Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಛೋಟು

ಛೋಟು

ಕಥಾಸಂಗಮ

ವಾರ್ತಾಭಾರತಿವಾರ್ತಾಭಾರತಿ9 March 2019 6:51 PM IST
share
ಛೋಟು

ಜಯಂತ ಕಾಯ್ಕಿಣಿ

ಬಾಗಿಲು ತೆಗೆದದ್ದೇ ನನ್ನ ಜತೆ ಮತ್ತೊಬ್ಬ ಸಣ್ಣ ಅತಿಥಿಯನ್ನು ನೋಡಿ ಸಿಡಿಮಿಡಿಯನ್ನು ಸಣ್ಣಗೆ ವ್ಯಕ್ತಪಡಿಸಿ ಸುಮಿ ಸರ್ರಂತ ತಿರುಗಿ ಸೀದ ಒಳಹೋದಳು. ದಂಗಾದ ಛೋಟು ಮಿಕಿ ಮಿಕಿ ನನ್ನೇ ನೋಡಿದ. ‘‘ಬಾ ಛೋಟು ಬಾ’’- ಎಂದು ಅವನ ಬೆನ್ನು ಸವರಿ ಮನೆಯೊಳಕ್ಕೆ ತಂದೆ. ಒಂಬತ್ತು ಗಂಟೆ. ಸಾಮಾನ್ಯವಾಗಿ ನಮ್ಮ ಊಟದ ಸಮಯ. ರೇಡಿಯೋ ತೆಪ್ಪಗಿತ್ತು. ಸುಮಿ ತಳ್ಳಿಕೊಂಡು ಹೋದ ಕರ್ಟನ್‌ಗಳು ಮೆಲ್ಲಗೆ ತೂಗುತ್ತಿದ್ದವು. ಕೂತು ಶೂ ತೆಗೆಯಲಾರಂಭಿಸಿದೆ. ಸುಮಿಗೆ ಹೇಳದೇ ಆಫೀಸಿನ ನಂತರ ಸೀದಾ ಭಗೀರಥನ ಮನೆಗೆ ಹೋದದ್ದು ನನ್ನ ಮೊದಲ ಗುನ್ಹೆ. ತಡವಾಗಿ ಬಂದದ್ದು ಎರಡನೆಯದು. ಮತ್ತೀಗ ಬರುವಾಗ ಅನಿರೀಕ್ಷಿತವಾಗಿ ಭಗೀರಥನ ಪುತ್ರ ಛೋಟೂನನ್ನು ಕರಕೊಂಡು ಬಂದದ್ದು ಪ್ರಾಯಶಃ ಸುಮಿಯ ಸಂತಾಪಕ್ಕೆ ಕಳಸವನ್ನಿಟ್ಟಿದೆ. ಭಗೀರಥ ಹಿಂದೊಮ್ಮೆ ನನ್ನ ಸಹೋದ್ಯೋಗಿಯಾಗಿದ್ದವನು. ಮಾಲತಿ ಅವನ ಹೆಂಡತಿ. ಅವನಿಗೇನೋ ಪ್ರಮೋಷನ್ ಆಯಿತು ಅಂತ ತಿಳಿದದ್ದರಿಂದ ಅಭಿನಂದನೆ ಮಾಡೋಣ ಅಂತ ಸೀದ ಆಫೀಸಿನಿಂದ ಅವನಲ್ಲಿಗೆ ಹೋಗಿದ್ದೆ. ಭಗೀರಥ ಮತ್ತು ಮಾಲತಿ ಎಷ್ಟು ಬೇಡವೆಂದರೂ ಕೇಳದೆ ‘‘ನನ್ನ ಉತ್ತರಾಧಿಕಾರಿ ಮನೆಯಲ್ಲಿದ್ದಾನಲ್ಲ! ಅವನ ಜತೆ ಎರಡು ದಿನ ಇರಲಿ ಛೋಟು. ಅವನಿಗೂ ಒಂದು ಛೇಂಜ್. ಯಾಕೆ ಛೋಟೂ ಬರ್ತೀಯಲ್ಲ?’’ ಅಂತ ಕೇಳಿದಾಗ ಈ ಪುಟ್ಟ ಸಂಭಾವಿತ ಹೋಗಲೋ ಬೇಡವೋ ಅನ್ನುವಂತೆ ವಿಧೇಯತೆಯಿಂದ ಮಾಲತಿಯ ಕಡೆ ನೋಡಿದ್ದ. ‘‘ನಡಿಯೋ ಮಾರಾಯಾ ಎರಡು ದಿನ ತಂಟೆ ಇಲ್ಲ ನಿಂದು’’ ಎಂದು ಅವರಿಬ್ಬರೂ ಕಳಿಸಿಕೊಟ್ಟಾಗ ಇಷ್ಟು ಸುಲಭದಲ್ಲಿ ಕಳಿಸಿಕೊಟ್ಟು ಅತ್ತು ರಂಪ ಮಾಡುವ ಅತ್ಯುತ್ತಮ ಅವಕಾಶ ತಪ್ಪಿ ಹೋದದ್ದಕ್ಕೋ ಏನೋ ರಸ್ತೆಯಲ್ಲಿ ಬಸ್‌ಸ್ಟಾಪಿನಲ್ಲಿ ಎಲ್ಲ ಮಂದವಾಗಿಯೇ ಇದ್ದ. ‘‘ನಮ್ಮ ಮನೆಯಲ್ಲಿ ರೈಲಿದೆ. ಹೆಲಿಕಾಪ್ಟರ್, ಕೇರಂ, ನಿನಗೆ ಯಾವ ತಿಂಡಿ ಇಷ್ಟ? ನಮ್ಮ ಕಿಶೋರ ಮತ್ತು ನೀನು ಅಣ್ಣ ತಮ್ಮಂದಿರಂತೆ ಇರಬೇಕು ಗೊತ್ತಾಯ್ತಾ?’’ - ಎಂದಾಗ ‘‘ಕಿಶೋರ್‌ಗೆ ಫೈಟಿಂಗ್ ಬರುತ್ತಾ?’’ ಎಂದು ಅನುಮಾನ ವ್ಯಕ್ತಪಡಿಸಿದ. ‘‘ಹೆ ಹೆ ಫೈಟಿಂಗ್ ಗೈಟಿಂಗ್ ಎಲ್ಲಾ ಮಾಡಬಾರದು ನೀವು. ಅಣ್ಣ ತಮ್ಮಂದಿರಂತೆ ಇರಬೇಕು’’ - ಎಂದಾಗ ನಿರಾಶನಾಗಿ ನಿಂತ. ಮನೆಯಲ್ಲಿ ಕಟ್ಟುನಿಟ್ಟಾದ ವಾರ್ನಿಂಗ್ ಕೊಟ್ಟಿತ್ತು ಅವನಿಗೆ. ‘‘ಅಂಕಲ್‌ಗೆ ಇದು ಕೊಡಿಸು ಅದು ಕೊಡಿಸು ಅಂತ ಕಾಡಿಸಬೇಡ’’ - ಅಂತ. ಒಟ್ಟಾರೆ ತೀರ ನಿರುಪಾಯನಾಗಿದ್ದ ಆತ ಬಸ್ಸಿನಲ್ಲಿ ಸೀಟೊಂದು ಖಾಲಿಯಾದಾಗ ಎಷ್ಟು ಕೂತುಕೋ ಅಂದರೂ ಕೂಡ್ರಲೇ ಇಲ್ಲ ಆಸಾಮಿ. ನಂತರ ನಾನೇ ಕೂತು ಅವನನ್ನು ತೊಡೆ ನಡುವೆ ನಿಲ್ಲಿಸಿಕೊಂಡೆ. ಇವನನ್ನು ಕರಕೊಂಡೇನೋ ಬಂದೆ ಹೌದು ನಾನು. ಆದರೆ ಸುಮಿಯ ಬಗ್ಗೆ ಅಷ್ಟೊಂದು ವಿಚಾರ ಮಾಡಿರಲೇ ಇಲ್ಲವಲ್ಲ ಅಂದುಕೊಂಡರೂ, ಅವಳಿಗೆ ಎಷ್ಟೆಷ್ಟೋ ಆಶ್ಚರ್ಯಗಳನ್ನು ಕೊಟ್ಟ ನನ್ನಿಂದ ಬಹುಶಃ ಯಾವುದೂ ಅವಳಿಗೆ ಅನಿರೀಕ್ಷಿತವಲ್ಲ ಅನಿಸಿತ್ತು. ಬಸ್ಸಿನಲ್ಲಿ ಬಹಳ ಗದ್ದಲ ಇತ್ತು. ಬದಿಗೊಬ್ಬ ವಿಚಿತ್ರವಾದ ಮುಖವುಳ್ಳ ಮನುಷ್ಯ ನಿಂತಿದ್ದ. ಅವನ ತುಟಿ ಯಾವುದು ನಾಲಿಗೆ ಯಾವುದು ಎಂಬುದು ತಿಳಿಯದ ರೀತಿಯಲ್ಲಿ ಬಾಯನ್ನು ಅಲ್ಲಾಡಿಸುತ್ತಿದ್ದ. ಛೋಟು ಅವನನ್ನೇ ಎರಡು ಕ್ಷಣ ದಿಟ್ಟಿಸಿ ನೋಡಿದ. ಆಮೇಲೆ ಉಳಿದವರನ್ನೆಲ್ಲ ಒಂದೊಂದಾಗಿ ನೋಡಿದ. ಎಲ್ಲರೂ ವಿಚಿತ್ರವಾಗಿ ಕಂಡಂತಾಗಿಯೋ ಏನೋ ನನ್ನೆಡೆ ತಿರುಗಿ ನೋಡಿದ. ನಾನು ಹೇಗೆ ಕಂಡೆನೋ ಏನೋ ಒಮ್ಮೆಲೆ ಅಳುಮುಖ ಮಾಡಿದ. ಅವನ ಕೆಳತುಟಿಯ ಕೆಳಭಾಗ ಮೆಲ್ಲಗೆ ಅದುರಲಾರಂಭಿಸುತ್ತ ಅಳುವಿನೆಡೆ ಸಾಗುವ ಲಕ್ಷಣಗಳು ಕಾಣಹತ್ತಿದವು. ‘‘ಅರೆರೆರೆ, ಹೇ ಹೇ ಹೊರಗೆ ನೋಡು, ಆ ಕೆಂಪು ನೀಲಿ ದೀಪ ನೋಡು, ಆಯಿತು ಮನೆ ಬಂತು. ಮುಂದಿನ ಸ್ಟಾಪಿಗೇ ಮನೆ, ಬಾ. ಇಳಿಯುವಾ’’ ಎಂದು ಅವನನ್ನೆಬ್ಬಿಸಿ ಜನಸಂದಣಿಯಲ್ಲಿ ನುಸುಳುತ್ತ ಡ್ರೈವರನ ಎಡಬದಿಗೆ ನಿಂತೆ. ‘‘ಚಾಕಲೇಟು ಬೇಕಾ?’’ ಎಂದೆ. ‘‘ಕೊಡಿಸುತ್ತೇನೆ’’ ಎಂದೆ. ‘‘ನಮ್ಮ ಮನೆಯಲ್ಲಿ ಗಾಜಿನ ಹೂಜಿಯಲ್ಲಿ ಬಣ್ಣ ಬಣ್ಣದ ಮೀನಿದೆ ನೋಡುವಿಯಂತೆ’’ ಎಂದೆ. ಬಸ್ಸಿನ ಗದ್ದಲ ಬ್ರೇಕಿನ ಆಘಾತ ಇತ್ಯಾದಿಗಳಲ್ಲಿ ಛೋಟೂ ಪುಟ್ಟ ತಲೆ ಮೇಲೆತ್ತಿ ನನ್ನ ಚೌಕಾಶಿಗಳನ್ನು ಕಣ್ಣುಗಳಲ್ಲಿ ಹಾಕಿಕೊಳ್ಳುತ್ತಿದ್ದ. ಸ್ಟಾಪು ಬಂತು. ಅವಸರದಲ್ಲಿ ಇಳಿದೆವು. ಇಳಿದ ತಕ್ಷಣ ಛೋಟೂ ಏನೋ ಪಿಸುಗುಟ್ಟಿದ. ‘ಆಂ?’ ಎಂದೆ. ‘‘ಮನೆಗೆ ಹೋಗುತ್ತೇನೆ’’ ಎಂದು ತೀರ ಕೆಳಗಿನ ದನಿಯಲ್ಲಿ ಉಸುರಿದ. ಕೇಳದವನಂತೆ ನಟಿಸಿ ಸಮೀಪದ ಅಂಗಡಿಯಲ್ಲಿ ಚಾಕಲೇಟು ತೆಗೆದುಕೊಂಡು ಒಂದು ಅವನಿಗೆ ಕೊಟ್ಟು-ಸುಮಿ ಇವ ಬಂದ ಅಂತ ಸ್ಪೆಷಲ್ ಆಗಿ ಏನೂ ಮಾಡಲಾರಳೇನೋ ಅನಿಸಿ ಬದಿಯ ಸ್ವೀಟ್ ಸ್ಟಾಲ್‌ನಲ್ಲಿ ಅರ್ಧ ಕಿಲೋ ಜಾಮೂನು ಖರೀದಿಸಿ ಮನೆಗೆ ಬಂದೆ.

ಶೂ ಕಳಚುತ್ತಿದ್ದ ನನ್ನನ್ನೇ ಅವಾಕ್ಕಾಗ ನೋಡುತ್ತ ಛೋಟು ನಿಂತಿದ್ದ. ಅವನನ್ನು ಬಳಿಗೆ ಎಳೆದು-‘‘ಇದು ನಮ್ಮ ಮನೆ ತಿಳಿಯಿತಾ? ಈಗ ಒಳಗೆ ಹೋದಳಲ್ಲ ಅವಳು ಸುಮಿ ಆಂಟಿ. ನಿನ್ನ ಬರ್ತಡೇಗೆ ಬಂದಿದ್ದಳು ಅವಳು. ನೆನಪು ಇಲ್ಲವಾ?’’ ಎಂದೆ. ಸುಮಿ ಕಡೇ ಪಕ್ಷ ಅವನ ಗಲ್ಲವನ್ನಾದರೂ ಸವರಿ ಒಳಗೆ ಹೋಗಬಹುದಿತ್ತು. ಛೋಟೂಗೂ ಅದು ಅನಿಸಿತೋ ಇಲ್ಲವೋ ಆದರೆ ತನ್ನ ಮನೆಗೆ ಆಗಾಗ ಬಂದು ಹೋಗುವ ಸುಮಿ ಆಂಟಿಯಿಂದ ಅವನೇನೋ ಮಿಸ್ ಮಾಡಿದಂತಿತ್ತು. ‘‘ಕಿಶೋರ್’’ ಎಂದು ಕೂಗಿದೆ. ಕಿಚನ್‌ನಿಂದ ಸುಮಿ ‘‘ಊಟ ಮಾಡುತ್ತಿದ್ದಾನೆ’’ ಎಂದು ಗಡಸು ದನಿಯಲ್ಲಿ ಹೇಳಿದಳು. ‘‘ಕಿಶೋರ್’’ ಎಂದು ಮತ್ತೊಮ್ಮೆ ಕೂಗಿ ‘‘ನೋಡಿಲ್ಲಿ ಯಾರು ಬಂದಿದ್ದಾರೆ. ಛೋಟೂ ಬಂದಿದಾನೆ ಛೋಟೂ’’ ಎಂದು ಅರಚಿದೆ. ಛೋಟೂನ ಮೋರೆಯ ಮೇಲೆ ಮೆಲ್ಲಗೆ ಹುರುಪು ಜಿನುಗಿತು. ಒಳಗಿಂದ ಸದ್ದು ಬರಲಿಲ್ಲ. ‘‘ನಮ್ಮ ಕಿಶೋರ ಊಟ ಮಾಡ್ತಾ ಇದ್ದಾನೆ. ಬಾ, ನಾವೂ ಊಟ ಮಾಡೋಣ. ಹಾಂ?’’ ಎಂದು ಅವನನ್ನೆಬ್ಬಿಸಿ ಒಳಗೊಯ್ಯುವಾಗ ಅವನು ಮನೆಯನ್ನು ವಿಚಿತ್ರ ಆಸ್ಥೆಯಿಂದ ಅವಲೋಕಿಸಿದ. ಬಾಗಿಲ ಪಕ್ಕದಲ್ಲಿಯ ಅಕ್ವೇರಿಯಂ ಕಣ್ಣಿಗೆ ಬಿದ್ದಿರದಿದ್ದರೆ ಅವ ಮತ್ತೊಮ್ಮೆ ‘ಮನೆಗೆ ಹೋಗುತ್ತೇನೆ’ ಅಂತ ಪಿಸುಗುಡಬಹುದಿತ್ತು. ‘‘ಮೊದಲು ಊಟ, ನಂತರ ಅದನ್ನೆಲ್ಲ ನೋಡೋಣ’’ ಎಂದು ಅವನನ್ನು ನೇರ ಅಡುಗೆಮನೆಯೊಳಕ್ಕೆ ಕರಕೊಂಡು ಹೋದೆ. ಊಟವನ್ನು ಅರ್ಧಕ್ಕೇ ಬಿಟ್ಟು ಹೊರಗೆ ಬರಲು ಒದ್ದಾಡುತ್ತಿದ್ದ ಕಿಶೋರನನ್ನು ಹಿಡಿದು ಅವನ ಬಾಯಲ್ಲಿ ಹಾಲು ಅನ್ನ ತುರುಕುತ್ತಿದ್ದಳು. ‘‘ನೋಡು ಯಾರು ಬಂದಿದಾರೆ?’’ ಎಂದೆ. ಛೋಟೂ ಹೆದರುತ್ತ ನಾಚುತ್ತ ಕಿಶೋರನನ್ನು ನೋಡಿದ. ಕಿಶೋರನ ಖುಶಿಯನ್ನು ಸಾರಲು ಬಾಯಿಯ ಆವಶ್ಯಕತೆ ಬೀಳಲಿಲ್ಲ. ಸುಮಿ ಸೊಟ್ಟ ಮೋರೆ ಬದಲಾಯಿಸಲಿಲ್ಲ. ಛೋಟುವಿನೆಡೆ ನೋಡಲೂ ಇಲ್ಲ. ನನಗೆ ರೇಗಲಾರಂಭಿಸಿತು. ‘‘ನಮಗೂ ಬಡಿಸು. ಛೋಟೂನೂ ಮಾಡ್ತಾನೆ’’ ಎಂದು ಬಾತ್‌ರೂಂಗೆ ನಡೆದೆ. ನಾನು ಕೈತೊಳೆಯುತ್ತಿದ್ದಾಗ ಒಳಗಿಂದ ಸುಮಿ ‘‘ಏನೋ ಛೋಟೂ ಅಮ್ಮ ಹುಷಾರಾಗಿದ್ದಾಳೇನೋ. ನಿಮ್ಮ ಮನೆಯಲ್ಲಿ ಟಿ.ವಿ. ತಂದರಂತಲ್ಲಾ. ಆ ದಿನ ನಿಮ್ಮಮ್ಮ ಸಿಕ್ಕಾಗ ಹೇಳಲೇ ಇಲ್ಲ. ನಿನಗೂ ಹೇಳಬೇಡ ಅಂತ ಹೇಳಿದಾಳೇನೋ’’ ಅಂತೇನೇನೋ ಹೇಳುತ್ತಿದ್ದಳು. ಬಟ್ಟೆ ಬದಲಾಯಿಸಿ ಬಂದಾಗ ಛೋಟೂ ಅಲ್ಲೇ ಕುರ್ಚಿಯ ಮೇಲೆ ಕೂತು ಕಿಶೋರನ ಊಟದ ತಟ್ಟೆಯನ್ನೂ, ಸುಮಿಯ ಉಣ್ಣಿಸುವ ಪರಿಯನ್ನೂ, ಬದಿಯಲ್ಲಿದ್ದ ತುಂಬಿದ ಹಾಲಿನ ಗ್ಲಾಸನ್ನೂ ನೋಡುತ್ತಿದ್ದ.

‘‘ಛೋಟೂ ಕೈ ತೊಳೆದುಕೊಂಡೆಯೇನೋ’’ ಅಂತ ಕೇಳಿದೆ. ಅವನು ಉತ್ತರ ಕೊಡುವ ಮೊದಲೇ ಸುಮಿ ‘‘ನಮ್ಮ ಕಿಶೋರ ನೋಡು ಜಾಣ. ಯಾವಾಗಲೂ ಕೈತೊಳೆದೇ ಊಟಕ್ಕೆ ಕೂಡ್ರುತ್ತಾನೆ. ಅಲ್ಲವೇನೋ’’-ಎಂದಳು. ಕಿಶೋರ ‘‘ಹೌದು’’ ಎಂದ. ನಾನು ‘‘ಇಲ್ಲ ಛೋಟೂ ಕೂಡ ಜಾಣ. ಅವನೂ ಕೈ ತೊಳೆದೇ ಊಟ ಮಾಡುತ್ತಾನೆ. ಅಲ್ಲವೇನೋ?’’ ಎಂದೆ. ‘‘ಹೌದು’’ ಅನ್ನುವಂತೆ ತಲೆಯಾಡಿಸಿದ. ಅವನನ್ನು ಸಿಂಕಿಗೆ ಒಯ್ದು ಕೈತೊಳಿಸಿದೆ. ಟೇಬಲ್ ಎದುರು ಕೂತಾಗ ಯಾಕೋ ಛೋಟೂ ಕೇವಲ ನನ್ನನ್ನೇ ನೋಡುತ್ತಿದ್ದ. ಕಿಶೋರ ಊಟ ಮುಗಿಸಿ ಕೈ ತೊಳೆಯಲು ಓಡಿದ. ಸುಮಿ ನನ್ನೆಡೆ ನೋಡಲೂ ತಯಾರಿರಲಿಲ್ಲ. ಬಡಿಸಿದಳು. ‘‘ಬಟಾಟೆ ತಿನ್ನುತ್ತೀಯಲ್ಲಾ’’ ಎಂದೆ. ‘‘ಹೌದು’’ ಅಂದ. ‘‘ಹಾಲು ಅನ್ನ ಊಟ ಮಾಡು’’-ಎಂದೆ. ಸುಮಿ ‘‘ಕೆಲ ಮಕ್ಕಳಿಗೆ ಹಾಲು ಅಂದರೆ ಆಗೋದಿಲ್ಲ. ನಿನಗೆ? ಆ ಮೇಲೆ ಚೆಲ್ಲಬಾರದೂ, ವೇಸ್ಟ್ ಮಾಡಬಾರದೂ’’ ಎಂದಳು. ‘‘ಇಲ್ಲ ಅವನು ಜಾಣ’’ ಅಂದೆ. ‘‘ಸಾಕು ಸಾಕು. ಅವನದೆಲ್ಲ ಗೊತ್ತು ನಿಮಗೆ’’ ಅಂದವಳೇ ‘‘ಅಲ್ಲಿ ಹೋಗುವುದಿದ್ದರೆ ಬೆಳಗ್ಗೆ ಒಂದು ಮಾತು ಹೇಳಬಾರದಾಗಿತ್ತಾ?’’-ಎಂದಳು ವಿಚಿತ್ರ ದರ್ಪ ದಲ್ಲಿ. ‘‘ಓಕೇ ಓಕೇ ನಾನು ಹೇಳಲಿಲ್ಲ ನಿನಗೆ. ಹೌದು. ಮರೆತುಹೋಯ್ತು. ಐ ಆ್ಯಮ್ ಸಾರಿ. ಆದರೆ ಈಗ ಅಟೆಂಡ್ ಟು ಹಿಮ್ ಅಟ್‌ಲೀಸ್ಟ್’’ ಎಂದೆ. ಏನೋ ಗೊಣಗುತ್ತ ಒಳಗೆ ಹೋಗಿ ಬಂದಳು. ತಬ್ಬಿಬ್ಬಾಗಿ ತುತ್ತು ಕೆದರುತ್ತಿದ್ದ ಛೋಟೂನ ಬೆನ್ನ ಮೇಲೆ ಕೈಯಾಡಿಸಿ ‘‘ಮನೇಲಿ ಅಮ್ಮ ಉಣ್ಣಿಸ್ತಾಳೇನೋ ನಿನಗೆ?’’ ಎಂದು ಕೇಳಿದೆ. ‘‘ಇಲ್ಲ’’ ಅಂದ ವಿಚಿತ್ರ ಮುಗ್ಧ ಸ್ವಾಭಿಮಾನದಲ್ಲಿ. ‘‘ಹೇಳು ಮರಿ ನಿಮ್ಮ ಅಮ್ಮನ ಸುದ್ದಿ ಇವರಿಗೆ. ನಿಮ್ಮಮ್ಮ ಯಾವಾಗ ಮನೇಲಿರ್ತಾಳೆ ಅಂತ ಹೇಳು. ಹೇಳು’’-ಎಂದಳು ಆವೇಗದಿಂದ. ಥತ್ ಮತ್ತದೇ ವಿಷಮಯ ಕಥೆಯ ಪಲ್ಲವಿ ಅನಿಸಿ-‘‘ಸುಮೀ ಪ್ಲೀಸ್, ಈಗ ಏನೂ ಬೇಡ. ಯಾವ ಸೀನೂ ಬೇಡ’’ ಎಂದು ಊಟ ನಿಲ್ಲಿಸಿದೆ. ಗೆದ್ದವಳಂತೆ ವಿಚಿತ್ರ ಸದ್ದು ಮಾಡಿದಳು. ಛೋಟೂನನ್ನು ನೋಡಿದೆ. ಈ ಮನೆಯಲ್ಲಿ ನಗುವೇ ಇಲ್ಲವೇನೋ ಅನ್ನಿಸುವ ಹಾಗೆ ಹೆದರಿದಂತೆ ಛೋಟೂ ತುತ್ತು ಮುಕ್ಕುತ್ತಿದ್ದ. ಪಲ್ಯ ಅವನಿಗೆ ಹಿಡಿಸಿರಲಿಲ್ಲ. ‘‘ಎಲ್ಲಾ ಖಾಲಿ ಮಾಡಬೇಕು’’-ಎಂಬ ಸುಮಿಯ ಅಪ್ಪಣೆಗೆ ತತ್ತರಿಸಿದಂತಿದ್ದ. ‘‘ಬೇಡವಾದರೆ ಬಿಡು’’ ಎಂದೆ. ಹೊರಗಿಂದ ಕಿಶೋರ್ ‘‘ಆಟಕ್ಕೆ ಬಾರೋ ಛೋಟೂ’’- ಎಂದು ಕೂಗಿದ. ಸುಮಿ ದನಿಯೇರಿಸಿ ‘‘ಕಿಶೋರ್ ಈಗ ಆಟ ಗೀಟ ಅಂದ್ರೆ ನೋಡು. ಹೋಂವರ್ಕ್ ಮಾಡೋದು ಎಷ್ಟೆಲ್ಲಾ ಬಿದ್ದಿದೆ’’ ಎಂದು ಗದರಿಸಿದಳು. ಕಿಶೋರ ‘ಪಪ್ಪಾ’ ಎಂದು ರಾಗವೆಳೆದ. ನಾನು ‘‘ತಡಿಯೋ ಮರಿ. ನಾನೂ ಛೋಟೂ ಇಬ್ಬರೂ ಬರ್ತೇವೆ. ಎಲ್ಲಾ ಕೂಡಿ ಆಡೋಣ. ಕೇರಂ ಕೊಯ್‌ನ್‌ಗಳನ್ನು ಹುಡುಕಿಡು’’ ಎಂದೆ. ಚೆಂಗು ಚೆಂಗನೆ ನೆಗೆಯುತ್ತಾ ಕಿಶೋರ ಅಲ್ಲಿ ಇಲ್ಲಿ ಹುಡುಕಲಾರಂಭಿಸಿದ. ಛೋಟುವೂ ಜೋರಾಗಿಯೇ ತುತ್ತಿಳಿಸತೊಡಗಿದ. ಸುಮಿ ‘‘ಛೋಟೂ, ನಿಮ್ಮಪ್ಪ ಅಮ್ಮ ಜಗಳಾ ಆಡ್ತಾರೇನೋ’’ ಅಂತೇನೊ ಶುರು ಮಾಡುವವಳಿದ್ದಳು.

‘‘ಸಾಕು, ಈವತ್ತಿಗೆ ಇಷ್ಟು ಸೀನು ಮಾಡಿದ್ದು ಸಾಕು’’- ಎಂದೆ. ನನ್ನ ದನಿಯ ಗಡಸು ಅವಳ ಮೇಲಿಗಿಂತ ಜಾಸ್ತಿ ಪರಿಣಾಮ ಛೋಟೂನ ಮೇಲೆ ಮಾಡಬಹುದಾಗಿದ್ದರಿಂದ ವೌನ ಧರಿಸಿದೆ. ಕಿವಿ ಗಡಚಿಕ್ಕುವ ವೌನ. ಛೋಟೂ ಊಟ ಅರ್ಧಕ್ಕೆ ನಿಲ್ಲಿಸಿದ್ದ. ‘‘ಸಾಕು ಓಡು’’ ಎಂದೆ. ಅವನು ಇಳಿಯುವುದರಲ್ಲಿದ್ದ-ಅಷ್ಟರಲ್ಲಿ ಹೊರಗಿಂದ ಕಿಶೋರ್ ಜಾಮೂನ್ ಜಾಮೂನ್ ಎಂದು ಕುಣಿಯುತ್ತ ಪೊಟ್ಟಣ ಹಿಡಿದು ಬಂದ. ಇಳಿಯುವುದರಲ್ಲಿದ್ದ ಛೋಟು ಪುನಃ ಏರಿ ಕೂತು ಪೊಟ್ಟಣ ನಿಟ್ಟಿಸುತ್ತಿರುವಾಗ ಸುಮಿ ಸರಸರ ಹೋಗಿ ಕಿಶೋರನ ಕೈಯಿಂದ ಇಸಗೊಂಡು ‘‘ತಿಂಡಿ ಕಾಣದವರ ಹಾಗೆ ಕುಣಿಯೋದಕ್ಕೆ ನಾಚಿಕೆಯಾಗೋದಿಲ್ಲಾ?’’-ಎಂದು ಫಳೀರನೆ ಕೆನ್ನೆಗೆ ಬಿಗಿದಳು. ಒಂದೆರಡು ಸೆಕೆಂಡು ವೌನವನ್ನು ಆಚರಿಸಿದ ಕಿಶೋರ್ ತಕ್ಷಣ ತಾರಕದಲ್ಲಿ ಅಳಲಾರಂಭಿಸಿದ. ಛೋಟೂ ಬೆಚ್ಚಿದ. ಕಿಶೋರ್ ಅಳುತ್ತ ಕಾಲು ಬಡಿಯುತ್ತ ಹೊರ ಕೋಣೆಗೆ ಹೋದ. ಸುಮಿ ದುಮು ದುಮಿಸುತ್ತ ಪೊಟ್ಟಣವನ್ನು ಶೆಲ್ಫಿನ ಯಾವುದೋ ಡಬ್ಬಿಯ ಸಂದಿಗಿಟ್ಟು ಬೇರೆ ಕೆಲಸಕ್ಕೆ ತೊಡಗಿದಳು. ನನ್ನ ಮಾತು ಎಂಥ ಸ್ಫೋಟಕ್ಕೂ ಕಾರಣವಾದೀತೂ ಎಂದು ನಾನು ಮನಗಟ್ಟಿ ಹಿಡಿದು ಛೋಟೂನನ್ನ ‘‘ನಡೀ ಕೈತೊಳಿ’’ ಎಂದು ಸಿಂಕಿಗೊಯ್ದು ಕೈತೊಳೆಸಿದೆ. ನಂತರ ಬಚ್ಚಲಿಗೆ ಹೋದೆ. ಸುಮಿ ಏನೋ ಗೊಣಗುತ್ತಿದ್ದಳು. ನಾನು ಕೈ ಒರೆಸುತ್ತ ಹೊರ ಕೋಣೆಗೆ ಬಂದಾಗ ಒದ್ದೆ ಮುಖದ ಛೋಟೂ ಅಳುತ್ತ ಬಿಕ್ಕಳಿಕೆಯಲ್ಲಿದ್ದ. ಕಿಶೋರನನ್ನೇ ಮೊಣಕಾಲ ಮೇಲೆ ಕೈಯೂರಿ ನೋಡುತ್ತ ನಿಂತಿದ್ದ.

‘‘ಕಿಶೋರ್ ಅಳ್ಬಾರ್ದು ಬೇಟಾ. ಅಳ್ಬಾರ್ದು, ಛೇ ಛೇ ಮನೇಗಿವತ್ತು ಛೋಟೂ ಬಂದಿದ್ದಾನೆ. ಮತ್ತೆ ನೀನಳ್ತೀ? ಆ ದಿನ ಅವನ ಮನೆಗೆ ನಾವು ಹೋಗಿದ್ದಾಗ ಭಗೀರಥ ಮಾಮಾ ನಿನಗೆ ಏನೆಲ್ಲ ಆಟ ಆಡಲು ಕೊಟ್ಟಿರಲಿಲ್ವಾ? ಈಗ ನೀನು ಅತ್ರೆ ಛೋಟೂ ಮತ್ತೆಂದೂ ಬರೋದಿಲ್ಲ. ಛೀ ಛೀ ಜಾಣ. ಅಳ್ಬಾರ್ದು’’ ಎಂದು ಮುದ್ದಿಸುತ್ತ ಸಂತೈಸಿದೆ. ಸೋಫಾದ ಹಿಂದುಗಡೆ ಇದ್ದ ಕೇರಂ ಬೋರ್ಡು ತೆಗೆದು ಅವರೆದುರು ಹರಡಿದೆ. ಅಳು ನಿಲ್ಲಿಸಿದ ಕಿಶೋರ ಬಿಕ್ಕಳಿಕೆಯಲ್ಲೇ ನಕ್ಕ. ಛೋಟೂ ಮತ್ತು ಅವ ಕೈ ಕೈ ಹಿಡಿದುಕೊಂಡು ಆಟಕ್ಕೆ ಕೂತರು. ನಾನೂ ಅವರಿಬ್ಬರ ಜತೆ ಒಂದಿಷ್ಟು ಹೊತ್ತು ಕೂತೆ. ಆಡಿದೆ, ವಾವಾ ಎಂದೆ. ಆದರೆ ಎಷ್ಟು ಹೊತ್ತಾದರೂ ಸುಮಿಯ ಸುಳಿವು ಕಾಣಲಿಲ್ಲ. ಮೆಲ್ಲಗೆ ಎದ್ದು ಒಳಹೋದೆ. ತೆಪ್ಪಗೆ ಟೇಬಲ್ ಒರೆಸುತ್ತ ನಿಂತಿದ್ದ ಅವಳು ಯಾವುದೋ ಮೂಕಿ ಚಿತ್ರದ ದೃಶ್ಯದಂತೆ ಕಂಡಳು. ತುಂಬಾ ಕೆಡುಕೆನಿಸಿತು. ಸಮೀಪ ಹೋದೆ, ಬೆಚ್ಚಿದೆ. ಅವಳು ಅಳುತ್ತಿದ್ದಳು-ಎಳೆ ಮಗುವಿನಂತೆ. ‘‘ಸುಮೀ-ಪ್ಲೀಸ್ ಮಕ್ಕಳಂತೆ ಮಾಡಬೇಡ’’ ನನ್ನ ಕೈ ಕಿತ್ತೆಸದಳು. ‘‘ಯಾಕೆ ಇಲ್ಲದ್ದನ್ನೆಲ್ಲ ತಲೆಗೆ ಹಚ್ಚಿಕೊಂಡು ಕುಸಿಯುತ್ತೀ? ಆಂ?’’ ಎಂದೆ. ‘‘ಅವಳು ನನ್ಮನೆ ಹಾಳು ಮಾಡ್ತಾ ಇದಾಳೆ. ನಾನು ಅವಳಿಗೆ ಏನು ಮಾಡಿದ್ದೆ?’’- ಎಂದು ತುಟಿಕಚ್ಚಿ ಧಳಧಳ ಬಿಕ್ಕಿದಳು. ‘‘ಸುಮೀ-ಪ್ಲೀಸ್ ಇಲ್ನೋಡು...’’ ಅವಳ ಅಳು ಜೋರಾಗೇ ಇತ್ತು. ಈ ಹಂತದಲ್ಲಿ ನಾನೇನೂ ಮಾಡುವಂತಿಲ್ಲ ಅನಿಸಿತು. ಅಷ್ಟರಲ್ಲಿ ಹೊರಗಿಂದ ಕಿಶೋರ ಏನೋ ಪುಕಾರು ಹೇಳುವವನಂತೆ ಬಂದ. ತಾಯಿಯ ಅಳುವನ್ನು ದಂಗಾಗಿ ನೋಡುತ್ತ ನಿಂತ. ಒಂದು ಕ್ಷಣದಲ್ಲಿ ಅವ ನನ್ನ ಮಗ ಕಿಶೋರ ಅಂತ ಅನಿಸಲೇ ಇಲ್ಲ. ನಾನು ಅವನನ್ನು ತಿರುಗಿ ಹೊರಗೆ ಕರೆದುಕೊಂಡು ಹೋದೆ. ಕಾಯಿಗಳನ್ನು ಬೋರ್ಡಿನ ಮೇಲೆ ಒಟ್ಟಾಗಿ ಪೇರಿಸಿಟ್ಟು ‘‘ಹೊಡೆಯಿರಿ’’ ಎಂದೆ. ಕಿಶೋರ ‘‘ಅಮ್ಮ ಅಳ್ತಾಳೆ’’-ಅಂತೇನೋ ಛೋಟೂನ ಬಳಿ ಹೇಳಿದಂತಾಯ್ತು. ‘‘ಸುಮ್ಮನೆ ಆಡ್ರೋ’’- ಎಂದು ಅರಚಿದೆ. ಇಬ್ಬರೂ ಬೆಚ್ಚಿ ಬಿದ್ದರು. ಅತ್ಯಂತ ಗಂಭೀರರಾಗಿ ಕೂತರು. ನನ್ನ ಸಿಟ್ಟೇರಿದ ಮುಖವನ್ನೇ ಹೆದರುತ್ತ ನೋಡುತ್ತಿದ್ದ ಛೋಟೂನ ಮುಖ ಪಕ್ಕಾ ಮಾಲತಿಯದೇ ಇದ್ದಂತಿತ್ತು.

ತಿರುಗಿ ಎದ್ದು ಒಳಗೆ ಹೋದಾಗ ಅಡುಗೆಮನೆಯಲ್ಲಿ ಸುಮಿ ಇರಲಿಲ್ಲ. ಬೆಡ್‌ರೂಂಗೆ ಹೋದೆ. ಕತ್ತಲಲ್ಲಿ ಮುದುಡಿ ಮಲಗಿದ್ದಳು. ಕಣ್ಣುಮುಚ್ಚಿದಂತೆನಿಸುವ ಕತ್ತಲು. ಹೃದಯ ಕಲಕುವ ಒಂದು ಬಗೆಯ ವಿಚಿತ್ರವೌನ ಮಾತಿಗೆ ತೊಡಗಿದಂತೆ ಇತ್ತು. ಅವಳ ಬಳಿ ಕೂತು ಒದ್ದೆ ಕೆನ್ನೆ ನೇವರಿಸಿದೆ. ತಲೆಗೂದಲು ನೇವರಿಸಿದೆ. ಅವಳಿಗೊತ್ತಿ ಅವಳನ್ನು ಬಳಸಿಕೊಂಡು ಅವಳ ತಲೆಯನ್ನು ಹಾಗೇ ನೇವರಿಸುತ್ತ ಕೂತೆ. ಒಂದಿಷ್ಟು ಹೊತ್ತಿನ ನಂತರ ಛೋಟೂ ಏನೋ ಬೇಕೆಂಬಂತೆ ಅಂಕಲ್ ಅಂಕಲ್ ಎಂದು ಕೂಗುತ್ತ ಕಿಚನ್‌ಗೆ ಹೋಗಿ ಅಲ್ಲಿ ನನ್ನ ಕಾಣದೇ ಬಚ್ಚಲಿಗೆ ಹೋಗಿ ಅಲ್ಲೂ ನನ್ನ ಕಾಣದೆ ತೆರೆದ ಬೆಡ್‌ರೂಂ ಬಾಗಿಲಿಗೆ ನಿಂತು ಒಳಗಿನ ಕತ್ತಲನ್ನು ಮಿಕಿ ಮಿಕಿ ನೋಡಿ ತಿರುಗಿ ಓಡಿಹೋದ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X