157 ಜನರಿದ್ದ ಇಥಿಯೋಪಿಯನ್ ವಿಮಾನ ಪತನ
ನೈರೋಬಿ, ಮಾ.10: ಸುಮಾರು 149 ಪ್ರಯಾಣಿಕರು ಮತ್ತು 8 ಸಿಬ್ಬಂದಿಯಿದ್ದ ಇಥಿಯೋಪಿಯನ್ ಏರ್ ಲೈನ್ಸ್ ವಿಮಾನವೊಂದು ರವಿವಾರ ಪತನಗೊಂಡಿದೆ ಎಂದು ವರದಿಯಾಗಿದೆ.
ರಾಜಧಾನಿ ಅಡ್ಡಿಸ್ ಅಬಾಬದಿಂದ 62 ಕಿ.ಮೀ. ದೂರದಲ್ಲಿರುವ ಬಿಶೋಫ್ತು ಎಂಬ ಪಟ್ಟಣದ ಸಮೀಪ ವಿಮಾನ ಇಟಿ 302 ಪತನಗೊಂಡಿದೆ. “ಬೆಳಗ್ಗೆ 8:44ಕ್ಕೆ ಈ ಘಟನೆ ನಡೆದಿರುವುದು ಖಚಿತಗೊಂಡಿದೆ” ಎಂದು ವಕ್ತಾರರೊಬ್ಬರು ಮಾಹಿತಿ ನೀಡಿದ್ದಾರೆ.
Next Story