ಸಂಪ್ಯ ಉಸ್ಮಾನ್ ಹಾಜಿ ನಿಧನ

ಪುತ್ತೂರು: ಸಾಮಾಜಿಕ ಮುಂದಾಳು, ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಸಂಪ್ಯ ನಿವಾಸಿ ದಿ. ಸಂಪ್ಯ ಇಬ್ರಾಹಿಂ ಹಾಜಿ ಅವರ ಪುತ್ರ ಸಂಪ್ಯ ಉಸ್ಮಾನ್ ಹಾಜಿ (64) ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು.
ಕಾಂಗ್ರೆಸ್ ಮುಖಂಡರಾಗಿದ್ದ ಅವರು ಹಿಂದೆ ಪುತ್ತೂರು ಎಪಿಎಂಸಿಯ ಮಾಜಿ ಉಪಾಧ್ಯಕ್ಷರಾಗಿ, ಪಕ್ಷದ ಹಲವಾರು ಹುದ್ದೆಗಳ ಜವಾಬ್ದಾರಿಗಳನ್ನು ನಿಭಾಯಿಸಿದ್ದರು. ಪ್ರಸ್ತುತ ಪುತ್ತೂರು ತಾಲೂಕು ಮುಸ್ಲಿಂ ಸಂಯುಕ್ತ ಜಮಾಅತ್‌ನ ಉಪಾಧ್ಯಕ್ಷರಾಗಿದ್ದರು.
ಮೃತರು ಪತ್ನಿ, ಓರ್ವ ಪುತ್ರಿ, ಅಳಿಯ, ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.
Next Story





