Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಪೊಳಲಿ ಶ್ರೀರಾಜರಾಜೇಶ್ವರಿ...

ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ

ಹರಕೆ ಸೀರೆಗಳಿಂದ ನಗರಾಲಂಕಾರಗೊಂಡ ಪೊಳಲಿ

ಅಬ್ದುಲ್ ರಹಿಮಾನ್ ತಲಪಾಡಿಅಬ್ದುಲ್ ರಹಿಮಾನ್ ತಲಪಾಡಿ10 March 2019 12:56 PM IST
share
ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ

ಬಂಟ್ವಾಳ : ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಅತ್ಯಂತ ವೈಭವದಿಂದ ಆರಂಭ ಗೊಂಡಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಬ್ಬದ ವಾತಾವರಣ ನೆಲೆಸಿವೆ.

ಪೊಳಲಿ ಸಾವಿರ ಸೀಮೆ ಸೀರೆಗಳಿಂದ ಶೃಂಗಾರಗೊಂಡಿದ್ದು, ಎಲ್ಲೆಡೆಯಲ್ಲೂ ಪತಾಕೆಗಳೇ ಮೇಳೈಸುತ್ತಿದೆ. ದೇವಸ್ಥಾನದ ಆವರಣ ಸೇರಿದಂತೆ ಸಾವಿರ ಸೀಮೆ ವಾಪ್ತಿಯಲ್ಲಿನ ಹಲವು ದ್ವಾರಗಳಲ್ಲಿ ಜರಿಸೀರೆಗಳನ್ನೇ ಅಂದವಾಗಿ ಜೋಡಿಸಿ ಊರೂರುಗಳೇ ಅಲಂಕಾರಗೊಂಡು, ಹತ್ತೂರ ಭಕ್ತರನ್ನು ಸ್ವಾಗತಿಸುತ್ತಿದೆ.

ದಿನದಿಂದ ದಿನಕ್ಕೆ ಹೊರೆಕಾಣಿಕೆ ಮೆರವಣಿಗೆಯೋಪಾದಿಯಲ್ಲಿ ಬರುತ್ತಿದ್ದು, ಉಗ್ರಾಣಕ್ಕೆ ಸೇರಿದ ಯಾವುದೇ ವಸ್ತುಗಳೂ ಹಾಳಾಗದಂತೆ ಅದನ್ನು ಸದ್ಬಳಕೆ ಮಾಡಿ ಆಗಮಿಸಿದ ಭಕ್ತರ ಹಸಿವು, ಬಾಯಾರಿಕೆ ತಣಿಸುವ ಕಾರ್ಯವನ್ನು ಕಾರ್ಯಕರ್ತರು ಮಾಡುತ್ತಿದ್ದಾರೆ.

ವಿಶಾಲವಾದ ಉಗ್ರಾಣ ವ್ಯವಸ್ಥೆ

ಹೊರೆಕಾಣಿಕೆಗೆ ಸಂಬಂಧಿಸಿ ಬಂದ ವಸ್ತುಗಳನ್ನು ಸಂಗ್ರಹಿಸಲು ವಿಶಾಲವಾದ ಉಗ್ರಾಣದಲ್ಲಿ ಅಕ್ಕಿ, ತರಕಾರಿ, ಸೀಯಾಳ ಸಹಿತ ನಾನಾ ರೀತಿಯ ಫಲವಸ್ತುಗಳನ್ನು ಶೇಖರಿಸಿಡಲಾಗುತ್ತದೆ. ಕಳೆದ ಎರಡು ದಿನಗಳಿಂದ ಅಂದಾಜು 25 ಸಾವಿರಕ್ಕೂ ಅಧಿಕ ಮಂದಿ ಕಳುಹಿಸಿದ ವಸ್ತುಗಳು ಸಂಗ್ರಹಗೊಂಡಿವೆ.

ಪಾನಕದಿಂದ ಊಟೋಪಚಾರದವರೆಗೆ

ಬ್ರಹ್ಮಕಲಶದ ಪ್ರಯುಕ್ತ ಮಾ.13ರ ತನಕ ವಿವಿಧ ಭಕ್ಷ ಭೋಜನಗಳನ್ನು ಸುಮಾರು 50 ಮಂದಿ ಬಾಣಸಿಗರ ತಂಡ ಸಿದ್ಧಪಡಿಸಲಿದೆ. ಬೆಳಗ್ಗೆ 7ರಿಂದಲೇ ಉಪಾಹಾರ, ಮಧ್ಯಾಹ್ನ 12ರಿಂದ ಅನ್ನಪ್ರಸಾದ, ಸಂಜೆ 3ರಿಂದ ಉಪಹಾರ, ರಾತ್ರಿ ಊಟದ ವ್ಯವಸ್ಥೆ 11 ಗಂಟೆವರೆಗೂ ಇರುತ್ತದೆ. ಪೊಳಲಿಗೆ ಬಂದವರು ಹಸಿದ ಹೊಟ್ಟೆಯಲ್ಲಿ ಮರಳಬಾರದು ಎಂದು ಆತಿಥ್ಯದ ಹೊಣೆ ಹೊತ್ತ ಕಾರ್ಯಕರ್ತರು, ಸ್ವಯಂಸೇವಕರು ಬಂದವರೆಲ್ಲರಿಗೂ ಬಾಯಾರಿಕೆ ತಣಿಸಲು ನೀರು, ಪಾನಕದಿಂದ ಊಟೋಪಚಾರದವರೆಗೆ ಒದಗಿಸುತ್ತಿದ್ದಾರೆ. ಊಟೋಪಚಾರದ ತಯಾರಿಗಾಗಿ 43 ಒಲೆಗಳು, 15ಕ್ಕೂ ಅಧಿಕ ಗ್ಯಾಸ್ ಸ್ಟವ್‌ಗಳನ್ನು ಬಳಸಿಕೊಂಡು ಸುಮಾರು 250 ಬಾಣಸಿಗರು ರುಚಿಯಾದ ಪ್ರಸಾದ ಭೋಜನ, ಉಪಾಹಾರಗಳನ್ನು ಸಿದ್ಧಗೊಳಿಸುತ್ತಿದ್ದಾರೆ.

ವಿಶಾಲವಾದ ಪಾರ್ಕಿಂಗ್-ಗರಿಷ್ಠ ಸ್ವಚ್ಛತೆ

ಬ್ರಹ್ಮಕಲಶೋತ್ಸವದ ಪ್ರಯುಕ್ತ ದೇವಸ್ಥಾನಕ್ಕೆ ಆಗಮಿಸುವ ಭಕ್ತರ ವಾಹನ ನಿಲುಗಡೆಗಾಗಿ ಸುಮಾರು 22 ಎಕರೆ ಪ್ರದೇಶಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ವಾಹನ ನಿಲುಗಡೆಗೆ ಯಾವುದೇ ಅಡಚಣೆಯಾಗದಂತೆ ಸ್ವಯಂಸೇವಕರ ತಂಡ ಕಾರ್ಯನಿರ್ವಹಿಸುತ್ತಿದೆ. ದೇವಸ್ಥಾನದಲ್ಲಿ ಸ್ವಚ್ಛತೆಗೆ ಗರಿಷ್ಟ ಆದ್ಯತೆ ನೀಡಲಾಗಿದ್ದು, ದ್ರವ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಅಳವಡಿಸಲಾಗಿದೆ. ಸುಮಾರು 50 ಸಾವಿರ ಲೀಟರ್ ಸಾಮರ್ಥ್ಯದ ದ್ರವ ತ್ಯಾಜ್ಯ ಘಟಕವನ್ನು ಸ್ಥಾಪಿಸಲಾಗಿದ್ದು, ಇಲ್ಲಿ ಕೈತೊಳೆದ ನೀರು, ಅಡುಗೆ ತಯಾರಿ ವಸತಿಗೃಹ, ಕಲ್ಯಾಣ ಮಂಟಪದ ತ್ಯಾಜ್ಯ ನೀರು, ಶೌಚಗೃಹಗಳ ತ್ಯಾಜ್ಯನೀರನ್ನು ಎಲ್ಲೂ ಹೊರಗೆ ಹರಿಯಲು ಬಿಡದೆ ಸಂಸ್ಕರಣೆ ಮಾಡಲಾಗುತ್ತದೆ.

ನಾನಾ ಭಾಗದ ಸ್ವಯಂಸೇವಕರ ತಂಡ

ತೆಂಗಿನಕಾಯಿ ಸುಲಿಯುವುದು, ಬಾಳೆಎಲೆಯನ್ನು ಸಜ್ಜುಗೊಳಿಸುವುದು, ಪಾಕಶಾಲೆಯಲ್ಲಿರುವ ತ್ಯಾಜ್ಯಗಳನ್ನು ವಿಲೇವಾರಿ ಮಾಡುವುದರ ಸಹಿತ ಹಲವು ಕಾರ್ಯಗಳನ್ನು ನೆರವೇರಿಸಲು ಸ್ವಯಂಸೇವಕರ ತಂಡವೇ ಒಳಗೊಂಡಿದೆ. ಇದಕ್ಕಾಗಿಯೇ ಬಂದಿರುವ ನಾನಾ ಭಾಗಗಳ ಕಾರ್ಯಕರ್ತರು ಉತ್ಸಾಹದಿಂದಲೇ ತೊಡಗಿಸಿಕೊಂಡಿದ್ದಾರೆ.

ಸಾವಿರ ಸೀಮೆಗಳ ಅಲಂಕಾರ

ಪೊಳಲಿಗೆ ಹರಕೆಯ ರೂಪದಲ್ಲಿ ಬಂದಿರುವ ಪಟ್ಟೆ ಸೀರೆಗಳನ್ನು ನಗರಾಲಂಕಾರಗೊಳಿಸಲು ವಿಶೇಷ ಅನುಮತಿ ಪಡೆದುಕೊಂಡು ಸಾವಿರ ಸೀಮೆಗಳನ್ನು ಅದರಿಂದಲೇ ಅಲಂರಿಸಲಾಗಿದೆ. ಸೀರೆಯಿಂದಲೇ ನಿರ್ಮಿಸಿದ ದ್ವಾರಗಳು, ತಳಿರುತೋರಣಗಳಿಂದಾಗಿ ಬ್ರಹ್ಮಕಲಶೋತ್ಸವದ ಸೊಬಗನ್ನು ಇಮ್ಮಡಿಗೊಳಿಸಿದೆ. ಇಡೀ ಜಿಲ್ಲೆಯಾದ್ಯಂತ ಹಲವು ಪ್ರದೇಶಗಳಲ್ಲಿ ಸೀರೆಯಿಂದಲೇ ನಗರವನ್ನು ಅಲಂಕರಿಸಲಾಗಿದ್ದು, ಇದು ಪೊಳಲಿ ಬ್ರ್ಮಕಲಶೋತ್ಸವದ ವಿಶೇಷತೆಯಾಗಿದೆ.

ಜೊತೆಗೆ ಬ್ಯಾನರ್, ಬಂಟಿಂಗ್ಸ್‌ಗಳನ್ನು ಅಳವಡಿಸಲಾಗಿದ್ದು, ಬಂಟ್ವಾಳ- ಬಿ.ಸಿ.ರೋಡ್‌ನಿಂದ ಪೊಳಲಿ ದ್ವಾರ ಮೂಲಕ ದೇವಸ್ಥಾನದವರೆಗೆ ಹಾಗೂ ಗುರುಪುರದ್ವಾರದಿಂದ ಪೊಳಲಿಯವರೆಗೆ ರಸ್ತೆಯುದ್ದಕ್ಕೂ ವಿಶೇಷ ರೀತಿಯಲ್ಲಿ ಶೃಂಗರಿಸಲಾಗಿದೆ.

ಮೂಡುಬಿದಿರೆಯಿಂದ ಮಂಗಳೂರು, ಬಂಟ್ವಾಳ, ಬಿ.ಸಿ.ರೋಡ್ ಸೇರಿ ಹಲವು ಪ್ರದೇಶಗಳು ಸಂಪೂರ್ಣವಾಗಿ ಶೃಂಗಾರಗೊಂಡು ದೂರದೂರಿನಿಂದ ಬರುವ ಭಕ್ತರನ್ನು ಬರಮಾಡಿಕೊಳ್ಳುತ್ತಿದೆ.

share
ಅಬ್ದುಲ್ ರಹಿಮಾನ್ ತಲಪಾಡಿ
ಅಬ್ದುಲ್ ರಹಿಮಾನ್ ತಲಪಾಡಿ
Next Story
X