ಉಡುಪಿ: ನಗರಸಭೆಯ ತೆರಿಗೆ ಬಾಕಿ ಪಾವತಿಗೆ ಸೂಚನೆ
ಉಡುಪಿ, ಮಾ.8: ಉಡುಪಿ ನಗರಭಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕಟ್ಟಡಗಳ ಹಾಗೂ ಕೃಷಿಯೇತರ ನಿವೇಶನಗಳ ಮಾಲೀಕರು/ ಅನುಬೋಗ ದಾರರು ತಮ್ಮ ಆಸ್ತಿ ತೆರಿಗೆ, ನೀರಿನ ಕರ, ಉದ್ಯಮ ಪರವಾನಿಗೆ ನವೀಕರಣ, ಜಾಹೀರಾತು ತೆರಿಗೆ ಮುಂತಾದ ತೆರಿಗೆಗಳ ಬಾಕಿ ಮತ್ತು 2018-19ನೇ ಸಾಲಿನ ತೆರಿಗೆಯನ್ನು ಮಾ.31ರೊಳಗೆ ಪಾವತಿ ಮಾಡುವಂತೆ ಸೂಚಿಸಲಾಗಿದೆ. ತಪ್ಪಿದ್ದಲ್ಲಿ ಕರ್ನಾಟಕ ಪುರಸಬಾ ಕಾಯ್ದೆಯಂತೆ ವಸೂಲಾತಿಗೆ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನು ನೀಡಲಾಗಿದೆ.
ಆದ್ದರಿಂದ ಎಲ್ಲಾ ತೆರಿಗೆದಾರರು ನಿಗದಿತ ಅವಧಿಯೊಳಗೆ ಮೇಲ್ಕಂಡ ಎಲ್ಲಾ ತೆರಿಗೆಗಳನ್ನು ಪಾವತಿಸಿ, ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭಾ ಪೌರಾಯುಕ್ತ ಆನಂದ ಕಲ್ಲೋಳಿಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





