ಮಾ.10ರಂದು ಉಡುಪಿ ಜಿಲ್ಲೆಯ 77740 ಮಕ್ಕಳಿಗೆ ಪೋಲಿಯೋ ಲಸಿಕೆ
ಉಡುಪಿ, ಮಾ.8: ಉಡುಪಿ ಜಿಲ್ಲೆಯಲ್ಲಿ 0-5ವರ್ಷದೊಳಗಿನ ಒಟ್ಟು 77,740 ಮಕ್ಕಳಿಗೆ ಮಾ.10ರಂದು ಜಿಲ್ಲೆಯ 657 ಕೇಂದ್ರಗಳಲ್ಲಿ ಪೊಲಿಯೋ ಲಸಿಕೆಯನ್ನು ನೀಡಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಹಾಗೂ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯ ಪಡೆ ಸಮಿತಿ ಜಿಲ್ಲಾಧ್ಯಕ್ಷೆ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶ 63,630 ಹಾಗೂ ನಗರ ಪ್ರದೇಶ 14,110 ಐದು ವರ್ಷದೊಳಗಿನ ಮಕ್ಕಳಿದ್ದು, ಗ್ರಾಮೀಣ ಪ್ರದೇಶದಲ್ಲಿ 569, ನಗರದಲ್ಲಿ 88 ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಅಲ್ಲದೆ 9 ಮೊಬೈಲ್ ಟೀಮ್ ಮತ್ತು 32 ಟ್ರಾನ್ಸಿಟ್ ಬೂತ್‌ಗಳನ್ನು ತೆರಯಲಾಗುವುದು. ಅದೇ ರೀತಿ 2774 ಲಸಿಕಾ ಸ್ವಯಂ ಸೇವಕರು, 137 ಮೇಲ್ವಿಚಾರಕರನ್ನು ನೇಮಕ ಮಾಡಲಾಗು ವುದು. ಇದರಲ್ಲಿ ಆರೋಗ್ಯ ಇಲಾಖೆಯ ಎಲ್ಲ ಅಧಿಕಾರಿಗಳು, ವೈದ್ಯಾಧಿಕಾರಿ ಗಳು ಮ್ತು ಸಿಬ್ಬಂದಿಗಳು ಭಾಗವಹಿಸಲಿದ್ದಾರೆ.
ಗ್ರಾಮಾಂತರ ಪ್ರದೇಶದಲ್ಲಿ ಮಾ.11 ಮತ್ತು 12 ಹಾಗೂ ನಗರ ಪ್ರದೇಶ ದಲ್ಲಿ ಮಾ.11ರಿಂದ 13ರವರೆಗೆ ಸ್ವಯಂ ಸೇವಕರು ಮನೆಮನೆ ಭೇಟಿ ನೀಡಿ ಎಲ್ಲ ಮಕ್ಕಳಿಗೂ ಪೋಲಿಯೊ ಹನಿ ಹಾಕಿಸಿದ ಬಗ್ಗೆ ಖಚಿತಪಡಿಸಿಕೊಳ್ಳಲಿದ್ದಾರೆ. ಪೋಲಿಯೋ ಲಸಿಕಾ ಹಾಕುವ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಬೀಡಿನ ಗುಡ್ಡೆಯ ಅಂಗನನಾಡಿ ಕೇಂದ್ರದಲ್ಲಿ ಮಾ.10ರಂದು ಬೆಳಗ್ಗೆ 8ಗಂಟೆಗೆ ಆಯೋಜಿಸಲಾಗಿದೆ.
ಉಡುಪಿ ಜಿಲ್ಲಾ ಆರೋಗ್ಯ, ಪಂಚಾಯತ್‌ರಾಜ್, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ಕಂದಾಯ ಇಲಾಖೆ ಮತ್ತು ಇತರ ಇಲಾಖೆ, ರೋಟರಿ ಹಾಗೂ ಇತರ ಸ್ವಯಂ ಸೇವಾ ಸಂಸ್ಥೆಗಳ ಸಹಕಾರ ಮತ್ತು ಜಿಲ್ಲಾಡಳಿತದ ಮಾರ್ಗದರ್ಶನದೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







