Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ಮನುವಾದದಿಂದ ಹೊರಬರುವುದೆಂದರೆ ಶೋಷಣೆಯಿಂದ...

ಮನುವಾದದಿಂದ ಹೊರಬರುವುದೆಂದರೆ ಶೋಷಣೆಯಿಂದ ಬಿಡುಗಡೆ: ಡಾ.ಬಂಜಗೆರೆ ಜಯಪ್ರಕಾಶ್

ವಾರ್ತಾಭಾರತಿವಾರ್ತಾಭಾರತಿ10 March 2019 10:04 PM IST
share
ಮನುವಾದದಿಂದ ಹೊರಬರುವುದೆಂದರೆ ಶೋಷಣೆಯಿಂದ ಬಿಡುಗಡೆ: ಡಾ.ಬಂಜಗೆರೆ ಜಯಪ್ರಕಾಶ್

ಬೆಂಗಳೂರು, ಮಾ.10: ಮನುವಾದದಿಂದ ಹೊರಬರುವುದು ಎಂದರೆ ಸಾವಿರಾರು ವರ್ಷಗಳಿಂದ ಅನುಭವಿಸುತ್ತಿರುವ ಅವಮಾನ, ಶೋಷಣೆ, ದೌರ್ಜನ್ಯಗಳಿಂದ ಬಿಡುಗಡೆಯಾಗಿದೆ ಎಂದು ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಹೇಳಿದ್ದಾರೆ.

ರವಿವಾರ ನಗರದ ಗಾಂಧಿ ಭವನದಲ್ಲಿ ದಲಿತ ಹಕ್ಕುಗಳ ಸಮಿತಿ ವತಿಯಿಂದ ಆಯೋಜಿಸಿದ್ದ ಮನುವಾದ ಮುಕ್ತ ಭಾರತ ಎಂಬ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಾವಿರಾರು ವರ್ಷಗಳಿಂದ ವರ್ಣಾಶ್ರಮ ಪದ್ಧತಿ ಅನುಸರಿಸಿಕೊಂಡು ಬಂದಿರುವ ಮನುಸ್ಮತಿಗೆ ಸಂವಿಧಾನ ಅಘಾತವನ್ನುಂಟು ಮಾಡಿದೆ. ಮನುವಾದದಿಂದ ಹೊರಬರುವುದು ಎಂದರೆ ಸಂವಿಧಾನ ಬದ್ಧವಾಗಿ ಬದುಕುವುದು ಎಂದರ್ಥ. ನಾವು ತಿನ್ನುವ ಆಹಾರ, ಮಾಡಬೇಕಾದ ಕೆಲಸ, ಹೊಂದಬೇಕಾದ ಸ್ಥಾನ-ಮಾನ ಸೇರಿದಂತೆ ಎಲ್ಲವೂ ಮನುವಾದದಲ್ಲಿದೆ. ಇದು ಕೆಲವರಿಗಷ್ಟೇ ಸೀಮಿತವಾದುದಾಗಿದೆ ಎಂದರು.

ದೇಶದಲ್ಲಿ ಮನುವಾದದಿಂದ ಶೂದ್ರರು, ತಳ ಸಮುದಾಯಗಳು ಅತ್ಯಂತ ಶೋಷಣೆಗೆ ಒಳಗಾಗಿದ್ದರು, ದೌರ್ಜನ್ಯ, ದಬ್ಬಾಳಿಕೆಗಳನ್ನು ಎದುರಿಸುತ್ತಿದ್ದರು. ಹೀಗಾಗಿ, ಅಂಬೇಡ್ಕರ್ ಸಂವಿಧಾನವನ್ನು ರಚನೆ ಮಾಡಿದರು. ಸಂವಿಧಾನ ತಂದಿದ್ದು, ಬಡತನ ನಿರ್ಮೂಲನೆಗೆ ಎಂದುಕೊಂಡಿದ್ದರು. ಆದರೆ, ಅವರು ರಚಿಸಿದ್ದು ಬಡತನ ನಿವಾರಣೆಗಾಗಿ ಅಲ್ಲ, ಶೋಷಿತರು ಸ್ವಾಭಿಮಾನದಿಂದ ಬದುಕುವಂತೆ ಮಾಡಲು ಎಂದು ಹೇಳಿದರು.

ಮೀಸಲಾತಿ ಎಂಬ ಪದದ ಮೂಲಕ ಶೋಷಿತರಿಗೆ ದ್ವನಿ ನೀಡಿದರು. ಅಲ್ಲದೆ, ಮೀಸಲಾತಿ ಎಂಬುದು ಅನ್ನ ನೀಡುವುದಕ್ಕಾಗಿ ಅಲ್ಲ, ಶೋಷಿತರು ಅಧಿಕಾರಕ್ಕೆ ಕಾಲಿಡಬೇಕು. ಅದರಿಂದಲೇ ಸ್ವಾಭಿಮಾನದಿಂದ ಬದುಕುವ ಅವಕಾಶ ಸಿಗುತ್ತದೆ ಎಂದು ಆಶಿಸಿದರು. ಶಿಕ್ಷಣ, ಸಂಸ್ಕೃತಿ, ರಾಜ್ಯಾಧಿಕಾರದಿಂದ ಹೊರಗಿಟ್ಟವರಿಗೆ ಅವರ ಪಾಲು ಸಿಗಬೇಕು ಎಂಬುದು ಸಂವಿಧಾನದ ಆಶಯವಾಗಿತ್ತು ಎಂದು ತಿಳಿಸಿದರು.

ಭಾರತದಲ್ಲಿ ಜಾತಿ ಪದ್ಧತಿ ಮುನ್ನೆಲೆಗೆ ಬರುವ ಮೊದಲೇ ಜಾತಿಗಳಿದ್ದವು. ಬುಡಕಟ್ಟು ಜನಾಂಗದಲ್ಲಿಯೂ ಜಾತಿಗಳಿದ್ದವು. ಆದರೆ, ಎಲ್ಲಿಯೂ ಜಾತಿಯ ಮೇಲು-ಕೀಳು ಎಂಬ ಭೇದ-ಭಾವವಿರಲಿಲ್ಲ. ಅಲ್ಲದೆ, ತಮ್ಮ ವೃತ್ತಿಗಳನ್ನಾಧರಿಸಿ ಕೆಲಸ ಮಾಡುತ್ತಾ ಬದುಕುತ್ತಿದ್ದರು. ಈ ವೇಳೆ ಮನುವಾದಿಗಳ ಪ್ರವೇಶದಿಂದ ಎಲ್ಲರನ್ನೂ ಒಂದೊಂದು ಜಾತಿಗೆ ಸೀಮಿತಗೊಳಿಸಿದರು. ಅಷ್ಟೇ ಅಲ್ಲದೆ, ಅಲ್ಲಿಯೇ ನಿರ್ಬಂಧಿಸುವ ಮೂಲಕ ಸಾಮಾಜಿಕ ಹಿಂಸೆ ನೀಡಿದ್ದಾರೆ ಎಂದು ದೂರಿದರು.

ಜಾತಿ ಆಧಾರದಲ್ಲಿ ಎಲ್ಲ ಗೌರವಗಳು ನಿಗದಿಯಾಗಬೇಕು ಎಂದು ಮನುವಾದ ಹೇಳುತ್ತದೆ. ಮನುವಾದ ಎಂಬುದು ದುಷ್ಟ ಮನಸ್ಥಿತಿ. ಸಾಮಾಜಿಕ ಹಿಂಸೆ, ಅಮಾನವೀಯ ಕೃತ್ಯಗಳನ್ನು ಪ್ರೋತ್ಸಾಹಿಸುತ್ತದೆ ಎಂದ ಅವರು, ಜಾತಿ ಬದಲಿಸಲು ಸಾಧ್ಯವಿಲ್ಲ. ಆದರೆ, ಜಾತಿಯಲ್ಲಿನ ಕೀಳುತನ, ಅವಮಾನ, ನಿರ್ಬಂಧಗಳನ್ನು ತೊಲಗಿಸಬೇಕು ಎಂದು ನುಡಿದರು.

ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕ ಸಿ.ಬಸವಲಿಂಗಯ್ಯ ಮಾತನಾಡಿ, ಹಿಂದೂ ಎನ್ನುವುದು ಒಂದು ಧರ್ಮವಲ್ಲ, ಅದಕ್ಕೆ ಅಪ್ಪ-ಅಮ್ಮ ಯಾರೂ ಇಲ್ಲ. ಇನ್ನು ಬ್ರಾಹ್ಮಣರು ಮನುವಾದಿಗಳಲ್ಲ. ಆದರೆ, ದೇಶದ ಜನರನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಕಲೆ ಚೆನ್ನಾಗಿ ತಿಳಿದುಕೊಂಡಿದ್ದಾರೆ. ಈ ಮೂಲಕ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ ಎಂದು ದೂರಿದರು.

ದೇಶದ ದಲಿತರ ತಲೆಯಲ್ಲಿ ಮನುವಾದ ತುಂಬಿಕೊಂಡಿದೆ ಎಂದ ಅವರು, ಮಗು ಹುಟ್ಟಿದ ಕೂಡಲೇ ಪುರೋಹಿತರನ್ನು ಕರೆದು ತಂದು ನಾಮಕರಣದ ಹೆಸರಿನಲ್ಲಿ ತಲೆಗೆ ತುಂಬಲಾಗುತ್ತಿದೆ. ಇನ್ನು ಹೊಸ ಮನೆಗಳನ್ನು ಕಟ್ಟಿದಾಗ ಮತ್ತದೇ ಪುರೋಹಿತರನ್ನು ತಂದು ಗೃಹಪ್ರವೇಶ ಮಾಡಿಸುತ್ತಾರೆ. ಈ ಮೂಲಕ ಮನುವಾದವನ್ನೇ ನಾವೇ ಹೇರಿಕೊಳ್ಳುತ್ತಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ದಲಿತ ಹಕ್ಕುಗಳ ಸಮಿತಿ ಸಂಚಾಲಕ ಗೋಪಾಲಕೃಷ್ಣ ಹರಳಹಳ್ಳಿ, ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಡಿ.ಶಿವಶಂಕರ್, ಡಿಎಚ್‌ಎಸ್ ರಾಜ್ಯ ಸಹ ಸಂಚಾಲಕ ಎನ್.ರಾಜಣ್ಣ, ರಾಷ್ಟ್ರೀಯ ಸಮಿತಿ ಸದಸ್ಯ ನಾಗರಾಜ ನಂಜುಂಡಯ್ಯ ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X