ಕಲ್ಯಾಣಪುರ: ರಸ್ತೆ ಸುರಕ್ಷತೆ ಜಾಗೃತಿಗಾಗಿ ಸೈಕಲ್ ಜಾಥಾ

ಉಡುಪಿ, ಮಾ.8: ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಆಶ್ರಯದಲ್ಲಿ ರೋಟರಿ ಕ್ಲಬ್ ಕಲ್ಯಾಣಪುರ ಹಾಗೂ ರೋಟರಿ ರಾಯಲ್ ಬ್ರಹ್ಮಾವರ ಹಾಗೂ ಬೈಕ್ ಫಾರ್ಮ್ ಸಂತೆಕಟ್ಟೆ ಇವುಗಳ ಸಹಭಾಗಿತ್ವದಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಸೈಕಲ್ ಜಾಥಾವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.
ಬ್ರಹ್ಮಾವರ ರೋಟರಿ ರಾಯಲ್ ಅಧ್ಯಕ್ಷ ಉಮೇಶ್ ನಾಯಕ್, ಕಲ್ಯಾಣ ಪುರ ರೋಟರಿ ಕ್ಲಬ್ ಅಧ್ಯಕ್ಷ ಬ್ರಾನ್ ಡಿಸೋಜ, ಸುಬ್ಬಣ್ಣ ಪೈ, ಉದಯ್ ಕುಮಾರ್ ಶೆಟ್ಟಿ, ದಿವಾಕರ್, ಕಾಲೇಜಿನ ಪ್ರಾಂಶುಪಾಲ ಡಾ.ವಿನ್ಸೆಂಟ್ ಆಳ್ವ, ಪ್ರೊ.ಜೊಸೆಫ್ ಪೀಟರ್ ಫೆರ್ನಾಂಡಿಸ್, ಪ್ರೊ.ಮೆಲ್ವಿನ್ ರೇಗೋ, ಪ್ರೊ. ಸೋಫಿಯಾ ಡಾಯಸ್, ಡಾ.ಜಯರಾಮ ಶೆಟ್ಟಿಗಾರ್ ಮೊದಲಾದವರು ಉಪಸ್ಥಿತರಿದ್ದರು.
ಬಳಿಕ ಅಧ್ಯಾಪಕರ ಹಾಗೂ ವಿದ್ಯಾರ್ಥಿಗಳ ತಂಡವು ಕಲ್ಯಾಣಪುರ, ಕೆಮ್ಮಣ್ಣು ಮಾರ್ಗವಾಗಿ ಮಲ್ಪೆಬೀಚ್‌ವರೆಗೆ ರಸ್ತೆ ಸುರಕ್ಷತೆ ಜಾಗೃತಿ ಅಭಿಯಾನವನ್ನು ನಡೆಸಿದರು.
Next Story





