 ಜೆಟ್ ವಿಮಾನವನ್ನು ಹೊಡೆದುರುಳಿಸಲಾಗಿದೆ ಎಂಬ ಪಾಕಿಸ್ತಾನದ ಪ್ರತಿಪಾದನೆಯನ್ನು ಮಂಗಳವಾರ ತಿರಸ್ಕರಿಸಿರುವ ರಕ್ಷಣಾ ಸಚಿವಾಲಯ, ಪಾಕಿಸ್ತಾನ ತನ್ನ ಯುದ್ಧ ವಿಮಾನ ನಾಶವಾಗಿರುವುದನ್ನು ಮರೆಮಾಚಲು ಈ ಪ್ರತಿಪಾದನೆ ಮಾಡುತ್ತಿದೆ ಎಂದು ಹೇಳಿದೆ.
ದೇಶದ ವಾಯು ಪ್ರದೇಶ ಪ್ರವೇಶಿಸುವ ಪಾಕಿಸ್ತಾನದ ಜೆಟ್‌ಗಳ ಬಗ್ಗೆ ಪರಿಶೀಲಿಸಲು ನಿಯೋಜಿಸಲಾಗಿದ್ದ ಸುಖೋಯಿ-30 ವಿಮಾನಗಳು ಸುರಕ್ಷಿತವಾಗಿ ಹಿಂದಿರುಗಿವೆ ಎಂದು ಸಚಿವಾಲಯ ತಿಳಿಸಿದೆ. ಸಂಘರ್ಷದಲ್ಲಿ ತನ್ನ ಯುದ್ಧ ವಿಮಾನ ನಾಶವಾಗಿರುವುದನ್ನು ಮರೆ ಮಾಚಲು ಸುಖೋಯ್-30ನ್ನು ತಾನು ಹೊಡೆದುರುಳಿಸಿರುವುದಾಗಿ 2 ಪಾಕಿಸ್ತಾನ ಸುಳ್ಳು ಪ್ರತಿಪಾದನೆ ಮಾಡುತ್ತಿದೆ ಎಂದು ಅದು ಹೇಳಿದೆ.
ವೈಮಾನಿಕ ಸಂಘರ್ಷದ ಸಂದರ್ಭ ಪಾಕಿಸ್ತಾನದ ವಾಯು ಪಡೆಯ ಎಫ್-17 ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಬಳಿಕ ಭಾರತದ ಮಿಗ್-21 ಪತನಗೊಂಡಿತ್ತು. ಆದರೆ, ಪಾಕಿಸ್ತಾನ ತಾನು ಭಾರತದ ಎರಡು ಯುದ್ಧ ವಿಮಾನಗಳನ್ನು ಹೊಡೆದುರುಳಿಸಿರುವುದಾಗಿ ಹೇಳಿಕೊಂಡಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.





