ವಿದೇಶಗಳಲ್ಲಿ ದಾಳಿಗೆ ಪಾಕ್ ನೆಲವನ್ನು ಬಳಸಲು ಬಿಡುವುದಿಲ್ಲ: ಇಮ್ರಾನ್
ಇಸ್ಲಾಮಾಬಾದ್, ಮಾ. 8: ವಿದೇಶಗಳಲ್ಲಿ ದಾಳಿ ನಡೆಸುವುದಕ್ಕಾಗಿ ಪಾಕಿಸ್ತಾನದ ನೆಲವನ್ನು ಬಳಸಲು ಯಾವುದೇ ಗುಂಪಿಗೆ ಅವಕಾಶ ನೀಡುವುದಿಲ್ಲ ಎಂದು ಪ್ರಧಾನಿ ಇಮ್ರಾನ್ ಖಾನ್ ಶುಕ್ರವಾರ ಹೇಳಿದ್ದಾರೆ.
ಭಾರತದಲ್ಲಿ ದಾಳಿಗಳನ್ನು ನಡೆಸುತ್ತಿರುವ ಭಯೋತ್ಪಾದಕ ಗುಂಪುಗಳನ್ನು ನಿಗ್ರಹಿಸಲು ಪಾಕಿಸ್ತಾನದ ಮೇಲೆ ಅಂತರ್ರಾಷ್ಟ್ರೀಯ ಒತ್ತಡ ಹೆಚ್ಚುತ್ತಿದ್ದಂತೆಯೇ ಪಾಕ್ ಪ್ರಧಾನಿ ಈ ಮಾತುಗಳನ್ನು ಆಡಿದ್ದಾರೆ.
‘‘ವಿದೇಶಗಳಲ್ಲಿ ನಡೆಸಲಾಗುವ ಯಾವುದೇ ರೀತಿಯ ಭಯೋತ್ಪಾದನೆಗೆ ಪಾಕಿಸ್ತಾನದ ನೆಲವನ್ನು ಬಳಸಲು ಈ ಸರಕಾರ ಅವಕಾಶ ನೀಡುವುದಿಲ್ಲ’’ ಎಂದು ದಕ್ಷಿಣ ಪಾಕಿಸ್ತಾನದಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ಇಮ್ರಾನ್ ಖಾನ್ ಹೇಳಿದರು.
‘‘ದೇವರ ದಯೆಯಿಂದ, ಹೊಸ ಶಕೆಯೊಂದು ಉದಯಿಸುತ್ತಿರುವುದನ್ನು ನೀವು ನೋಡುವಿರಿ’’ ಎಂದರು.
‘‘ಇನ್ನು ನಮ್ಮ ದೇಶದಲ್ಲಿ ಯಾವುದೇ ಭಯೋತ್ಪಾದಕ ಗುಂಪು ಕಾರ್ಯನಿರ್ವಹಿಸಲು ಬಿಡುವುದಿಲ್ಲ’’ ಎಂದು ಅವರು ಘೋಷಿಸಿದರು.
Next Story