ಪಿ.ಆರ್. ಕಾರ್ಡ್ ಕಡ್ಡಾಯ ಹಾಜರಾತಿಗೆ ಅವಧಿ ವಿಸ್ತರಣೆ
ಮಂಗಳೂರು, ಮಾ.7: ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ 32 ಗ್ರಾಮಗಳಲ್ಲಿ ಆಸ್ತಿಗಳ ಕ್ರಮ/ಪರಭಾರೆ/ದಾನ ಇತ್ಯದಿ ವಹಿವಾಟು ಗಳ ನೋಂದಣಿ ವೇಳೆ ತಯಾರಿಸಲ್ಪಡುವ ದಾಸ್ತಾವೇಜಿನಲ್ಲಿ ನಗರ ಆಸ್ತಿ ಮಾಲಕತ್ವದ ಹಕ್ಕು ದಾಖಲೆಗಳ ಯೋಜನೆ (ಯುಪಿಒಆರ್) ಪಿ.ಆರ್. ಕಾರ್ಡ್ ಕಡ್ಡಾಯವಾಗಿ ಹಾಜರುಪಡಿಸುವುದನ್ನು ಮತ್ತು ಯು.ಪಿ.ಒ.ಆರ್. ಸಂಖ್ಯೆಯನ್ನು ನಮೂದಿಸುವುದಕ್ಕೆ ಅವಧಿ ವಿಸ್ತರಿಸಲಾಗಿದೆ.
ಅಂದರೆ ಮೇ 15ರಿಂದ ನಗರದಲ್ಲಿ ಯು.ಪಿ.ಒ.ಆರ್ ನಡಿ ನೋಂದಣಿ ಉದ್ದೇಶಕ್ಕೆ ಪ್ರಾಪರ್ಟಿ ಕಾರ್ಡ್‌ನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು ಎಂದು ದ.ಕ. ಜಿಲ್ಲಾಧಿಕಾರಿಯ ಪ್ರಕಟನೆ ತಿಳಿಸಿದೆ.
Next Story





