Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು...

ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 9,26,035 ಮತದಾರರು: ಜಿಲ್ಲಾಧಿಕಾರಿ ಗೌತಮ್

ಲೋಕಸಭೆ ಚುನಾವಣೆ

ವಾರ್ತಾಭಾರತಿವಾರ್ತಾಭಾರತಿ11 March 2019 6:39 PM IST
share
ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 9,26,035 ಮತದಾರರು: ಜಿಲ್ಲಾಧಿಕಾರಿ ಗೌತಮ್

ಚಿಕ್ಕಮಗಳೂರು, ಮಾ.11: 2019ರ ಲೋಕಸಭೆ ಚುನಾವಣೆ ಘೋಷಣೆಯಾಗಿದ್ದು, ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಎ.18ಕ್ಕೆ ಮತದಾನ ನಡೆಯಲಿದೆ. ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಚುನಾವಣೆಗೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟು 9,26,035 ಜನ ಮತದಾರರಿದ್ದು, 4,62,020 ಪುರುಷ ಮತದಾರರು ಹಾಗೂ 4,63,973 ಮಹಿಳಾ ಮತದಾರರು ಮತ್ತು 42 ಇತರ ಮತದಾರರು ಜಿಲ್ಲೆಯಲ್ಲಿದ್ದಾರೆ. ಪುರುಷ ಮತದಾರರಗಿಂತ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ತಿಳಿಸಿದರು.

ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ 81,206 ಪುರುಷ, 83,190 ಮಹಿಳಾ, 4 ಇತರ ಮತದಾರರು ಸೇರಿ ಒಟ್ಟು 1,64,400 ಮತದಾರರು ಈ ಬಾರಿ ಮತ ಚಲಾಯಿಸಲಿದ್ದಾರೆ. ಮೂಡಿಗೆರೆ ಕ್ಷೇತ್ರದಲ್ಲಿ 82,405 ಪುರುಷ, 84,736 ಮಹಿಳಾ, 9 ಇತರ ಸೇರಿ 1,67,150. ಚಿಕ್ಕಮಗಳೂರು ಕ್ಷೇತ್ರದಲ್ಲಿ 1,06,238 ಪುರುಷ, 1,06,732 ಮಹಿಳಾ, 22 ಇತರ ಸೇರಿ 2,12,992. ತರೀಕೆರೆ ಕ್ಷೇತ್ರದಲ್ಲಿ 91,449 ಪುರುಷ, 90,222 ಮಹಿಳಾ ಮತದಾರರು ಸೇರಿ 1,81,671 ಮತದಾರರು ಹಾಗೂ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ 1,00,722 ಪುರುಷ, 99,093 ಮಹಿಳಾ, 7 ಇತರ ಮತದಾರರು ಸೇರಿ ಒಟ್ಟು 1,99,822 ಮತದಾರರಿದ್ದಾರೆಂದರು.

18 ವರ್ಷದಿಂದ 19 ವರ್ಷದೊಳಗಿನ 13,357 ಮತದಾರರು ಈ ಬಾರಿ ಹೊಸದಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಿದ್ದಾರೆ. ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ 2,867, ಮೂಡಿಗೆರೆ ಕ್ಷೇತ್ರದಲ್ಲಿ 2,083, ಚಿಕ್ಕಮಗಳೂರು ಕ್ಷೇತ್ರದಲ್ಲಿ 3,183, ತರೀಕೆರೆ ಕ್ಷೇತ್ರದಲ್ಲಿ 2,467 ಹಾಗೂ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ 2,757 ಯುವ ಮತದಾರರಿದ್ದಾರೆ. ಜಿಲಾದ್ಯಂತ ಎರಡು ಬಾರಿ ಮತದಾರರ ಮಿಂಚಿನ ನೋಂದಣಿ ನಡೆಸಲಾಗಿದೆ. ಫೆ.23 ಮತ್ತು 24 ರಂದು ನಡೆದ ಮಿಂಚಿನ ನೋಂದಣಿ ಕಾರ್ಯಕ್ರಮದಲ್ಲಿ 3,104 ಹಾಗೂ ಮಾ.2 ಮತ್ತು 3ರಂದು ನಡೆದ ಕಾರ್ಯಕ್ರಮದಲ್ಲಿ 3,726 ಅರ್ಜಿಗಳು ಸೇರಿ ಒಟ್ಟಾರೆ 6,830 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಇವುಗಳನ್ನು ಚುನಾವಣೆಗೂ ಮುನ್ನ ವಿಲೇವಾರಿ ಮಾಡಲಾಗುವುದು ಎಂದು ತಿಳಿಸಿದರು.

ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ಜಿಲ್ಲಾದ್ಯಂತ ಸರಕಾರಿ ಯೋಜನೆಗಳ ಜಾಹೀರಾತು, ಬಿತ್ತಿಪತ್ರ, ಬ್ಯಾನರ್ ಗಳು ಗೋಡೆ ಬರಹಗಳನ್ನು ತೆರವುಗೊಳಿಸುವ ಕಾರ್ಯ ಆರಂಭಿಸಲಾಗಿದೆ. ಇದಕ್ಕೆ ಜಿಲ್ಲಾ ಮತ್ತು ತಾಲೂಕು ಮಟ್ಟದ ತಂಡ ರಚಿಸಲಾಗಿದೆ. ಚುನಾವಣೆ, ಸರಕಾರಿ ಸಾಧನೆಗಳು, ಅಭ್ಯರ್ಥಿಗಳ ಪ್ರಚಾರದ ಪೋಸ್ಟರ್ ಗಳು, ಬ್ಯಾನರ್ ಗಳು ಕಂಡು ಬಂದಲ್ಲಿ ಅವುಗಳನ್ನು 24 ಗಂಟೆಯೊಳಗಾಗಿ ತೆರವುಗೊಳಿಸಿ ನಿಗದಿತ ನಮೂನೆಯಲ್ಲಿ ವರದಿ ಸಲ್ಲಿಸುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ಪರಿಷ್ಕರಣೆಗೂ ಮುನ್ನ ಜಿಲ್ಲೆಯಲ್ಲಿ 1170 ಲೋಕಸಭೆ ಚುನಾವಣಾ ಮತಗಟ್ಟೆಗಳಿದ್ದು, ಪರಿಷ್ಕರಣೆ ನಂತರ ಜಿಲ್ಲಾದ್ಯಂತ 1,222 ಮತಗಟ್ಟೆಗಳನ್ನು ತೆರೆಯಲಾಗುವುದು. ಶೃಂಗೇರಿ ಕ್ಷೇತ್ರದಲ್ಲಿ 256, ಮೂಡಿಗೆರೆ 231, ಚಿಕ್ಕಮಗಳೂರು 257, ತರೀಕೆರೆ 228 ಹಾಗೂ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ 250 ಮತಗಟ್ಟೆಗಳನ್ನು ಗುರುತಿಸಲಾಗಿದೆ ಎಂದ ಅವರು, ಈಗಾಗಲೇ ಮತಗಟ್ಟೆ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅವರ ವ್ಯಾಪ್ತಿಯ ಮತಗಟ್ಟೆಗಳನ್ನು ತಪಾಸಣೆ ಮಾಡಿದ್ದು, ಅಧಿಕಾರಿಗಳ ವರದಿಯಂತೆ ಮತಗಟ್ಟೆಗಳು ಎಲ್ಲ ಮೂಲಭೂತ ಸೌಕರ್ಯಗಳಾದ ರ್ಯಾಂಪ್ಸ್, ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಸಂಪರ್ಕ ಮತ್ತಿತರ ಸೌಲಭ್ಯಗಳನ್ನು ಹೊಂದಿವೆ ಎಂದರು.

ಚುನಾವಣೆ ಹಿನ್ನೆಲೆ ಜಿಲ್ಲಾದ್ಯಂತ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ. 22 ಚೆಕ್‍ಪೋಸ್ಟ್ ತೆರೆಯಲಾಗಿದ್ದು ತಂಡಗಳನ್ನು ರಚಿಸಲಾಗಿದೆ. ಚೆಕ್‍ ಪೋಸ್ಟ್ ಗಳು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲಿವೆ. ಶೃಂಗೇರಿ ವಿಧಾನಸಭಾ ಕ್ಷೇತ್ರದ ಎಸ್.ಕೆ.ಬಾರ್ಡರ್, ಬೇಗಾರು, ಗಡಿಕಲ್ಲು, ಕೊರಲಕೊಪ್ಪಗಳಲ್ಲಿ 4 ಚೆಕ್‍ಪೋಸ್ಟ್‍ಗಳು, ಮೂಡಿಗೆರೆ ಕ್ಷೇತ್ರದ ಕುದುರೆಮುಖ, ಕೊಟ್ಟಿಗೆಹಾರ, ಕಿರುಗುಂದ, ಕಸ್ಕೆಬೈಲು, ಬಸ್ಕಲ್, ಮಾಗಡಿ-ಕೈಮರ ಸೇರಿ 6 ಚೆಕ್‍ಪೋಸ್ಟ್‍ಗಳನ್ನು ತೆರೆಯಲಾಗಿದೆ. ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಕೆ.ಬಿ.ಹಾಳ್ ಮತ್ತು ದೇವನೂರು ಗ್ರಾಮದಲ್ಲಿ 2, ತರೀಕೆರೆ ಕ್ಷೇತ್ರದ ಎಂ.ಸಿ.ಹಳ್ಳಿ, ಎಂ.ಎನ್.ಕ್ಯಾಂಪ್, ನಾಗಭುವನಹಳ್ಳಿ, ಭಕ್ತನಕಟ್ಟೆಯಲ್ಲಿ 4 ಹಾಗೂ ಕಡೂರು ವಿಧಾನಸಭಾ ಕ್ಷೇತ್ರದ ಬಸವನಹಳ್ಳಿ ದಿಬ್ಬ, ಪಂಚನಹಳ್ಳಿ, ಗಡಿ ಅಹಮದ್ ನಗರ, ದೇವರಹಳ್ಳಿ, ಮರವಂಜಿ ಹಾಗೂ ಚೌಳಹಿರಿಯೂರು ಸೇರಿ 6 ಚೆಕ್‍ಪೋಸ್ಟ್ ಗಳನ್ನು ತೆರೆಯಲಾಗಿದೆ. ಚುನಾವಣೆಯನ್ನು ಪಾರದರ್ಶಕವಾಗಿ ನಡೆಸುವ ಹಿನ್ನೆಲೆ 30 ಫ್ಲೈಯಿಂಗ್ ಸ್ಕ್ವಾಡ್, 66 ಸ್ಟಾಟಿಕ್ ಸರ್ವೆಲೆನ್ಸ್ ತಂಡ, 128 ಸೆಕ್ಟರ್ ಆಫೀಸರ್ಸ್, 15 ವೀಡಿಯೋ ಸರ್ವೆಲೆನ್ಸ್ ತಂಡ, 5 ವೀಡಿಯೋ ವ್ಯೂವಿಂಗ್ ತಂಡ, 5 ಲೆಕ್ಕಪರಿಶೋಧಕರ ತಂಡ, 5 ಅಸಿಸ್ಟೆಂಟ್ ಎಕ್ಸ್‍ಪೆಂಡೀಚರ್ ತಂಡ ರಚಿಸಲಾಗಿದೆ ಎಂದರು. 

ಮತದಾರರ ಮಾಹಿತಿ ಕೇಂದ್ರವನ್ನು ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ಶಾಖೆಯಲ್ಲಿ ತೆರೆಯಲಾಗಿದೆ. ಈ ಕೇಂದ್ರದಲ್ಲಿ ದಿನದ 24 ಗಂಟೆಯೂ ಮತದಾರರಿಗೆ ಮಾಹಿತಿ, ಸಲಹೆ ಮತ್ತು ದೂರುಗಳನ್ನು ಸ್ವೀಕರಿಸಲಾಗುವುದು. ಜಿಲ್ಲೆಯ ಒಳಗಿನವರು 1950ಕ್ಕೆ ಮತ್ತು ಜಿಲ್ಲೆಯ ಹೊರಗಿನ ಮತದಾರರು 08262-1950ಕ್ಕೆ ಕರೆ ಮಾಡಿ ದೂರು ನೀಡಲು ಹಾಗೂ ಮಾಹಿತಿ ಮತ್ತು ಸಲಹೆ ಪಡೆಯಲು ಅವಕಾಶವಿದೆ ಎಂದರು.

ಜಿಲ್ಲೆಯಲ್ಲಿ ಒಟ್ಟಾರೆ 12,073 ಪರವಾನಿಗೆ ಹೊಂದಿರುವ ಶಸ್ತ್ರ, ಆಯುಧಗಳು ಇದ್ದು, ಇವುಗಳನ್ನು 7 ದಿನಗಳ ಒಳಗಾಗಿ ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ ಠೇವಣಿ ಇಡಬೇಕಾಗಿರುತ್ತದೆ. ಈ ಬಗ್ಗೆ ಈಗಾಗಲೆ ಪರವಾನಗಿದಾರರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಹರೀಶ್ ಪಾಂಡೆ, ಜಿ.ಪಂ. ಸಿಇಒ ಎಸ್.ಅಶ್ವತಿ, ಎಡಿಸಿ ಕುಮಾರ್ ಉಪಸ್ಥಿತರಿದ್ದರು.

ನೀತಿ ಸಂಹಿತೆ ಉಲ್ಲಂಘನೆ ದೂರು ನೀಡಲು ಸಿ-ವಿಜಲ್ ಆಪ್: 
ಚುನಾವಣಾ ಆಯೋಗವು ಹೊಸ ಆಂಡ್ರಾಯ್ಡ್ ಆಪ್ ಆರಂಭಿಸಿದ್ದು ಇದನ್ನು ಸಿ-ವಿಜಲ್ ಎಂದು ಕರೆಯಲಾಗಿದೆ. ಈ ಆಪ್ ಮೂಲಕ ಸಾಮಾನ್ಯ ನಾಗರಿಕರು ತಮ್ಮ ಗುರುತನ್ನು ಬಿಟ್ಟು ಕೊಡದೆ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಪುರಾವೆ ದಾಖಲೆಗಳೊಂದಿಗೆ ದೂರು ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಆಪ್ ಮೊಬೈಲ್‍ನಲ್ಲಿನ ಜಿಪಿಎಸ್ ಮತ್ತು ಇಂಟರ್ ನೆಟ್ ಬಳಸಿಕೊಂಡು ಎಂಸಿಸಿ ಉಲ್ಲಂಘನೆಯ ಸ್ಥಳವನ್ನು ಗುರುತಿಸಿಕೊಳ್ಳುತ್ತದೆ. ಫೋಟೋ ಅಥವಾ ವೀಡಿಯೋಗಳನ್ನು ಈ ಆಪ್ ಮೂಲಕ ತೆಗೆದು ಉಲ್ಲಂಘನೆಯ ವಿಧವನ್ನು ಆಯ್ಕೆ ಮಾಡಿ, ಸ್ಥಳದ ವಿವರವಾದ ಗುರುತನ್ನು ನಮೂದಿಸಿ ಆನ್‍ಲೈನ್‍ನಲ್ಲಿ ದಾಖಲಿಸಿದರೆ ದೂರುದಾರರಿಗೆ ಸಿ-ವಿಜಿಲ್ ದೂರಿನ ಐಡಿ ಸಂದೇಶ ಬರುತ್ತದೆ. ಈ ಐಡಿ ಬಳಸಿಕೊಂಡು ದೂರಿನ ಮಾಹಿತಿಯನ್ನು ತಿಳಿಯಬಹುದು. ಈ ರೀತಿ ದಾಖಲಾದ ದೂರಿನ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿ ಕಚೇರಿಯ ಕಂಟ್ರೋಲ್ ಸೆಂಟರ್ ನಲ್ಲಿ 5 ನಿಮಿಷಗಳೊಳಗೆ ಎಂಸಿಸಿ ಉಲ್ಲಂಘನೆ ನಡೆದ ವ್ಯಾಪ್ತಿಯ ಎಸ್.ಸಿ.ಒ./ವಿ.ಎಸ್.ಟಿ./ಎಫ್.ಎಸ್.ಟಿ. ತಂಡಗಳಿಗೆ ಗುರುತಿಸಿ ರವಾನಿಸಲಾಗುವುದು. ಸದರಿ ತಂಡ ಘಟನೆ ನಡೆದ ಸ್ಥಳಕ್ಕೆ 15 ನಿಮಿಷದೊಳಗೆ ತೆರಳಿ 30 ನಿಮಿಷದೊಳಗೆ ಅಲ್ಲಿನ ಘಟನಾ ವರದಿಯನ್ನು ಆನ್‍ಲೈನ್‍ನಲ್ಲಿಯೇ ಸಲ್ಲಿಸಬೇಕಾಗುತ್ತದೆ. ಹೀಗೆ ಸಲ್ಲಿಸಲಾದ ವರದಿಯ ಎ.ಆರ್.ಒ.ಗಳಿಗೆ ತೀರ್ಮಾನಕ್ಕಾಗಿ ಸಲ್ಲಿಕೆಯಾಗುತ್ತದೆ. ಈ ಹಂತಕ್ಕೆ 50 ನಿಮಿಷಗಳನ್ನು ನಿಗದಿ ಮಾಡಲಾಗಿದೆ. ಹೀಗೆ 100 ನಿಮಿಷದೊಳಗೆ ಒಂದು ಎಂಸಿಸಿ ಉಲ್ಲಂಘನೆಯ ದೂರು ಪರಿಣಾಮಕಾರಿಯಾಗಿ ಮಾಡಲು ಸಾಧ್ಯವಾಗುತ್ತದೆ. ಪೋಟೋ ಮತ್ತು ವಿಡಿಯೋಗಳು ಇರುವುದರಿಂದ ಆರೋಪಿಗಳು ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.

- ಡಾ.ಬಗಾದಿ ಗೌತಮ್, ಜಿಲ್ಲಾಧಿಕಾರಿ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X