Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮಂಗಳೂರು ಬಂದರಿನಲ್ಲಿ ‘ಎಂಎಸ್‌ಸಿ...

ಮಂಗಳೂರು ಬಂದರಿನಲ್ಲಿ ‘ಎಂಎಸ್‌ಸಿ ಲಿರಿಕಾ’ ಪ್ರವಾಸಿ ಹಡಗು

ಒಂದಿಡೀ ಐಷಾರಾಮಿ ಊರನ್ನೇ ತನ್ನೊಳಗೆ ಇಟ್ಟುಕೊಂಡಿರುವ ಈ ಬೃಹತ್ ವಿಲಾಸಿ ಹಡಗಿಗೆ ಒಂದು ಸುತ್ತು

ವಾರ್ತಾಭಾರತಿವಾರ್ತಾಭಾರತಿ7 March 2019 6:52 PM IST
share
ಮಂಗಳೂರು ಬಂದರಿನಲ್ಲಿ ‘ಎಂಎಸ್‌ಸಿ ಲಿರಿಕಾ’ ಪ್ರವಾಸಿ ಹಡಗು

ಮಂಗಳೂರು, ಮಾ. 7: ವಿಶ್ವ ಪರ್ಯಟನೆಯ ಜತೆಗೆ ಐಷಾರಾಮಿ ಜೀವನಕ್ಕೆ ಮತ್ತೊಂದು ಹೆಸರು ಪ್ರವಾಸಿ ಹಡಗು. ಹೌದು, ನೀರಿನಲ್ಲಿ ತೇಲುತ್ತಾ ದಿನಗಟ್ಟಲೆ, ತಿಂಗಳುಗಟ್ಟಲೆ ಊರೂರು ಸುತ್ತುತ್ತಾ, ದೇಶಗಳ ನಡುವೆ ಪ್ರಯಾಣ ಬೆಳೆಸುವ ಈ ಹಡಗಿನ ವಿಶ್ವ ಪರ್ಯಟನೆ ನಿಜಕ್ಕೂ ರೋಮಾಂಚಕಾರಿ. 

ಭಾರತ ಸೇರಿದಂತೆ ಗಲ್ಫ್ ರಾಷ್ಟ್ರಗಳಿಗೆ ಪ್ರವಾಸಕ್ಕೆ ಪ್ರಪಂಚದ ಇತರ ಶ್ರೀಮಂತ ರಾಷ್ಟ್ರಗಳ ಪ್ರವಾಸಿಗರ ಬಹುಮುಖ್ಯ ಆಯ್ಕೆ ಪ್ರವಾಸಿ ಹಡಗು. ಐಷಾರಾಮಿ ಜೀವನಕ್ಕೆ ಬೇಕಾದ ಸೌಲಭ್ಯಗಳಿಂದ ಕೂಡಿರುವ ಈ ಪ್ರವಾಸಿ ಹಡಗುಗಳು ಸಾವಿರಾರು ಸಂಖ್ಯೆಯ ಪ್ರವಾಸಿಗರನ್ನು ತನ್ನ ಒಡಲಲ್ಲಿ ತುಂಬಿಸಿಕೊಂಡು ಊರಿಂದೂರಿಗೆ, ದೇಶದಿಂದ ವಿದೇಶಕ್ಕೆ ಸಮುದ್ರದ ನೀರಿನಲ್ಲಿ ಗಡಿಗಳನ್ನು ದಾಟಿ ಪ್ರಯಾಣಿಸುತ್ತಿರುತ್ತದೆ.

ನವ ಮಂಗಳೂರು ಬಂದರು ತೀರಕ್ಕೆ ವರ್ಷದಲ್ಲಿ ನೂರಾರು ಸಂಖ್ಯೆಯ ಪ್ರವಾಸಿ ಹಡಗುಗಳ ಆಗಮನವಾಗುತ್ತದೆ. ವಿದೇಶಿ ಪ್ರವಾಸಿಗರು ಈ ಪ್ರವಾಸಿ ಹಡಗುಗಳ ಮೂಲಕ ಭಾರತದ ವಿವಿಧ ಬಂದರು ಪ್ರದೇಶಗಳ ಮೂಲಕ ಇಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಇಲ್ಲಿನ ಸೌಂದರ್ಯವನ್ನು ಕಣ್ತುಂಬಿಸಿಕೊಂಡು ಹೋಗುತ್ತಾರೆ. ಅಂತಹ ಒಂದು ಐಷಾರಾಮಿ ಸೌಲಭ್ಯಗಳಿಂದ ಕೂಡಿದ ಪ್ರವಾಸಿ ಹಡಗೊಂದು ಗುರುವಾರ ಮಂಗಳೂರಿನ ಕಡಲ ತೀರಕ್ಕೆ ಪ್ರವಾಸಿಗರನ್ನು ಹೊತ್ತು ಬಂದಿತ್ತು.

ಅದುವೇ ‘ಎಂಎಸ್‌ಸಿ ಲಿರಿಕಾ’ ಪ್ರವಾಸಿ ಹಡಗು.

ಇಟಲಿ ಮೂಲದ ‘ಎಂಎಸ್‌ಸಿ ಲಿರಿಕಾ’ ಪ್ರವಾಸಿ ಹಡಗು ಇಂದು ಮಂಗಳೂರು ನವಮಂಗಳೂರು ಬಂದರಲ್ಲಿ ಲಂಗರು ಹಾಕಿತ್ತು. ಬೆಳಗ್ಗೆ ಎನ್‌ಎಂಪಿಟಿಗೆ ಆಗಮಿಸಿದ ಹಡಗು ಸಂಜೆಯವರೆಗೆ ಬಂದರಿನಲ್ಲಿದ್ದು, ಬಳಿಕ ಹಡಗಿನಲ್ಲಿದ್ದ ಪ್ರವಾಸಿಗರೊಂದಿಗೆ ಗೋವಾಕ್ಕೆ ಪ್ರಯಾಣ ಬೆಳೆಸಿತು.

1831 ವಿದೇಶಿ ಪ್ರವಾಸಿಗರೊಂದಿಗೆ ಮಸ್ಕತ್‌ನಿಂದ ಮಂಗಳೂರು ಬಂದರಿಗೆ ಆಗಮಿಸಿದ ಎಂಎಸ್‌ಸಿ ಲಿರಿಕಾ, ಇಲ್ಲಿಂದ ಸಂಜೆಯ ವೇಳೆಗೆ ಗೋವಾಕ್ಕೆ ಪ್ರಯಾಣ ಬೆಳೆಸಿದೆ. ಮಂಗಳೂರು ಬಂದರಿನಲ್ಲಿ ಬೆಳಗ್ಗಿನಿಂದ ಸಂಜೆಯವರೆಗೆ ಲಂಗರು ಹಾಕಿದ್ದ ವೇಳೆ ಹಡಗಿನಲ್ಲಿದ್ದ ಕೆಲ ಪ್ರವಾಸಿಗರು ಇಲ್ಲಿನ ಖಾಸಗಿ ವಾಹನಗಳ ಮೂಲಕ ಸ್ಥಳೀಯ ದೇವಸ್ಥಾನಗಳಿಗೆ ಭೇಟಿ ನೀಡಿದರು. ಹಡಗಿನಲ್ಲಿದ್ದ ಮತ್ತೆ ಕೆಲವು ಪ್ರವಾಸಿಗರು ಹಡಗಿನ ತೆರೆದ ಮೇಲ್ಛಾವಣಿಯಲ್ಲಿನ ಸ್ವಿಮ್ಮಿಂಗ್ ಪೂಲ್‌ನಲ್ಲಿ ನೀರಿನಲ್ಲಿ ಆಟವಾಡುತ್ತಾ, ಬಿಸಿಲಿಗೆ ಮೈಯೊಡ್ಡುತ್ತಾ, ಪುಸ್ತಕಗಳನ್ನು ಓದುತ್ತಾ ಮಂಗಳೂರಿನ ಕಡಲ ತೀರದ ಸೌಂದರ್ಯವನ್ನು ಕಣ್ತುಂಬಿಕೊಂಡರು.

2100 ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿರುವ ಎಂಎಸ್‌ಸಿ ಲಿರಿಕಾ, ಮಂಗಳೂರು ಬಂದರಿನಿಂದ ಗೋವಾ ಮೂಲಕ ಮುಂಬೈ ಬಂದರಿಗೆ ಭೇಟಿ ನೀಡಿ ಬಳಿಕ ಮಸ್ಕತ್‌ಗೆ ಹಿಂತಿರುಗಿ ಅಲ್ಲಿಂದ ತನ್ನ ಮುಂದಿನ ಪ್ರಯಾಣ ಬೆಳೆಸಲಿದೆ.

ಹಡಗಿನೊಳಗೊಂದು ವಿಸ್ಮಯದ ಲೋಕ !

ಪ್ರವಾಸಿ ಹಡಗಿನೊಳಗೆ ಹೊಕ್ಕಂತೆ ಹೊಸ ವಿಸ್ಮಯದ ಲೋಕವೊಂದು ತೆರೆದಂತೆ ಭಾಸವಾಗುತ್ತದೆ. ಐಷಾರಾಮಿ ಹೊಟೇಲ್, ರೆಸ್ಟೋರೆಂಟ್, ಮಾಲ್‌ಗಳಲ್ಲಿ ಕಾಣ ಸಿಗುವ ವಿಶಾಲವಾದ ಲಾಂಜ್‌ಗಳು, ಕ್ರೀಡೆ ಮತ್ತು ಜಿಮ್ ಕೊಠಡಿಗಳು, ಸ್ವಿಮ್ಮಿಂಗ್ ಪೂಲ್, ಮಸಾಜ್ ಕೊಠಡಿಗಳು, ಶಾಪಿಂಗ್, ಬೇಕರಿ, ಕಾಫಿ ಸೆಂಟರ್ ಹೀಗೆ ಐಷಾರಾಮಿ ಜೀವನಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳೂ ಒಂದರ ನಂತರ ಒಂದರಂತೆ ತೆರೆದುಕೊಳ್ಳುತ್ತಾ ಸಾಗುತ್ತದೆ.

ಬೃಹತ್ತಾದ ಆ ಹಡಗಿನೊಳಗೆ ನಾವಿದ್ದೇವೆ ಅನ್ನುವುದಕ್ಕಿಂತಲೂ ಆ ಹಡಗೇ ಒಂದು ಭೂಮಿಯ ಮೇಲಿನ ಐಷಾರಾಮಿ ಕಟ್ಟಡದಂತೆ ಭಾಸವಾಗುತ್ತದೆ.
ಹಡಗಿನ ತೆರೆದ ಮೇಲ್ಛಾವಣಿಯಲ್ಲಿ ಸಮುದ್ರದ ಸೌಂದರ್ಯ ವೀಕ್ಷಣೆಯ ಜತೆಗೆ ಸ್ವಿಮ್ಮಿಂಗ್ ಪೂಲ್, ಅಮ್ಯೂಸ್‌ಮೆಂಟ್ ಪಾರ್ಕ್, ಆರಾಮದಾಯಕ ಆಸನಗಳು, ತಿಂಡಿ ತಿನಿಸುಗಳ ಮಾಲ್‌ಗಳು ಎಲ್ಲವೂ ಲಭ್ಯ.

ಒತ್ತಡದ ದೈನಂದಿನ ಬದುಕಿನ ನಡುವೆ, ಕೆಲ ದಿನ, ತಿಂಗಳು ಕಾಲ ನೀರಿನಲ್ಲಿ ತೇಲುತ್ತಾ ಸಾಗುವ ಈ ವಿಶ್ವ ಪರ್ಯಟನೆಗೆ ಈ ಪ್ರವಾಸಿ ಹಡಗು ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸುತ್ತದೆ. ಇಷ್ಟು ಮಾತ್ರವಲ್ಲದೆ, ಬಹುತೇಕವಾಗಿ ವಿದೇಶಿ ಸಿಬ್ಬಂದಿಗಳ ನಗುಮೊಗದ, ಉತ್ಸಾಹದ ನುಡಿಗಳ ಸ್ವಾಗತ, ಆತಿಥ್ಯವೂ ಹಡಗಿನಲ್ಲಿ ಲಭ್ಯ.

ಹೆಜ್ಜೆ ಹೆಜ್ಜೆಗೂ ಪರಿಶೀಲನೆ, ತಪಾಸಣೆ !

ಎಂಎಸ್‌ಸಿ ಲಿರಿಕಾ ಹಡಗು ಕೆಲ ಗಂಟೆಗಳ ಕಾಲ ಪಣಂಬೂರಿನ ಎನ್‌ಎಂಪಿಟಿಯಲ್ಲಿ ಲಂಗರು ಹಾಕಿದ್ದ ಸಂದರ್ಭ ಎಂಎಸ್‌ಸಿ ಸಂಸ್ಥೆಯು ಈ ಪ್ರವಾಸಿ ಹಡಗಿನ ವೀಕ್ಷಣೆಗೆ ಪಾಸ್ ವ್ಯವಸ್ಥೆಯ ಮೂಲಕ ಅವಕಾಶ ಕಲ್ಪಿಸಿತ್ತು. ಕೆಲ ದಿನಗಳ ಮುಂಚಿತವಾಗಿಯೇ ಗುರುತು ಪತ್ರದ ಮೂಲಕ ವೀಕ್ಷಣೆಗೆ ಪ್ರವೇಶವನ್ನು ಕಾಯ್ದಿರಿಸಿಕೊಳ್ಳಲಾಗಿತ್ತು. ವೀಕ್ಷಕರಿಗೆ ಮಾತ್ರವಲ್ಲದೆ, ಹಡಗಿನ ಪ್ರವಾಸಿಗರಿಗೂ ಪಣಂಬೂರಿನ ಎನ್‌ಎಂಪಿಟಿ ಪ್ರವೇಶ ದ್ವಾರದಿಂದ ಹಿಡಿದು ಹಡಗಿನ ಪ್ರವೇಶ ದ್ವಾರದವರೆಗೂ ನಾಲ್ಕು ಹಂತಗಳಲ್ಲಿ ತಪಾಸಣೆ, ಪರಿಶೀಲನೆಯ ಮೂಲಕವೇ ಒಳಗೆ ಪ್ರವೇಶ ಹಾಗೂ ನಿರ್ಗಮನಕ್ಕೆ ಅವಕಾಶ.

ವಿಶ್ವ ಪರ್ಯಟನೆಯ ಪ್ರವಾಸಿ ಹಡಗು ಯಾನ ಸಂಸ್ಥೆಗಳಲ್ಲಿ ಒಂದಾಗಿರುವ ಎಂಎಸ್‌ಸಿ 16 ಐಷಾರಾಮಿ ಪ್ರವಾಸಿ ಹಡಗುಗಳನ್ನು ಹೊಂದಿದೆ. ಆರು ದಿನಗಳ ವಿದೇಶಿ ಪ್ರಯಾಣದ ಸಣ್ಣ ಹಡಗಿನಿಂದ ಹಿಡಿದು, ಒಂದು ಖಂಡದಿಂದ ಮತ್ತೊಂದು ಖಂಡ ಹಾಗೂ ವಿಶ್ವ ಪರ್ಯಟನೆಯ ಬೃಹತ್ ಹಡಗುಗಳನ್ನು ಸಂಸ್ಥೆ ಹೊಂದಿದೆ. ಹೊಸ ಸೇರ್ಪಡೆಯಾಗಿ 5000ಕ್ಕೂ ಅಧಿಕ ಪ್ರವಾಸಿಗರನ್ನು ಹೊತ್ತೊಯ್ಯುವ ಸಾಮರ್ಥ್ಯದ ಎಂಎಸ್‌ಸಿ ಬೆಲಿಸಿಮಾ, ಎಂಎಸ್‌ಸಿ ಗ್ರಾಂಡಿಯೋಸಿಯಾ ಎಂಬ ಬೃಹತ್ ಪ್ರವಾಸಿ ಹಡಗುಗಳು ಸೇರ್ಪಡೆಯಾಗಿವೆ.

- ರಶ್ಮಿ ಅಹುಜಾ, ವಾಣಿಜ್ಯ ಸಂಯೋಜಕಿ, ಎಂಎಸ್‌ಸಿ ಕ್ರೂಸ್

share
ವಾರ್ತಾಭಾರತಿ
ವಾರ್ತಾಭಾರತಿ
Next Story
X