ಲಕ್ನೋ ಜನತೆಗೆ ಧನ್ಯವಾದ ತಿಳಿಸಿದ ಕಾಶ್ಮೀರಿ ವ್ಯಾಪಾರಿಗಳು
ಸಂಘಪರಿವಾರ ಕಾರ್ಯಕರ್ತರಿಂದ ಹಲ್ಲೆ ಪ್ರಕರಣ

ಲಕ್ನೋ, ಮಾ. 7: ಉತ್ತರಪ್ರದೇಶದ ರಾಜಧಾನಿ ಲಕ್ನೋದಲ್ಲಿ ಸಂಘಪರಿವಾರದಿಂದ ಹಲ್ಲೆಗೊಳಗಾದ ಇಬ್ಬರು ಕಾಶ್ಮೀರಿ ಒಣಹಣ್ಣು ವ್ಯಾಪಾರಸ್ಥರ ಪಾಲಿಗೆ ಲಕ್ನೊ ಜನತೆ ಆಪತ್ಬಾಂದವರಂತೆ ನೆರವಾಗಿದ್ದಾರೆ. ಲಕ್ನೊದ ದಾಲಿಗಂಜ್‌ನಲ್ಲಿ ಇಬ್ಬರು ಕಾಶ್ಮೀರಿ ವ್ಯಾಪಾರಿಗಳಿಗೆ ಸಂಘಪರಿವಾರದ ಕಾರ್ಯಕರ್ತರು ಬುಧವಾರ ದೊಣ್ಣೆಯಿಂದ ಹಲ್ಲೆ ನಡೆಸಿದ್ದರು ಹಾಗೂ ಬೆದರಿಕೆ ಒಡ್ಡಿದ್ದರು. ಆದರೆ, ಈ ಸಂದರ್ಭ ನಗರದ ನಿವಾಸಿಗಳು ಆಗಮಿಸಿ ಅವರನ್ನು ರಕ್ಷಿಸಿದರು.
ಸಂಘ ಪರಿವಾರದ ಕಾರ್ಯಕರ್ತರು ತಮ್ಮ ಮೇಲೆ ಹಲ್ಲೆ ನಡೆಸುತ್ತಿದ್ದಾಗ, ಬೆದರಿಕೆ ಒಡ್ಡುತ್ತಿದ್ದಾಗ ಧಾವಿಸಿ ಬಂದು ರಕ್ಷಿಸಿದ ಅಲ್ಲಿನ ಜನತೆಗೆ ಕಾಶ್ಮೀರಿ ವ್ಯಾಪಾರಿಗಳಾದ ಮುಹಮ್ಮದ್ ಅಫ್ಝಕ್ ಹಾಗೂ ಅಬ್ದುಲ್ ಸಲೀಂ ಕೃತಜ್ಞತೆ ಸಲ್ಲಿಸಿದ್ದಾರೆ. ‘‘ಅವರು ಒಳ್ಳೆಯವರು. ಅವರು ನಮ್ಮನ್ನು ರಕ್ಷಿಸಿದರು. ಅವರು ಪೊಲೀಸರು ಬರುವುದಕ್ಕಿಂತ ಮೊದಲೇ ಬಂದರು. ನಮ್ಮನ್ನು ವಿಚಾರಣೆ ನಡೆಸುವ ವಿಚಾರ ಪೊಲೀಸರಿಗೆ ಬಿಟ್ಟದ್ದು” ಎಂದು ಅವರು ಸಂಘಪರಿವಾರದ ಕಾರ್ಯಕರ್ತರಲ್ಲಿ ಹೇಳಿದರು ಎಂದು ನಾಕ್ ಹೇಳಿದ್ದಾರೆ.
Next Story





