ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ಚಾಲನೆ

ಹೊಸದಿಲ್ಲಿ, ಮಾ.9: ಶನಿವಾರ ರಾಷ್ಟ್ರೀಯ ಲಸಿಕೆ ದಿನದ ಸಂದರ್ಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಹೊಸದಿಲ್ಲಿಯ ರಾಷ್ಟ್ರಪತಿ ಭವನದಲ್ಲಿ ಮಕ್ಕಳ ಬಾಯಿಗೆ ಪೊಲಿಯೊ ಲಸಿಕೆಯ ಹನಿ ಹಾಕುವ ಮೂಲಕ 2019ರ ಪಲ್ಸ್ ಪೋಲಿಯೊ ಅಭಿಯಾನಕ್ಕೆ ಚಾಲನೆ ನೀಡಿದರು.
ಪಲ್ಸ್ ಪೋಲಿಯೊ ಅಭಿಯಾನದಡಿ ದೇಶದಿಂದ ಪೋಲಿಯೊ ಪೀಡೆಯನ್ನು ದೂರವಿಡಲು ದೇಶಾದ್ಯಂತ ಐದಕ್ಕಿಂತ ಕಡಿಮೆ ವಯಸ್ಸಿನ 17 ಕೋಟಿ ಮಕ್ಕಳಿಗೆ ಪೋಲಿಯೊ ಹನಿ ನೀಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ ನಡ್ಡ ತಿಳಿಸಿದ್ದಾರೆ.
ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಮೂಲಕ ಮಕ್ಕಳನ್ನು ಹೆಚ್ಚಿನ ರೋಗಗಳಿಂದ ರಕ್ಷಿಸುವುದರ ಮೇಲೆ ಗಮನ ಕೇಂದ್ರೀಕರಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಸರಕಾರದ ಇಂದ್ರಧನುಷ್ ಯೋಜನೆಯಡಿ 3.39 ಕೋಟಿ ಮಕ್ಕಳು ಮತ್ತು 87 ಲಕ್ಷ ಗರ್ಭಿಣಿತರಿಗೆ ಲಸಿಕೆ ಹಾಕಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
Next Story





