ಎ.12ರಿಂದ ಅಮೆರಿಕದ ವೃತ್ತಿಪರ ಬಾಕ್ಸಿಂಗ್‌ನಲ್ಲಿ ಕಾಣಿಸಿಕೊಳ್ಳಲಿರುವ ವಿಜೇಂದರ್‌ಸಿಂಗ್
ಹೊಸದಿಲ್ಲಿ, ಮಾ.6: ಭಾರತದ ಬಾಕ್ಸಿಂಗ್ ತಾರೆ ವಿಜೇಂದರ್ ಸಿಂಗ್ ಹೊಸ ಸವಾಲಿಗೆ ಸಜ್ಜಾಗಲಿದ್ದಾರೆ. ಎ.12ರಿಂದ ಆರಂಭವಾಗಲಿರುವ ಅಮೆರಿಕನ್ ವೃತ್ತಿಪರ ಬಾಕ್ಸಿಂಗ್ ಸರ್ಕ್ಯೂಟ್‌ನಲ್ಲಿ ಅವರು ಸ್ಪರ್ಧಿಸಲಿದ್ದಾರೆ. ಮೊದಲ ಪಂದ್ಯದಲ್ಲಿ ಅವರ ಎದುರಾಳಿ ಯಾರೆಂದು ಇನ್ನೂ ನಿರ್ಧಾರವಾಗಿಲ್ಲ. ಸದ್ಯ ವಿಜೇಂದರ್ ಅವರು ಹಾಲ್ ಆಫ್ ಫೇಮ್ ವಿಜೇತ ಅಮೆರಿಕದ ಮಾಜಿ ಬಾಕ್ಸಿಂಗ್ ಪಟು ಹಾಗೂ ತರಬೇತುದಾರ ಫ್ರೆಡ್ಡಿ ರೋಚ್ ಅವರ ಗರಡಿಯಲ್ಲಿ ಪಳಗುತ್ತಿದ್ದಾರೆ. ಪ್ರೋ ಕೆರಿಯರ್‌ನ 10 ಪಂದ್ಯಗಳಲ್ಲಿ ಅಜೇಯ ದಾಖಲೆ ಕಾಪಾಡಿಕೊಂಡಿರುವ ವಿಜೇಂದರ್, ವ್ಯಾಸಿಲಿ ಲಾಮಾಚೆಂಕೊ ಅಂತೋನಿ ಕ್ರೊಲ್ಲಾದ ಸ್ಟಾಪ್ಲಸ್ ಕೇಂದ್ರದಲ್ಲಿ ಅಮೆರಿಕನ್ ವೃತ್ತಿಪರ ಬಾಕ್ಸಿಂಗ್‌ಗೆ ಪಾದಾರ್ಪಣೆ ಮಾಡಲಿದ್ದಾರೆ.
ಇದು 8 ಸುತ್ತಿನ ಸ್ಪರ್ಧೆಯಾಗಿದ್ದು ಅವರ ಎದುರಾಳಿಯನ್ನು ಬಳಿಕ ನಿರ್ಧರಿಸಲಾಗುತ್ತದೆ. ರೋಚ್ ತಮ್ಮ 32 ವರ್ಷದ ಬಾಕ್ಸಿಂಗ್ ವೃತ್ತಿಜೀವನದಲ್ಲಿ ಸಾರ್ವಕಾಲಿಕ ಶ್ರೇಷ್ಠ ಬಾಕ್ಸಿಂಗ್ ತರಬೇತುದಾರ ಎನಿಸಿಕೊಂಡಿದ್ದಾರೆ.
Next Story





