Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಕನ್ನಡದಲ್ಲಿ ರವೀಶ್ ಮಾತು

ಕನ್ನಡದಲ್ಲಿ ರವೀಶ್ ಮಾತು

ಬಸವರಾಜು ದೇಸಿಬಸವರಾಜು ದೇಸಿ9 March 2019 6:17 PM IST
share
ಕನ್ನಡದಲ್ಲಿ ರವೀಶ್ ಮಾತು

ಮಹಾಭಾರತದಲ್ಲಿ ಒಂದು ಸನ್ನಿವೇಶ ಹೀಗಿದೆ - ಕುರುಕ್ಷೇತ್ರದ ಯುದ್ಧ ಮುಗಿದಿರುತ್ತದೆ. ಚಕ್ರವರ್ತಿಯಾಗಿ ಧರ್ಮರಾಯ ಅಧಿಕಾರಗ್ರಹಣಕ್ಕೆ ಹೋಗುತ್ತಿರುತ್ತಾನೆ. ಇಕ್ಕೆಲಗಳಲ್ಲಿ ಕಿಕ್ಕಿರಿದ ಜನಸ್ತೋಮ. ಮುಗಿಲು ಮುಟ್ಟುವ ಸಂಭ್ರಮ, ಸಡಗರದ ಜಯಘೋಷ. ಪರಾಕುಗಳ ಮಧ್ಯದಿಂದ ಒಂದು ದನಿ ಯುದ್ಧದಲ್ಲಿ ನೀನು ಕೊಂದು ಹಾಕಿರುವವರ ರಕ್ತದ ಪಸೆ ನಿನ್ನ ಕೈಗಳಲ್ಲಿದೆ. ಅದು ಸಿಂಹಾಸನವನ್ನು ಮಲಿನಗೊಳಿಸುತ್ತದೆ. ನೀನು ಸಿಂಹಾಸನವನ್ನು ಏರುವಂತಿಲ್ಲ ಎನ್ನುತ್ತದೆ. ನೆರೆದ ಜನಕ್ಕೆ ಈ ಮಾತುಗಳು ಆಶ್ಚರ್ಯ ತಂದರೂ ಅಪಥ್ಯವೆನಿಸುತ್ತದೆ. ತಮ್ಮ ಸಂಭ್ರಮಕ್ಕೆ ತಂದ ಧಕ್ಕೆಯೆಂದು ಭಾವಿಸುತ್ತಾರೆ. ಕೊಂಚವೂ ವಿವೇಚಿಸದೆ ಈ ಮಾತುಗಳನ್ನಾಡಿದವನನ್ನು ಹೊಡೆದು ಸಾಯಿಸುತ್ತಾರೆ. ಮೇಲಿನ ಮಾತುಗಳಿಗಾಗಲೀ ನಂತರದ ಘಟನೆಗಾಗಲೀ ಧರ್ಮರಾಯ ಪ್ರತಿಕ್ರಿಯಿಸದಿರುವುದು ಸೋಜಿಗ! ತಾನು ಮುಂದುವರಿದು ಸಿಂಹಾಸನವೇರುತ್ತಾನೆ. ನಮ್ಮ ದೇಶದ ಅತೀ ಪುರಾತನ ಮತ್ತು ಶ್ರೇಷ್ಠ ಗ್ರಂಥವೆಂದು ಭಾವಿಸಲ್ಪಟ್ಟಿರುವ ಕೃತಿಯಲ್ಲಿನ ಈ ಘಟನೆ ವಾಸ್ತವಕ್ಕೂ ಕೊಟ್ಟಿರುವ ಸೂಚನೆಯಂತಿದೆ. ಈ ಕಾಲದಲ್ಲೂ ಇಂಥ ಸನ್ನಿವೇಶಗಳು ಕಂಡುಬರುತ್ತಿರುವುದು ದುರದೃಷ್ಟ. ಹಿರಿಯ ಹಾಗೂ ಸಂವೇದನಾಶೀಲ ಪತ್ರಕರ್ತರಾದ ರವೀಶ್ ಕುಮಾರ್ ಅವರು ಸಮಾಜದಲ್ಲಿ ವ್ಯವಸ್ಥಿತವಾಗಿ ನಿರ್ಮಾಣವಾಗುತ್ತಿರುವ ಅಸಹಿಷ್ಣುತೆ, ಅಭದ್ರತೆಯನ್ನು ಗಟ್ಟಿಯಾಗಿ ವಿಶ್ಲೇಷಿಸಿರುವ ಕೃತಿ The free voice - on democracy, culture and the nation.

ಚಿಂತಕ, ಲೇಖಕ ಹರ್ಷಕುಮಾರ್ ಕುಗ್ವೆಯವರು ಈ ಕೃತಿಯನ್ನು ‘ಮಾತಿಗೆ ಏನು ಕಡಿಮೆ?’ - ಪ್ರಜಾಪ್ರಭುತ್ವ, ಸಂಸ್ಕೃತಿ ಮತ್ತು ರಾಷ್ಟ್ರದ ಕುರಿತ ಚಿಂತನೆ ಶೀರ್ಷಿಕೆಯಡಿ ಕನ್ನಡಕ್ಕೆ ಸಮರ್ಥವಾಗಿ ತಂದಿದ್ದಾರೆ. ಹೊಸ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ(2014ರಲ್ಲಿ) ಕೆಲವೇ ತಿಂಗಳುಗಳಲ್ಲಿ ಭಾರತದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಬ್ರಿಜ್‌ಗೋಪಾಲ್ ಹರಿಕಿಶನ್ ಲೋಯಾ ಅಕಾಲಿಕ ಸಾವನ್ನಪ್ಪುತ್ತಾರೆ. ಅಧಿಕಾರಕ್ಕೆ ಬಂದ ಪಕ್ಷದ ಅಧ್ಯಕ್ಷನೇ ಆರೋಪಿಯಾಗಿರುವ ಕೇಸಿನ ವಿಚಾರಣೆ ಇವರು ನಡೆಸುತ್ತಿರುತ್ತಾರೆ. ಇದು ಸಹಜವಾಗಿ ಸಂಶಯಕ್ಕೆ ಎಡೆ ಮಾಡಿಕೊಡುತ್ತದೆ. ಸಾವಿನ ಬಗ್ಗೆ ಮಾತಾಡುವ ಸ್ಥೈರ್ಯವಿಲ್ಲದ ಅವರ ಕುಟುಂಬದ ಪರವಾಗಿ ನಡೆದ ಟಿವಿ ಕಾರ್ಯಕ್ರಮದಿಂದ ಪುಸ್ತಕ ತೆರೆದುಕೊಳ್ಳುತ್ತದೆ. ಯಾರೂ ಬೆದರಿಸದೆಯೂ ಹೆದರಿಕೆ ಹುಟ್ಟುವ ಪರಿಯನ್ನು ಎಳೆ ಎಳೆಯಾಗಿ ತೆರೆದಿಡುತ್ತದೆ ‘ಮಾತಿಗೆ ಏನು ಕಡಿಮೆ?’. ಅಧಿಕಾರಸ್ಥರ ವಿರುದ್ಧ ವ್ಯಕ್ತಪಡಿಸುವ ಯಾವುದೇ ಭಿನ್ನಭಿಪ್ರಾಯವೂ ಅಪಾಯಕ್ಕೆ ಆಹ್ವಾನ. ನಾಯಕನಿಲ್ಲದ, ಗುರುತಿ ಸಲು ಹೆಸರೂ ಇಲ್ಲದ ಗುಂಪುಗಳು ನೇರವಾಗಿಯೂ, ಸಾಮಾಜಿಕ ತಾಣಗಳಲ್ಲಿಯೂ ದಾಳಿಯಿಟ್ಟು ಮನಸೋ ಇಚ್ಛೆ ವರ್ತಿಸು ತ್ತವೆ. ಇಂಥ ‘ಹೊಯ್‌ಕೈ ಗುಂಪಿನ’ ಸದಸ್ಯರು ‘ವಾಟ್ಸ್‌ಆ್ಯಪ್ ಯೂನಿವರ್ಸಿಟಿ’ಯಲ್ಲಿ ಓದಿ, ಯಾವುದನ್ನೂ ಯೋಚಿಸದೆ ಹೋರಾಟಕ್ಕಿಳಿಯುವ ‘ರೋಬೋ ಸಾರ್ವಜನಿಕ’ರು ರೂಪುಗೊಳ್ಳುತ್ತಿರುವ ದಿನಗಳು ಈಗ ಪರಾಕಾಷ್ಠೆ ತಲುಪಿವೆೆ.

ಈ ಪುಸ್ತಕದಲ್ಲಿ ಉದಾಹರಿಸಿರುವ ಒಂದು ಘಟನೆ: ಗುಜರಾತ್‌ನ ಕಳೆದ ವಿಧಾನಸಭಾ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಾರ್ವಜನಿಕ ಸಭೆಯನ್ನುದೇಶಿಸಿ ಪಾಕಿಸ್ತಾನದ ಹೈ ಕಮಿಶನರ್, ಪಾಕಿಸ್ತಾನದ ಮಾಜಿ ಪ್ರಧಾನಿ, ಭಾರತದ ಮಾಜಿ ಉಪರಾಷ್ಟ್ರಪತಿಗಳು ಮತ್ತು ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಎಲ್ಲರೂ ಸೇರಿ ಮಣಿಶಂಕರ್ ಅಯ್ಯರ್ ಅವರ ಮನೆಯಲ್ಲಿ ಸಭೆಯೊಂದನ್ನು ನಡೆಸಿದ್ದಾರೆ. ...ಇದು ಬಹಳ ಗಂಭೀರವಾದ ವಿಷಯ. ....ಗುಜರಾತಿನ ಮುಖ್ಯಮಂತ್ರಿಯಾಗಿ ಅಹಮದ್ ಪಟೇಲ್ ಅವರನ್ನು ಆಯ್ಕೆ ಮಾಡುವುದಕ್ಕೆ ನಾವು ಬೆಂಬಲಿಸಬೇಕು ಎಂದು ಪಾಕಿಸ್ತಾನಿ ಸೈನ್ಯದ ಮಾಜಿ ಡೈರಕ್ಟರ್ ಜನರಲ್ ಅಷರ್ದ್ ರಫೀಕ್ ಅವರು ಹೇಳಿದ್ದಾರೆ ಎಂದು ಸತ್ಯಕ್ಕೆ ದೂರವಾದ ಮಾತುಗಳನ್ನು ಆಡುತ್ತಾರೆ. ವಿರೋಧ ಪಕ್ಷದ ಪ್ರತಿಭಟನೆಯಿಂದ ಅಪರೋಕ್ಷವಾಗಿ ಆಡಿದ ಮಾತಿನ ತಪ್ಪನ್ನು ಒಪ್ಪಿಕೊಳ್ಳುತ್ತಾರೆ. ಆದರೆ ಸಮಯ ಅದಾಗಲೇ ಮೀರಿರುತ್ತದೆ. ಅಷ್ಟರಲ್ಲಾಗಲೇ ನಿರೀಕ್ಷಿಸಿದ ಫಲಿತಾಂಶವನ್ನು ತಂದುಕೊಟ್ಟಿರುತ್ತದೆ ಈ ಅಸತ್ಯದ ಮಾತುಗಳು.

ಮಾತುಗಳು ಎದೆಯ ದನಿಯಾಗಿರದೆ ಗಾಳಿಯಲ್ಲಿ ತೇಲಿ ಬರುವ ಶಬ್ದಗಳಾಗಿರುವುದರಿಂದ ಮಾತಿಗಿರಬೇಕಾದ ಮಹತ್ತು ಸತ್ತುಹೋಗಿದೆ. ಆಳುವ ನಾಯಕರುಗಳಿಗೆ ಮಾತಿನ ಹಿಂದಿರುವ ಮಸಲತ್ತು ಕಣ್ಣಿಗೆ ಕಾಣದಂತೆ ನಯವಾಗಿಸುವ ರೀತಿ ಕರಗತ. ಅದನ್ನು ವಿವೇಚಿಸದೆ ಒಪ್ಪಿಕೊಳ್ಳುವಂತೆ ಜನತೆಯನ್ನು ಮಾನಸಿಕವಾಗಿ ತಯಾರು ಮಾಡುವುದಕ್ಕೆ ಯಾವ ಮಾರ್ಗವಾದರೂ ಸರಿಯೇ. ಪ್ರತಿರೋಧ ಬಂದರೆ ಅದಕ್ಕೆ ‘ದೇಶದ್ರೋಹ’ದ ಲೇಬಲ್ಲು ಅಂಟಿಸಿ ಅದಕ್ಕೆ ತಕ್ಕ ಶಾಸ್ತಿ ಮಾಡಲು ‘ಹೊಯ್‌ಕೈ’ ಗುಂಪು ಸದಾ ತಯಾರು. ಪ್ರತಿಭಟನೆಯೆಂಬುದು ಪ್ರಜಾಪ್ರಭುತ್ವದ ಸುಂದರ ಭಾಗವೆಂಬ ಮಾತನ್ನು ಮರೆಸುವ ಪ್ರಯತ್ನಗಳು ನಡೆದಿದೆ ನಿರಾತಂಕವಾಗಿ. ಕಣ್ಣಿಗೆ ಕಾಣುತ್ತಿರುವುದು ಕಿವಿಗೆ ಕೇಳುತ್ತಿರುವುದು ಸತ್ಯವೇ ಎಂದು ಒರೆ ಹಚ್ಚಿ ನೋಡುವ ಮನೋಭಾವವನ್ನು ಬೆಳೆಸುವ ಪುಸ್ತಕ ‘ಮಾತಿಗೆ ಏನು ಕಡಿಮೆ?’.

ವ್ಯಕ್ತವಾದ ಪ್ರತಿರೋಧ, ಭಿನ್ನಭಿಪ್ರಾಯಗಳು ದಾರುಣ ಅಂತ್ಯ ಕಂಡಿರುವ ಘಟನೆಗಳನ್ನು ನೆನಪಿಸುತ್ತಾ ತನ್ನ ಅನಿಸಿಕೆಗೆ, ಸತ್ಯಕ್ಕೆ ಬದ್ಧವಾಗಿರಲು ಆತ್ಮಸ್ಥೈರ್ಯ ತಂದುಕೊಡುತ್ತದೆ ಈ ಕೃತಿ. ಮೂಲ ಲೇಖಕನು ನಮೂದಿಸದ ಕೆಲ ಅಡಿ ಟಿಪ್ಪಣಿಗಳು ಅನುವಾದದಲ್ಲಿ ಸೇರಿರುವುದರಿಂದ ಓದು ಮತ್ತೂ ಸಲೀಸಾಗುತ್ತದೆ. ಇಂಗ್ಲಿಷ್‌ನಲ್ಲಿ ಬಂದಿರುವ ಈ ಪುಸ್ತಕದ ಬೆಲೆಗಿಂತ ಕನ್ನಡದ ಕೃತಿಯ ಬೆಲೆ ಅರ್ಧದಷ್ಟು ಕಡಿಮೆಯಿರುವುದು ಸಂತೋಷ. ಎಲ್ಲರಿಗೂ ಸುಲಭಕ್ಕೆ ಸಿಗಲೆಂಬ ಆಶಯದಿಂದ ರಾಯಲ್ಟಿ ಧನ ತ್ಯಾಗ ಮಾಡಿರುವುದು ಹರ್ಷಕುಮಾರ್ ಕುಗ್ವೆಯವರ ಸಾಮಾಜಿಕ ಬದ್ಧತೆಯನ್ನು ಎತ್ತಿ ತೋರುತ್ತದೆ. ಇದೊಂದು ಅನುವಾದಿತ ಪುಸ್ತಕವೆನಿಸದೇ ಓದಿಸಿಕೊಳ್ಳುವುದು ಇವರ ಅನುವಾದದ ಹೆಚ್ಚುಗಾರಿಕೆ. 

ಹಿರಿಯರಾದ ಜಿ. ರಾಜಶೇಖರ ಅವರ ತೌಲನಿಕ ಮುನ್ನುಡಿಯು ಸೂಕ್ತವಾಗಿದೆ. ಓದುಗನಿಗೆ ಒಳನೋಟ ಕೊಡುವ ಇಂಥ ಪುಸ್ತಕಗಳು ಅರ್ಹನಿಶಿ ಪ್ರಕಾಶನದಿಂದ ಮತ್ತಷ್ಟು ಬರಲಿ..

share
ಬಸವರಾಜು ದೇಸಿ
ಬಸವರಾಜು ದೇಸಿ
Next Story
X