ಮ.ಪ್ರ.: ಒಬಿಸಿ ಮೀಸಲಾತಿ ಹೆಚ್ಚಳ

ಭೋಪಾಲ್,ಮಾ.9: ಇತರ ಹಿಂದುಳಿದ ವರ್ಗಗಳ (ಓಬಿಸಿ) ಮೀಸಲಾತಿ ಪ್ರಮಾಣವನ್ನು ಶೇ.14ರಿಂದ ಶೇ.27ಕ್ಕೆ ಹೆಚ್ಚಿಸುವುದಕ್ಕಾಗಿ ಮಧ್ಯಪ್ರದೇಶದ ಕಾಂಗ್ರೆಸ್ ಸರಕಾರವು ಅಧ್ಯಾದೇಶವನ್ನು ಜಾರಿಗೊಳಿಸಿದೆ.
ಮುಖ್ಯಮಂತ್ರಿ ಕಮಲ್‌ನಾಥ್ ಇತ್ತೀಚೆಗೆ ರೈತರಿಗೆ ಸಾಲಮನ್ನಾ ಪ್ರಮಾಣಪತ್ರಗಳನ್ನು ವಿತರಿಸುತ್ತಿದ್ದ ಸಂದರ್ಭದಲ್ಲಿ ಈ ಘೋಷಣೆ ಮಾಡಿದ್ದರು. ಓಬಿಸಿ ಮೀಸಲಾತಿ ಪ್ರಮಾಣವನ್ನು ಶೇ.27ಕ್ಕೆ ಹೆಚ್ಚಿಸುವುದಕ್ಕಾಗಿ . 1994ರ ಮಧ್ಯಪ್ರದೇಶ ಲೋಕಸೇವಾ ಅಧಿನಿಯಮ (ಅನುಸೂಚಿತ ಜಾತಿ,ಅನುಸೂಚಿತ ಪಂಗಡ ಹಾಗೂ ಓಬಿಸಿ ಮೀಸಲಾತಿ) ಕಾಯ್ದೆಗೆ ತಿದ್ದುಪಡಿ ಮಾಡುವ ಅಧ್ಯಾದೇಶಕ್ಕೆ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಸಹಿಹಾಕಿರುವುದಾಗಿ ರಾಜ್ಯ ಸರಕಾರದ ಮೂಲಗಳು ತಿಳಿಸಿವೆ.
Next Story





