ಮಂಗಳೂರು: ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ
ಪೊಳಲಿ ರಾಜರಾಜೇಶ್ವರಿ ದೇವಸ್ಥಾನಕ್ಕೆ ಹೊರೆಕಾಣಿಕೆ ಮೆರವಣಿಗೆ
ಮಂಗಳೂರು, ಮಾ.7: ಪೊಳಲಿ ರಾಜರಾಜೇಶ್ವರಿ ದೇವಸ್ಥಾನಕ್ಕೆ ಮಂಗಳೂರು ಮಹಾನಗರದಿಂದ ಮಾ.8ರಂದು ವೈಭವದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದ್ದು, ಇದರಿಂದ ಸಂಚಾರದಲ್ಲಿ ಸ್ವಲ್ಪ ವ್ಯತ್ಯಯವಾಗುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಧ್ಯಾಹ್ನ 2ಗಂಟೆಗೆ ಸುರತ್ಕಲ್ ಮಹಾಲಿಂಗೇಶ್ವರದಿಂದ ಮೆರವಣಿಗೆ ಹೊರಟು ಕಾವೂರು, ಬೊಂದೇಲ್, ಪಚ್ಚನಾಡಿ, ವಾಮಂಜೂರು ಜಂಕ್ಷನ್ ತಲುಪಲಿದೆ. 2ಗಂಟೆಗೆ ಮಂಗಳಾದೇವಿ, ಶರವು ದೇವಸ್ಥಾನದಿಂದ ಹೊರಟ ಮೆರವಣಿಗೆ ಕದ್ರಿ ಕ್ರೀಡಾಂಗಣಕ್ಕೆ ತಲುಪಿ ಅಲ್ಲಿಂದ ನಂತೂರು, ಕುಲಶೇಖರ, ವಾಮಂಜೂರು ಜಂಕ್ಷನ್ ತಲುಪಲಿದೆ. ಉಳ್ಳಾಲ, ತೊಕ್ಕೊಟ್ಟು ಕಡೆಯಿಂದ ಬರುವ ವಾಹನಗಳು ಈ ಮೆರವಣಿಗೆ ಸೇರಲಿದೆ.
ಮೂರು ಕಡೆಯಿಂದ ಆಗಮಿಸುವ ಹೊರೆಕಾಣಿಕೆ ಮೆರವಣಿಗೆ ವಾಮಂಜೂರು ಜಂಕ್ಷನ್‌ನಲ್ಲಿ ಸೇರಿ ಬಳಿಕ ಕೈಕಂಬ, ಅಡ್ಡೂರು ಮಾರ್ಗವಾಗಿ ಪೊಳಲಿಗೆ ತೆರಳಲಿದೆ. ಒಟ್ಟು 500ಕ್ಕೂ ಅಧಿಕ ವಾಹನಗಳು ಮೆರವಣಿಗೆಯಲ್ಲಿ ಭಾಗವಹಿಸಲಿದ್ದು, ಮೆರವಣಿಗೆ ಸಾಗುವ ರಸ್ತೆಯಲ್ಲಿ ವಾಹನ ಸಂಚಾರ ವ್ಯತ್ಯಯವಾಗಲಿದೆ ಎಂದು ಕಮಿಷನರ್ ಕಚೇರಿ ಪ್ರಕಟನೆ ತಿಳಿಸಿದೆ.





