ಆ್ಯಂಡಿ ಮರ್ರೆ ಭವಿಷ್ಯದಲ್ಲಿ ಕಣಕ್ಕಿಳಿಯುವುದು ಅನುಮಾನ

ಲಂಡನ್, ಮಾ.6: ಎರಡನೇ ಬಾರಿ ಹಿಪ್ ಸರ್ಜರಿಗೆ ಒಳಗಾದ ಬಳಿಕ ತಾನು ನೋವು ಮುಕ್ತನಾಗಿದ್ದು ಆದರೆ ಪ್ರಮುಖ ಟೆನಿಸ್ ಟೂರ್ನಿಗಳಲ್ಲಿ ಸ್ಪರ್ಧಿಸುವ ಕುರಿತು ಖಚಿತತೆ ಇಲ್ಲ ಎಂದು ಇಂಗ್ಲೆಂಡ್‌ನ ಖ್ಯಾತ ಟೆನಿಸ್ ಪಟು ಆ್ಯಂಡಿ ಮರ್ರೆ ತಿಳಿಸಿದ್ದಾರೆ.
2017ರಲ್ಲಿ ಪ್ರಥಮ ಬಾರಿಗೆ ಕಾಣಿಸಿಕೊಂಡಿದ್ದ ನೋವಿನಿಂದ ಹೊರಬರಲು 31 ವರ್ಷದ ಮರ್ರೆ ಜನವರಿಯಲ್ಲಿ ಸರ್ಜರಿಗೆ ಒಳಗಾಗಿದ್ದರು.
‘‘ನಾನು ಆಟವನ್ನು ಮುಂದು ವರಿಸಲು ಬಯಸುತ್ತೇನೆ.ಇದನ್ನು ನಾನು ಆಸ್ಟ್ರೇಲಿಯದಲ್ಲೇ ಹೇಳಿದ್ದೇನೆ. ಆದರೆ ಆಡುವುದಕ್ಕೆ ಸಾಧ್ಯವಾಗುತ್ತದೆಯೇ ಎಂಬುದರ ಬಗ್ಗೆ ಖಚಿತವಾಗಿಲ್ಲ’’ ಎಂದು ಲಂಡನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಹೇಳಿದರು.
ಹಲವು ದಿನಗಳಿಂದ ಬಳಲುತ್ತಿದ್ದ ನಾನು ಸದ್ಯ ನೋವಿನಿಂದ ಮುಕ್ತವಾಗಿದ್ದೇನೆ. ನಿಧಾನವಾಗಿಯಾದರೂ ಗುಣಮುಖವಾಗುತ್ತಿದ್ದು, ಸಾಧ್ಯವಾದರೆ ಸ್ಪರ್ಧಿಸುತ್ತೇನೆ ಎಂದು ಅವರು ಸ್ಪಷ್ಟ್ಟಪಡಿಸಿದ್ದಾರೆ.
Next Story





