ಮಾ.17ರ ಸರ್ವಜನೋತ್ಸವಕ್ಕೆ ವ್ಯಾಪಕ ಬೆಂಬಲ

ಉಡುಪಿ, ಮಾ.9: ಸಹಬಾಳ್ವೆ ಉಡುಪಿ ವತಿಯಿಂದ ಮಾ.17ರಂದು ಉಡುಪಿಯ ಕಲ್ಸಂಕ ರೋಯಲ್ ಗಾರ್ಡನ್‌ನಲ್ಲಿ ಹಮ್ಮಿಕೊಳ್ಳಲಾಗಿರುವ ಸರ್ವಜನೋತ್ಸವಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಸಹಬಾಳ್ವೆ ಕಚೇರಿಯಲ್ಲಿ ಇಂದು ನಡೆದ ಸಭೆಯಲ್ಲಿ ಕಾರ್ಯಕ್ರಮದ ಯಶಸ್ಸಿಗೆ ಅಗತ್ಯ ಇರುವ ಹೆಜ್ಜೆಗಳನ್ನು ಇಡುವ ಕುರಿತು ಚರ್ಚೆ ನಡೆಸಲಾ ಯಿತು. ಜಿಲ್ಲೆಯ ಅನೇಕ ಭಾಗಗಳಿಂದ ಸಮಾವೇಶಕ್ಕೆ ವ್ಯಕ್ತವಾಗಿರುವ ಅಭೂತ ಪೂರ್ವ ಬೆಂಬಲದ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಲಾಯಿತು.
ಸಭೆಯಲ್ಲಿ ಸಹಬಾಳ್ವೆ ಸಂಚಾಲಕ ಅಮೃತ್ ಶೆಣೈ, ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ, ಮುಖಂಡರಾದ ವರೋನಿಕಾ ಕರ್ನೆ ಲಿಯೋ, ಶ್ಯಾಮ್‌ರಾಜ್ ಬಿರ್ತಿ, ಯೋಗೀಶ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಅನ್ಸಾರ್ ಅಹ್ಮದ್, ಫಾ.ವಿಲಿಯಂ ಮಾರ್ಟಿಸ್, ಲೀಲಾಧರ ಶೆಟ್ಟಿ, ಕೆ.ವಿ.ಭಟ್ ಮೊದ ಲಾದವರು ಉಪಸ್ಥಿತರಿದ್ದರು.
Next Story





