ಜಾಗದ ಮಾಲಕರೆಂದು ನಂಬಿಸಿ ಲಕ್ಷಾಂತರ ರೂ. ವಂಚನೆ: ದೂರು
ಮಂಗಳೂರು, ಮಾ.7: ಜಾಗದ ಮಾಲಕರೆಂದು ನಂಬಿಸಿ ಜಿಪಿಎದಲ್ಲಿ ಸಹಿ ಮಾಡಿ ಲಕ್ಷಾಂತರ ರೂ. ವಂಚಿಸಿದ ಬಗ್ಗೆ ಕಾವೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ಮೋಹನ್ ಮತ್ತು ಸುನಂದ ಭಂಡಾರಿ ಎಂಬವರು ಮರಕಡ ಗ್ರಾಮದ ಸೈಟ್ ಒಂದರ ಅಸಲಿ ಮಾಲಕರಾದ ಮಹಾಬಲ ಆನಂದ್ ಶೆಟ್ಟಿ ಮತ್ತು ಸುನಂದ ಶೆಟ್ಟಿ ತಾವೇ ಎಂದು ನಂಬಿಸಿ, ಮೂರನೇ ಆರೋಪಿ ಹೇಮಂತ್ ಆಳ್ವ ಮೂಲಕ ವ್ಯಕ್ತಿಯೊಬ್ಬರಿಗೆ ಮಾರಾಟಕ್ಕೆ ಯತ್ನಿಸಿದ್ದರು. ಇದಕ್ಕಾಗಿ ವಕೀಲರ ಸಮಕ್ಷಮದಲ್ಲಿ ಪವರ್ ಆಫ್ ಅಟಾರ್ನಿ ಮಾಡಿ, ಆಪಾದಿತರು ಜಿಪಿಎದಲ್ಲಿ ಸಹಿ ಮಾಡಿ ಜಿ.ಮೊಯ್ದೀನ್ ಎಂಬವರಿಂದ 15 ಲಕ್ಷ ರೂ. ಪಡೆದು ವಂಚನೆ ಮಾಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ವಂಚನೆಗೊಳಗಾದ ಮೊಯ್ದೀನ್ ಕಾವೂರು ಠಾಣೆಗೆ ದೂರು ನೀಡಿದ್ದಾರೆ.
Next Story





