ರಿಕ್ಷಾ ಢಿಕ್ಕಿ: ರಸ್ತೆ ದಾಟುತ್ತಿದ್ದ ವೃದ್ಧೆ ಮೃತ್ಯು
ಉಳ್ಳಾಲ, ಮಾ. 7: ರಾ.ಹೆ 66ರ ತೊಕ್ಕೊಟ್ಟು ಕಾಪಿಕಾಡುವಿನಲ್ಲಿ ರಸ್ತೆ ದಾಟುತ್ತಿದ್ದ ವೃದ್ಧೆಯೋರ್ವರಿಗೆ ಆಟೋರಿಕ್ಷಾ ಢಿಕ್ಕಿ ಹೊಡೆದ ಪರಿಣಾಮ ವೃದ್ದೆ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ಮೃತರನ್ನು ಕುಂಪಲ ಮೂರುಕಟ್ಟ ನಿವಾಸಿ ಬೆನ್ನಿ ಡಿಸೋಜ(76) ಎಂದು ಗುರುತಿಸಲಾಗಿದೆ.
ಗುರುವಾರ ಬೆಳಗ್ಗೆ ಅವರು ಕಾಪಿಕಾಡುವಿನಲ್ಲಿ ಹೆದ್ದಾರಿ ದಾಟುತ್ತಿದ್ದ ವೇಳೆ ಕೋಟೆಕಾರಿನಿಂದ ತೊಕ್ಕೊಟ್ಟಿಗೆ ವೇಗದಲ್ಲಿ ದಾವಿಸುತ್ತಿದ್ದ ಆಟೋರಿಕ್ಷಾ ಢಿಕ್ಕಿ ಹೊಡೆದಿದ್ದು ಅಪಘಾತವೆಸಗಿದ ರಿಕ್ಷಾ ಮತ್ತು ಚಾಲಕನನ್ನು ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ವಶಕ್ಕೆ ತೆಗೆದು ಪ್ರಕರಣ ದಾಖಲಿಸಿದ್ದಾರೆ.
Next Story





