ವರ್ಷಾಂತ್ಯದಲ್ಲಿ ಎಟಿಪಿ ಅಧ್ಯಕ್ಷ ಸ್ಥಾನ ತ್ಯಜಿಸಲಿರುವ ಕ್ರಿಸ್
ಇಂಡಿಯನ್ ವೆಲ್ಸ್, ಮಾ.8: ಕೆಳ ರ್ಯಾಂಕಿನ ಆಟಗಾರರ ವೇತನ ಹಾಗೂ ಪ್ರವಾಸ ವೇಳಾಪಟ್ಟಿ ಕುರಿತು ಹಲವು ದೂರುಗಳನ್ನು ಎದುರಿಸಿದ್ದ ಹಾಗೂ ತನ್ನ ಅವಧಿಯಲ್ಲಿ ದಾಖಲೆಯ ನಗದು ಬಹುಮಾನವನ್ನು ಪರಿಚಯಿಸಿದ್ದ ಎಟಿಪಿ ಕಾರ್ಯಕಾರಿ ಚೇರ್ಮನ್ ಹಾಗೂ ಅಧ್ಯಕ್ಷ ಕ್ರಿಸ್ ಕೆರ್ಮೊಡ್ 2019ರ ವರ್ಷಾಂತ್ಯದಲ್ಲಿ ತಮ್ಮ ಸ್ಥಾನದಿಂದ ಕೆಳಗಿಳಿಯಲಿದ್ದಾರೆ. ಈ ಋತುವಿನ ಅಂತ್ಯದಲ್ಲಿ ಅವರ ಅಧಿಕಾರಾವಧಿ ಮುಕ್ತಾಯವಾಗಲಿದ್ದು, ಖ್ಯಾತ ಆಟಗಾರರಾದ ರಫೆಲ್ ನಡಾಲ್ ಸೇರಿದಂತೆ ಕೆಲವು ಆಟಗಾರರು 54 ವರ್ಷದ ಬ್ರಿಟನ್ ಅಧಿಕಾರಿಯು ಪದವಿಯಲ್ಲಿ ಉಳಿಯಬೇಕು ಎಂದು ಬಯಸಿದ್ದಾರೆ.
ಆಟಗಾರರ ಸಮಿತಿಯ ಅಧ್ಯಕ್ಷ ಸೇರಿದಂತೆ ಕೆಲವು ಸದಸ್ಯರು ಹಾಗೂ ವಿಶ್ವ ನಂ.1 ಆಟಗಾರ ನೊವಾಕ್ ಜೊಕೊವಿಕ್ ಬದಲಾವಣೆಯನ್ನು ಬಯಸಿದ್ದಾರೆ.
Next Story





