ತುಂಬೆ: ಎನ್.ಡಬ್ಲ್ಯೂ.ಎಫ್ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಫರಂಗಿಪೇಟೆ, ಮಾ. 8: ಆಧುನಿಕ ಮಹಿಳೆ ವ್ಯಾಪಾರದ ಸರಕಾಗಿದ್ದು, ಸಮಾಜದ ವಿವಿಧ ಸ್ಥರಗಳಲ್ಲಿ ಶೋಷಣೆಗೊಳಗಾಗುತ್ತಾ ಘನತೆಯನ್ನು ಕಳೆದುಕೊಳ್ಳುತ್ತಿದ್ದಾಳೆ. ಸಮಾಜದಲ್ಲಿ ದಿನನಿತ್ಯ ಶೋಷಣೆಗೊಳಗಾಗುತ್ತಿರುವ ಮಹಿಳೆಯರು ಸ್ವಯಂ ರಕ್ಷಣೆಗಾಗಿ ಮಾನಸಿಕ ದೈಹಿಕವಾದ ತರಬೇತುಗೊಳ್ಳಬೇಕಾಗಿರುವುದು ಇಂದಿನ ಅಗತ್ಯವಾಗಿದೆ ಎಂದು ಎನ್.ಡಬ್ಲ್ಯೂ.ಎಫ್ ರಾಜ್ಯ ಸಮಿತಿ ಸದಸ್ಯೆ ಪರ್ಝಾನ ಮಂಗಳೂರು ಹೇಳಿದರು.
ಅವರು ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನ್ಯಾಷನಲ್ ವಿಮೆನ್ಸ್ ಫ್ರಂಟ್ ಬಂಟ್ವಾಳ ತಾಲೂಕು ಇದರ ವತಿಯಿಂದ 'ಆಗದಿರಲಿ ಸಂತ್ರಸ್ಥರು ಹರಿಯದಿರಲಿ ಕಣ್ಣೀರು' ಎಂಬ ಘೋಷ ವಾಕ್ಯದಲ್ಲಿ ತುಂಬೆಯ ರೆಡ್ ರೋಝ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡುತ್ತಿದ್ದರು.
ಸಭಾ ಅಧ್ಯಕ್ಷತೆಯನ್ನು ಎನ್.ಡಬ್ಲ್ಯೂ.ಎಫ್ ಬಂಟ್ವಾಳ ತಾಲೂಕು ಅಧ್ಯಕ್ಷೆ ಸೆಲಿಕಾ ತುಂಬೆ ವಹಿಸಿದರು, ಮಿಡಿತ ಮಹಿಳಾ ತ್ರೈಮಾಸಿಕ ಮಂಡಳಿ ಸದಸ್ಯೆ ಮುಝಾಹಿದಾ ಕಣ್ಣೂರು, ಸಿ.ಎಫ್.ಐ ರಾಜ್ಯ ಉಪಾಧ್ಯಕ್ಷೆ ಮುರ್ಶಿದಾ ಬಿಸಿರೋಡ್ ಈ ಸಂದರ್ಭದಲ್ಲಿ ಮಾತನಾಡಿದರು.
ತಾಲೂಕು ಕಾರ್ಯದರ್ಶಿ ಆಯಿಶಾ ನವಾಝ್ ತುಂಬೆ ಪ್ರಸ್ತಾವಿಕ ಮಾತನಾಡಿ ಸ್ವಾಗತಿಸಿದರು, ಎಸ್.ವಿ.ಎಸ್ ವಿದ್ಯಾಗಿರಿ ಶಾಲೆ ಬಂಟ್ವಾಳ ವಿದ್ಯಾರ್ಥಿನಿ ಮುಸ್ಕಾನ್, ತೌಹೀದ್ ಆಂಗ್ಲ ಮಾದ್ಯಮ ಶಾಲೆ ಬಂಟ್ವಾಳ ವಿದ್ಯಾರ್ಥಿನಿ ಮುರ್ಶಿದಾ ಆತ್ಮ ಸಂರಕ್ಷಣಾ ಕಲೆ ತೋರಿಸಿಕೊಟ್ಟರು ಮತ್ತು ಮಹಿಳಾ ಪರ ಜಾಗೃತಿ ಮೂಡಿಸುವ ಸಾಕ್ಷ್ಯ ಚಿತ್ರ ಪ್ರದರ್ಶಿಸಲಾಯಿತು. ಸೌರ ಬಿಸಿರೋಡ್ ಸ್ವಾಗತಿಸಿ, ನಸೀಬ ಕುಂಪನಮಜಲ್ ವಂದಿಸಿದರು.










