3 ತಿಂಗಳಿಂದ ಸಂಬಳವಿಲ್ಲ: 'ಏಕತೆಯ ಪ್ರತಿಮೆ'ಗಾಗಿ ಕೆಲಸ ಮಾಡಿದ ಕಾರ್ಮಿಕರಿಂದ ಪ್ರತಿಭಟನೆ

ಹೊಸದಿಲ್ಲಿ, ಮಾ.11: ಸರ್ದಾರ್ ವಲ್ಲಭಭಾಯಿ ಪಟೇಲರ ಏಕತೆಯ ಪ್ರತಿಮೆಗಾಗಿ ಕೆಲಸ ಮಾಡಿದ 100ಕ್ಕೂ ಹೆಚ್ಚು ಕೆಲಸಗಾರರು ಪ್ರತಿಭಟನೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಸುಮಾರು 3 ತಿಂಗಳುಗಳಿಂದ ಈ ಕಾರ್ಮಿಕರಿಗೆ ಸಂಬಳ ನೀಡಿಲ್ಲ ಎಂದು newscentral24x7.com ವರದಿ ಮಾಡಿದೆ.
ಏಕತೆಯ ಪ್ರತಿಮೆಗಾಗಿ ಕಂಪೆನಿಯೊಂದರ ಕೆಳಗೆ ಕೆಲಸ ಮಾಡುತ್ತಿರುವ ಈ ಕಾರ್ಮಿಕರು ತಮ್ಮನ್ನು ಶೋಷಿಸಲಾಗಿದೆ ಎಂದು ಆರೋಪಿಸಿದ್ದಾರೆ. ತಮಗೆ ಬಾಕಿಯಿರುವ ಸಂಬಳಕ್ಕೆ ಆಗ್ರಹಿಸಿ ಕಾರ್ಮಿಕರು ಏಕತೆಯ ಪ್ರತಿಮೆಯ ಮುಂಭಾಗ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿರುವುದಾಗಿ ವರದಿಯಾಗಿದೆ.
ಸಂಬಳ ಸಿಗದೆ ಇರುವ ಕಾರಣ ನಮ್ಮ ಬದುಕು ಕಷ್ಟವಾಗಿದೆ ಎಂದು ಭದ್ರತಾ ಸಿಬ್ಬಂದಿ, ಗಾರ್ಡನರ್ ಗಳು, ಕಸ ಗುಡಿಸುವವರು, ಲಿಫ್ಟ್ ಮೆನ್, ಟಿಕೆಟ್ ಪರಿಶೀಲಕರಾಗಿ ಕೆಲಸ ಮಾಡುತ್ತಿರುವ ಪುರುಷ ಮತ್ತು ಮಹಿಳಾ ಕಾರ್ಮಿಕರು ಆರೋಪಿಸಿದ್ದಾರೆ ಎಂದು newscentral24x7.com ವರದಿ ಮಾಡಿದೆ.
Next Story





