ಕೊಲಂಬಿಯದಲ್ಲಿ ವಿಮಾನ ಪತನ; 14 ಸಾವು

ಬೊಗೊಟ (ಕೊಲಂಬಿಯ), ಮಾ. 10: ಕೊಲಂಬಿಯದಲ್ಲಿ ಶನಿವಾರ ಸಂಭವಿಸಿದ ವಿಮಾನ ಅಪಘಾತವೊಂದರಲ್ಲಿ 14 ಮಂದಿ ಮೃತಪಟ್ಟಿದ್ದಾರೆ.
‘ಡಗ್ಲಾಸ್ ಡಿಸಿ-3’ ಎಂಬ ಅವಳಿ ಇಂಜಿನ್ ಪ್ರೊಪೆಲರ್ ವಿಮಾನವು ಸಾನ್ ಜೋಸ್ ಡೆಲ್ ಗ್ವಾವಿಯರ್ ಮತ್ತು ವಿಲಾವಿಸೆನ್ಶಿಯೊ ನಗರಗಳ ನಡುವೆ ಹಾರುತ್ತಿದ್ದಾಗ ಪತನಗೊಂಡಿತು.
‘‘ದುರದೃಷ್ಟವಶಾತ್ ಅಪಘಾತದಲ್ಲಿ ಯಾರೂ ಬದುಕುಳಿದಿಲ್ಲ’’ ಎಂದು ವಾಯುಯಾನ ಪ್ರಾಧಿಕಾರ ಹೇಳಿದೆ.
ಈ ವಿಮಾನದಲ್ಲಿ ಗರಿಷ್ಠ 30 ಮಂದಿ ಪ್ರಯಾಣಿಸಬಹುದಾಗಿದೆ.
Next Story





