ಡೆಮಾಕ್ರಟಿಕ್ ಅಭ್ಯರ್ಥಿಗಳ ಚರ್ಚೆ ‘ಫಾಕ್ಸ್ ನ್ಯೂಸ್’ಗೆ ಇಲ್ಲ

ವಾಶಿಂಗ್ಟನ್, ಮಾ. 7: 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ವೇಳೆ, ತನ್ನ ಯಾವುದೇ ಅಭ್ಯರ್ಥಿಗಳ ರಾಜಕೀಯ ಚರ್ಚೆಗಳನ್ನು ಏರ್ಪಡಿಸಲು ‘ಫಾಕ್ಸ್ ನ್ಯೂಸ್’ ಸುದ್ದಿ ವಾಹಿನಿಗೆ ಅವಕಾಶ ನೀಡುವುದಿಲ್ಲ ಎಂದು ಡೆಮಾಕ್ರಟಿಕ್ ರಾಷ್ಟ್ರೀಯ ಸಮಿತಿ ಬುಧವಾರ ಹೇಳಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಈ ಸುದ್ದಿ ಚಾನೆಲ್‌ನ ನಂಟಿನ ಬಗ್ಗೆ ಈ ವಾರ ಪ್ರಕಟಗೊಂಡ ವರದಿಯ ಹಿನ್ನೆಲೆಯಲ್ಲಿ ಅದು ಈ ಕ್ರಮ ತೆಗೆದುಕೊಂಡಿದೆ.
‘‘ಅಧ್ಯಕ್ಷ ಟ್ರಂಪ್, ಅವರ ಆಡಳಿತ ಮತ್ತು ಫಾಕ್ಸ್ ನ್ಯೂಸ್ ನಡುವೆ ಅನುಚಿತ ಸಂಬಂಧವಿದೆ ಎಂಬ ಬಗ್ಗೆ ‘ನ್ಯೂಯಾರ್ಕರ್’ ಪತ್ರಿಕೆಯಲ್ಲಿ ಇತ್ತೀಚೆಗೆ ವರದಿಯೊಂದು ಪ್ರಕಟವಾಗಿದೆ. ಹಾಗಾಗಿ, ನಮ್ಮ ಅಭ್ಯರ್ಥಿಗಳ ಪರವಾಗಿ ನ್ಯಾಯೋಚಿತ ಹಾಗೂ ತಟಸ್ಥ ಚರ್ಚೆಗಳನ್ನು ಏರ್ಪಡಿಸುವ ಸ್ಥಿತಿಯಲ್ಲಿ ಚಾನೆಲ್ ಇಲ್ಲ ಎಂಬ ನಿರ್ಧಾರಕ್ಕೆ ನಾನು ಬಂದಿದ್ದೇನೆ’’ ಎಂದು ಸಮಿತಿಯ ಅಧ್ಯಕ್ಷ ಟಾಮ್ ಪೆರೆಝ್ ‘ರಾಯ್ಟರ್ಸ್’ಗೆ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
Next Story





