ದಾನಕ್ಕಾಗಿ 3 ಲಕ್ಷಕ್ಕೂ ಅಧಿಕ ಉಡುಪುಗಳ ಸಂಗ್ರಹ: ಉದಯಪುರ ರಾಜ ಕುಟುಂಬದ ಸದಸ್ಯರಿಂದ ಗಿನ್ನೆಸ್ ದಾಖಲೆ

ಉದಯಪುರ, ಮಾ. 11: ದಾನಕ್ಕಾಗಿ ಅಭಿಯಾನ ನಡೆಸಿ ದಾನಿಗಳಿಂದ 3 ಲಕ್ಷಕ್ಕೂ ಅಧಿಕ ಉಡುಪುಗಳನ್ನು ಸಂಗ್ರಹಿಸುವ ಮೂಲಕ ಉದಯಪುರದ ಈ ಹಿಂದಿನ ರಾಜ ಕುಟುಂಬದ ಸದಸ್ಯರು ಗಿನ್ನೆಸ್ ದಾಖಲೆ ನಿರ್ಮಿಸಿದ್ದಾರೆ.
ರಜಪೂತರ ರಾಜ ಮಹಾರಾಣಾ ಪ್ರತಾಪ ಅವರ ವಂಶಸ್ಥರಾದ ಲಕ್ಷರಾಜ್ ಸಿಂಗ್ ಈ ದಾಖಲೆ ನಿರ್ಮಿಸಿರುವುದಕ್ಕಾಗಿ ಇಂಗ್ಲೆಂಡ್‌ನ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನ ಅಧಿಕಾರಿಗಳಿಂದ ಉದಯಪುರದಲ್ಲಿ ರವಿವಾರ ಪ್ರಮಾಣ ಪತ್ರ ಸ್ವೀಕರಿಸಿದ್ದಾರೆ ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ. ಅವರು ‘ವಸ್ತ್ರದಾನ ಅಭಿಯಾನ’ದ ಮೂಲಕ 76 ಸಾವಿರ ದಾನಿಗಳಿಂದ 3,29,250ಕ್ಕೂ ಅಧಿಕ ಉಡುಪುಗಳನ್ನು ಸಂಗ್ರಹಿಸುವ ಮೂಲಕ ಹಾಗೂ ಈ ಉಡುಪುಗಳನ್ನು ಅಗತ್ಯ ಇರುವವರಿಗೆ ವಿತರಣೆ ಮಾಡುವ ಮೂಲಕ ಗಿನ್ನೆಸ್ ದಾಖಲೆ ಮಾಡಿದ್ದಾರೆ.
ಈ ಅಭಿಯಾನ 120 ಶಾಲೆಗಳು, 12 ಕಾಲೇಜುಗಳು ಹಾಗೂ ಸುಮಾರು 30 ಸರಕಾರೇತರ ಸಂಸ್ಥೆಗಳನ್ನು ತಲುಪಿದೆ ಎಂದು ಅವರು ತಿಳಿಸಿದ್ದಾರೆ.
Next Story





