ಹನೂರು: ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ವಿಫಲ; ಜನಪ್ರತಿನಿಧಿಗಳ ವಿರುದ್ಧ ರೈತ ಸಂಘ ಆಕ್ರೋಶ
ಅನಿರ್ದಿಷ್ಟಾವಧಿ ಮುಷ್ಕರಕ್ಕೆ ನಿರ್ಧಾರ

ಹನೂರು,ಮಾ.9: ತಾಲೂಕಿನ ಮಲೆಮಹದೇಶ್ವರಬೆಟ್ಟದ ಸುತ್ತ ಮತ್ತಲಿರುವ ಕಾಡಂಚಿನ ಗ್ರಾಮಗಳ ಜನತೆಗೆ ಮೂಲಭೂತ ಸೌಕರ್ಯಗಳನ್ನು ವಿಫಲರಾಗಿದ್ದಾರೆಂದು ಆರೋಪಿಸಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ಪೊರಕೆ ಚಳುವಳಿ ಮತ್ತು ಖಾಲಿ ಬಿಂದಿಗೆ ಪ್ರತಿಭಟನೆ ಸೇರಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ರಾಜ್ಯ ರೈತ ಸಂಘ ತೀರ್ಮಾನಿಸಿದೆ.
ಹನೂರು ಪಟ್ಟಣದ ಆರ್‍ಎಂಸಿಯಲ್ಲಿ ಶನಿವಾರ ಕರೆಯಲಾಗಿದ್ದ ಪತ್ರಿಕಾಗೊಷ್ಠಿಯಲ್ಲಿ ರೈತ ಮುಖಂಡ ಚಗಂಡಿ ಕರಿಯಪ್ಪ ಮಾತನಾಡಿ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ, ಶಾಸಕ ನರೇಂದ್ರ, ಜಿಲ್ಲಾಧಿಕಾರಿ ಕಾವೇರಿ ಮತ್ತು ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳ ನೇತೃತ್ವದಲ್ಲಿ ಕಳೆದ ತಿಂಗಳು ನಡೆದ ಸಭೆಯಲ್ಲಿ ಕಾಡಂಚಿನ ಗ್ರಾಮಗಳ ಮೂಲ ಭೂತ ಸೌಕರ್ಯಗಳನ್ನು ಒದಗಿಸಲು ರೈತರು ನೀಡಿದ ದೂರಿನನ್ವಯ 15 ದಿನದೊಳಗೆ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದ್ದರು. ಆದರೆ ಮೆದಗಣೆ, ಇಂಡಿಗನತ್ತ ಸೇರಿ ಇನ್ನಿತರ ಗ್ರಾಮಗಳಿಗೆ ಕುಡಿಯುವ ನೀರನ್ನು ಒದಗಿಸಲು ವಿಫಲರಾಗಿದ್ದರೆ. ಮೆದಗಾಣೆ ಜನತೆ ಮಲೈಮಹದೇಶ್ವರ ಬೆಟ್ಟದ ಅಂತರಗಂಗೆಯಿಂದ ಬರುವ ಕಲುಷಿತ ನೀರನ್ನು ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲ ಕಾಡಂಚಿನ ಗ್ರಾಮಗಳಿಗೆ ತೆರಳಲು ಸರಿಯಾದ ರಸ್ತೆಯಿಲ್ಲ. ಇದನ್ನು ಖಂಡಿಸಿ ಮಾ.14 ರಂದು ಮಲೈಮಹದೇಶ್ವರಬೆಟ್ಟದ ಗ್ರಾಮ ಪಂಚಾಯತ್ ಮುಂಭಾಗ ಪೊರಕೆ ಚಳುವಳಿ, ಖಾಲಿ ಬಿಂದಿಗೆ ಪ್ರತಿಭಟನೆ ಹಾಗೂ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಮೆದಗಾಣೆಯ ಮಾದಯ್ಯ, ಆರೋಗ್ಯರಾಜ್ ಮುತ್ತಯ್ಯ, ಜಗದೀಶ್, ದೊಡ್ಡೇಗೌಡ, ಮಾದಯ್ಯ ಸೇರಿದಂತೆ ಹಲವರು ಹಾಜರಿದ್ದರು.





