ಸ್ವರಾಜ್ ಪೌಲ್‌ಗೆ ಜೀವಮಾನ ಸಾಧನೆ ವಾಣಿಜ್ಯ ಪ್ರಶಸ್ತಿ

ಲಂಡನ್, ಮಾ. 9: ಬ್ರಿಟನ್‌ನ ಮಿಡ್‌ಲ್ಯಾಂಡ್ಸ್‌ಗೆ ನೀಡಿರುವ ಜೀವಮಾನದ ಕೊಡುಗೆಗಾಗಿ ಬ್ರಿಟನ್‌ನ ಭಾರತ ಮೂಲದ ಶ್ರೀಮಂತ ಉದ್ಯಮಿ ಸ್ವರಾಜ್ ಪೌಲ್‌ಗೆ ‘ಜೀವಮಾನದ ದೇಣಿಗೆಗಾಗಿ ಮಿಡ್‌ಲ್ಯಾಂಡ್ಸ್ ಬಿಝ್ನೆಸ್ ಪ್ರಶಸ್ತಿ 2019’ ನೀಡಲಾಗಿದೆ.
88 ವರ್ಷದ ಪೌಲ್ 1960ರ ದಶಕದಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ತನ್ನ ಮೊದಲ ಕಂಪೆನಿಗಳನ್ನು ಸ್ಥಾಪಿಸಿದ್ದರು.
ಲೀಸೆಸ್ಟರ್‌ನಲ್ಲಿ ಶುಕ್ರವಾರ ಸಂಜೆ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಶಸ್ತಿಯ ಸ್ಥಾಪಕ ಹಾರ್ಜ್ ಸ್ಯಾಂಡರ್‌ರಿಂದ ‘ಹೌಸ್ ಆಫ್ ಲಾರ್ಡ್ಸ್’ನ ಸದಸ್ಯರೂ ಆಗಿರುವ ಪೌಲ್ ಪ್ರಶಸ್ತಿ ಸ್ವೀಕರಿಸಿದರು.
ಭಾರತೀಯರೇ ಹೆಚ್ಚಾಗಿ ವಾಸಿಸುತ್ತಿರುವ ಮಿಡ್‌ಲ್ಯಾಂಡ್ಸ್‌ನಲ್ಲಿ ಪೌಲ್ ಸುಮಾರು 50 ವರ್ಷಗಳ ಹಿಂದೆ ಉದ್ಯಮ ಆರಂಭಿಸಿದ್ದರು.
Next Story





