ಅಮೆರಿಕದ ಸೈಕ್ಲಿಸ್ಟ್ ಕೆಲ್ಲಿ ಕಾಟ್ಲಿನ್ ನಿಧನ

ನ್ಯೂಯಾರ್ಕ್, ಮಾ.11: ಅಮೆರಿಕದ ಒಲಿಂಪಿಯನ್ ಹಾಗೂ ಮೂರು ಬಾರಿ ವಿಶ್ವ ಟ್ಟ್ರಾಕ್ ಚಾಂಪಿಯನ್ ಆಗಿರುವ ಕೆಲ್ಲಿ ಕಾಟ್ಲಿನ್ ನಿಧನರಾಗಿದ್ದಾರೆ. ಅವರಿಗೆ 23 ವರ್ಷ ವಯಸ್ಸಾಗಿತ್ತು.
ಅಮೆರಿಕದ ಸೈಕ್ಲಿಂಗ್ ರಾಷ್ಟ್ರೀಯ ತಂಡದ ಸದಸ್ಯೆಯಾಗಿರುವ ಕಾಟ್ಲಿನ್ 2016ರಲ್ಲಿ ನಡೆದ ರಿಯೋ ಒಲಿಂಪಿಕ್ಸ್ ನಲ್ಲಿ 2ನೇ ಸ್ಥಾನ ಪಡೆದು ಬೆಳ್ಳಿ ಪದಕ ಜಯಿಸಿದ್ದರು. 2016ರಿಂದ 2018ರ ತನಕ ಸತತ ಮೂರು ಬಾರಿ ವಿಶ್ವ ಟ್ರಾಕ್ ಚಾಂಪಿಯನ್‌ಶಿಪ್‌ನ ಟೀಮ್ ಪ್ರಶಸ್ತಿ ಜಯಿಸಿದ್ದರು. ರಸ್ತೆಯ ಮೇಲೆ ರ್ಯಾಲಿ ಯುಎಚ್‌ಸಿ ಪ್ರೊ ಸೈಕ್ಲಿಂಗ್ ತಂಡದ ರೇಸ್‌ನಲ್ಲಿ ಭಾಗವಹಿಸಿದ್ದರು. ಸೈಕ್ಲಿಂಗ್ ವೃತ್ತಿಯೊಂದಿಗೆ ಸ್ಟಾನ್‌ಫೋರ್ಡ್ ವಿಶ್ವವಿದ್ಯಾನಿಲಯದಲ್ಲಿ ಕಂಪ್ಯೂಟೇಶನಲ್ ಮ್ಯಾಥಮ್ಯಾಟಿಕ್ಸ್ ನಲ್ಲಿ ಪದವಿ ಓದುತ್ತಿದ್ದಾರೆ. ಕೆಲ್ಲಿ ಕಾಟ್ಲಿನ್ ತಂದೆ ಮಾರ್ಕ್ ಕಾಟ್ಲಿನ್ ಯುಎಸ್ ಸೈಕಲಿಸ್ಟ್ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಖಚಿತಪಡಿಸಿದ್ದಾರೆ. ‘‘ಅಮೆರಿಕ ಸೈಕ್ಲಿಂಗ್ ರಾಷ್ಟ್ರೀಯ ತಂಡದ ಸದಸ್ಯರಾಗಿದ್ದ ಕೆಲ್ಲಿ ಕಾಟ್ಲಿನ್ ನಿಧನದಿಂದಾಗಿ ಅಮೆರಿಕದ ಸೈಕ್ಲಿಂಗ್ ಸಮುದಾಯ ಭಾರೀ ನಷ್ಟ ಅನುಭವಿಸಿದೆ. ಕಾಟ್ಲಿನ್ ಕುಟುಂಬಕ್ಕಾಗಿ ನಾವು ಪ್ರಾರ್ಥಿಸುತ್ತೇವೆ. ಅವರ ಕುಟುಂಬವೀಗ ಕಷ್ಟದ ಸಮಯ ಎದುರಿಸುವಂತಾಗಿದೆ. ನಾವು ಅವರ ಖಾಸಗಿತನಕ್ಕೆ ಗೌರವ ನೀಡಿ ಪರಸ್ಪರ ಬೆಂಬಲ ನೀಡುವೆವು’’ ಎಂದು ಅಮೆರಿಕದ ಸೈಕ್ಲಿಂಗ್ ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದೆ.





