ಬೆಂಗಳೂರು ನಗರ: ಮಾ.20 ರಂದು ಜಿಲ್ಲಾ ಮಟ್ಟದ ಯುವಜನ ಮೇಳ
ಬೆಂಗಳೂರು, ಮಾ. 8: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಮಟ್ಟದ ಯುವಜನ ಮೇಳವನ್ನು ಮಾ.20ರಂದು ಗುರುನಾನಕ್ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದು, ಮೇಳದಲ್ಲಿ ಭಾಗವಹಿಸಲು ಇಚ್ಛಿಸುವ ಅರ್ಹ ಯುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಯುವ ಮೇಳದಲ್ಲಿ ಭಾವಗೀತೆ, ಗೀಗಿ ಪದ, ಲಾವಣಿ, ಕೋಲಾಟ, ವೀರಗಾಸೆ, ಪುರುವಂತಿಕೆ, ವೀರಭದ್ರ ಕುಣಿತ, ರಂಗಗೀತೆ, ಜಾನಪದ ನೃತ್ಯ, ರಾಗಿ/ಜೋಳ ಬೀಸುವ ಒನಕೆ ಪದ, ಸೋಬಾನೆ ಪದ, ಭಜನೆ, ಜಾನಪದ ಗೀತೆ, ದೊಡ್ಡಾಟ ಮೂಡಲಪಾಯ, ಸಣ್ಣಾಟ, ಯಕ್ಷಗಾನ, ಚರ್ಮವಾದ್ಯ ಮೇಳ, ತಮಟೆ, ಡೋಲು, ಅಲಗೆ, ತಬಲ, ನಾದಸ್ವರ ಚಂಡೆ ಮೃದಂಗ ಮುಂತಾದ ಶಾಸ್ತ್ರೀಯ ವಾದ್ಯ ಸೇರಿದಂತೆ ಏಕಪಾತ್ರಾಭಿನಯ ಪ್ರಕಾರಗಳ ವಿವಿಧ ಸ್ಫರ್ಧೆಗಳನ್ನು ಏರ್ಪಡಿಸಲಾಗಿದೆ.
ಸ್ಪರ್ಧಿಗಳು ಬೆಂಗಳೂರು ನಗರ ಜಿಲ್ಲೆಯವರಾಗಿರಬೇಕು. 15ರಿಂದ 35 ವರ್ಷದ ಒಳಗಿರಬೇಕು, ಪಕ್ಕವಾದ್ಯದವರನ್ನು, ಸಲಕರಣೆ, ವಾದ್ಯಗಳು ಸ್ಪರ್ಧಿಗಳೇ ತರಬೇಕು. ಚಲನಚಿತ್ರ ಗೀತೆಗಳಿಗೆ ಅವಕಾಶವಿಲ್ಲ. ಸ್ಪರ್ಧೆಯಲ್ಲಿ ಭಾಗವಹಿಸುವವರು ಮಾ.20ರ ಬೆಳಗ್ಗೆ 9.30ಕ್ಕೆ ಗುರುನಾನಕ್ ಭವನ ಟ್ಯಾಂಕ್‌ಬಂಡ್ ರಸ್ತೆ, ವಸಂತನಗರ, ಬೆಂಗಳೂರು ಇಲ್ಲಿ ವರದಿ ಮಾಡಿಕೊಳ್ಳಲು ಕೋರಿದೆ.
ವೈಯಕ್ತಿಕ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಹಾಗೂ ಗುಂಪು ಸ್ಫರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ತಂಡ ರಾಜ್ಯ ಮಟ್ಟದಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಹೆಚ್ಚಿನ ವಿವರಗಳಿಗೆ ಕೆ.ಶಶಿಕಲಾ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಅಥವಾ ಮೊಬೈಲ್ ಸಂಖ್ಯೆ-94808 86545ನ್ನು ಸಂಪರ್ಕಿಸಲು ಕೋರಿದೆ.







