ಅಕ್ರಮ ಮದ್ಯ ಸಾಗಾಟ: 13.13 ಲಕ್ಷ ಮೌಲ್ಯದ ಮದ್ಯ ಜಪ್ತಿ
ಲೋಕಸಭಾ ಚುನಾವಣೆ ಹಿನ್ನೆಲೆ
ಬೆಂಗಳೂರು, ಮಾ.11: ಲೋಕಸಭಾ ಚುನಾವಣೆ ಪ್ರಕ್ರಿಯೆ ಹಿನ್ನೆಲೆ ಅಕ್ರಮ ಮದ್ಯ ಸಾಗಾಟ ಆರೋಪ ಸಂಬಂಧ ರಾಜ್ಯ ವ್ಯಾಪ್ತಿ ಪ್ರತ್ಯೇಕ 9 ಪ್ರಕರಣಗಳನ್ನು ಭೇದಿಸಿರುವ ಅಬಕಾರಿ ಇಲಾಖೆಯ ವಿಚಕ್ಷಣ ದಳದ ಸಿಬ್ಬಂದಿ, 13.13 ಲಕ್ಷ ರೂ. ಮೌಲ್ಯದ ಮದ್ಯ ಜಪ್ತಿ ಮಾಡಿದ್ದಾರೆಂದು ಮೂಲಗಳು ತಿಳಿಸಿವೆ.
ಲೋಕಸಭಾ ಚುನಾವಣೆಯ ಸಲುವಾಗಿ ಅಬಕಾರಿ ಅಕ್ರಮ ತಡೆಗಟ್ಟುವ ಸಂಬಂಧ ಅಬಕಾರಿ ಆಯುಕ್ತರ ನಿರ್ದೇಶನದಲ್ಲಿ ಅಬಕಾರಿ ಇಲಾಖೆ ರಾಜ್ಯ ವಿಚಕ್ಷಣ ದಳದ ಸಿಬ್ಬಂದಿ ಫೆಬ್ರವರಿಯಿಂದೀಚೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾರ್ಯಾಚರಣೆ ಕೈಗೊಂಡು 9 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಮದ್ಯ ಮಾತ್ರವಲ್ಲದೆ, ಕಾರು ಸೇರಿದಂತೆ 5 ವಾಹನಗಳನ್ನು ವಶಪಡಿಸಿಕೊಂಡಿರುವ ಸಿಬ್ಬಂದಿ, 2,576 ಲೀಟರ್ ಗೋವಾ ರಾಜ್ಯದ ಮದ್ಯ, 65 ಲೀಟರ್ ಸೇಂದಿ, 94 ಲೀಟರ್ ಮದ್ಯ, 3,300 ಲೀಟರ್ ಬಿಯರ್ ವಶಪಡಿಸಿಕೊಂಡು ನಾಲ್ವರನ್ನು ಬಂಧಿಸಲಾಗಿದ್ದು, ಎಲ್ಲಾ ಪ್ರಕರಣಗಳ ತನಿಖೆ ಪ್ರಗತಿಯಲ್ಲಿದೆ.
Next Story