ಪಾಕಿಸ್ತಾನದ ಇನ್ನೊಂದು ಡ್ರೋಣ್ ನ್ನು ಹೊಡೆದುರುಳಿಸಿದ ಸೇನೆ

ಜೈಪುರ, ಮಾ.10: ರಾಜಸ್ಥಾನದ ಗಡಿಯಲ್ಲಿ ಭಾರತದ ಗಡಿಯೊಳಕ್ಕೆ ಪ್ರವೇಶಿಸಲು ಯತ್ನಿಸಿದ ಪಾಕಿಸ್ತಾನದ ಡ್ರೋಣ್ ನ್ನು ಗಡಿ ರಕ್ಷಣಾ ಪಡೆ(ಬಿಎಸ್ ಎಫ್) ಹೊಡೆದುರುಳಿಸಿದೆ.
ಕಳೆದ ಸೋಮವಾರ ಬೆಳಗ್ಗೆ ಪಾಕಿಸ್ತಾನದ ಡ್ರೋಣ್ ನ್ನು ಅಂತರ್ ರಾಷ್ಟ್ರೀಯ ಗಡಿಯಲ್ಲಿ ಭಾರತದ ವಾಯುಪಡೆ ಹೊಡೆದುರುಳಿಸಿತ್ತು. ಇದೀಗ ಇನ್ನೊಂದು ಡ್ರೋಣ್ ಭಾರತದ ಗಡಿ ದಾಟುವ ಯತ್ನದಲ್ಲಿ ಮುಗ್ಗರಿಸಿದೆ ಎಂದು ಮೂಲಗಳು ತಿಳಿಸಿವೆ. ಕಳೆದ 11 ದಿನಗಳಲ್ಲಿ ಪಾಕಿಸ್ತಾನ 4 ಡ್ರೋಣ್ ಗಳನ್ನು ಭಾರತದ ಗಡಿ ದಾಟಿಸಲು ಯತ್ನಿಸಿದೆ.
Next Story





