ಪಿಯುಸಿ ಪರೀಕ್ಷೆ: ಉಡುಪಿ ಜಿಲ್ಲೆಯಲ್ಲಿ 115 ಮಂದಿ ಗೈರು
ಉಡುಪಿ, ಮಾ.7: ಜಿಲ್ಲೆಯ ಮೂರು ತಾಲೂಕುಗಳ 27 ಪರೀಕ್ಷಾ ಕೇಂದ್ರಗಳಲ್ಲಿ ನಡೆಯುತ್ತಿರುವ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗುರುವಾರ ನಡೆದ ಮೂರು ವಿಷಯಗಳ ಪರೀಕ್ಷೆಗೆ ಉಡುಪಿ ಜಿಲ್ಲೆಯಲ್ಲಿ ಒಟ್ಟು 115 ಮಂದಿ ಗೈರುಹಾಜರಾಗಿದ್ದಾರೆ.
ಗಣಿತ ಪರೀಕ್ಷೆಗೆ ಒಟ್ಟು 5096 ಮಂದಿ ಹೆಸರು ನೊಂದಾಯಿಸಿಕೊಂಡಿದ್ದರೆ, ಇವರಲ್ಲಿ 5063 ಮಂದಿ ಪರೀಕ್ಷೆಗೆ ಹಾಜರಾಗಿ 33 ಮಂದಿ ಗೈರಾಗಿದ್ದರು. ಅರ್ಥಶಾಸ್ತ್ರದ ಹೊಸ ಸಿಲೆಬಸ್‌ಗೆ ಹೆಸರು ನೊಂದಾಯಿಸಿಕೊಂಡ 7644 ಮಂದಿಯಲ್ಲಿ 7594 ಮಂದಿ ಪರೀಕ್ಷೆ ಬರೆದು 50ಮಂದಿ ಗೈರುಹಾಜರಾದರು. ಅದೇ ರೀತಿ ಅರ್ಥಶಾಸ್ತ್ರದ ಹಳೆ ಸಿಲೆಬಸ್‌ಗೆ ಹೆಸರು ನೊಂದಾಯಿಸಿದ 97 ಮಂದಿಯಲ್ಲಿ 65 ಮಂದಿ ಪರೀಕ್ಷೆ ಬರೆದು 33 ಮಂದಿ ಗೈರುಹಾಜರಾಗಿದ್ದಾರೆ ಎಂದು ಡಿಡಿಪಿಯು ಕಚೇರಿ ಮೂಲಗಳು ತಿಳಿಸಿವೆ.
Next Story





