Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಅಪರೂಪದ ರಾಜಕಾರಣಿ ಟಿ. ಆರ್. ಶಾಮಣ್ಣ

ಅಪರೂಪದ ರಾಜಕಾರಣಿ ಟಿ. ಆರ್. ಶಾಮಣ್ಣ

ಇಂದು ಶಾಮಣ್ಣನವರ 107ನೇ ಜನ್ಮದಿನ

ಕೆ.ಎಸ್. ನಾಗರಾಜ್ಕೆ.ಎಸ್. ನಾಗರಾಜ್13 March 2019 12:01 AM IST
share
ಅಪರೂಪದ ರಾಜಕಾರಣಿ ಟಿ. ಆರ್. ಶಾಮಣ್ಣ

1980ರಲ್ಲಿ ಲೋಕಸಭೆಗೆ ಇಡೀ ರಾಷ್ಟ್ರದ ಮಹಾನ್ ನಾಯಕರೆಲ್ಲ ಜನತಾ ಪಕ್ಷದಿಂದ ಸ್ಪರ್ಧಿಸಿ, ಸೋತು ಮನೆ ಸೇರಿದ್ದರು. ಆದರೆ ದಕ್ಷಿಣ ಭಾರತದಲ್ಲಿ ಒಬ್ಬನೇ ಒಬ್ಬ ವ್ಯಕ್ತಿ ಲೋಕಸಭೆಯನ್ನು ಪ್ರವೇಶಿಸಿದ್ದರು. ಈತ ಯಾರು ಎಂಬ ಕುತೂಹಲ ಎಲ್ಲರದೂ ಆಗಿತ್ತು. ಲೋಕಸಭೆಯಲ್ಲಿ ಈ ವ್ಯಕ್ತಿಯ ಉಡುಪು ಇವರ ದೇಹದ ಆಕಾರವನ್ನು ಕಂಡು ಎಲ್ಲರೂ ಹುಬ್ಬೇರಿಸಿದ್ದರು. ದಕ್ಷಿಣ ಭಾರತದಿಂದ ಅದರಲ್ಲೂ ಬೆಂಗಳೂರು ದಕ್ಷಿಣದಿಂದ ಡಿ.ಪಿ. ಶರ್ಮರ ಹಣಬಲದ ಎದುರಿನಲ್ಲಿ ನಿಂತು ಅಲೆ ಇಲ್ಲದ ಪಕ್ಷದ ಪರವಾಗಿ ಗೆದ್ದದ್ದು ಮತ್ತಾರೂ ಅಲ್ಲ, ಟಿ. ಆರ್. ಶಾಮಣ್ಣ. ಅವರು ಅಂದು ಇಡೀ ರಾಷ್ಟ್ರದ ಗಮನವನ್ನು ಸೆಳೆದಿದ್ದರು.

ಇಂದು ರಾಜಕಾರಣದಲ್ಲಿ ನಾವು ನೋಡುವ ನಾಯಕರಿಗೂ, ನಮ್ಮ ಎದುರಿಗೆ ಕಾಣುವ ಚುನಾಯಿತ ಪ್ರತಿನಿಧಿಗಳಿಗೂ ಒಮ್ಮೆ ಶಾಮಣ್ಣನವರ ಬದುಕು ಮತ್ತು ಅವರ ನಡವಳಿಕೆಯನ್ನು ತುಲನೆ ಮಾಡಿ ನೋಡಿದಾಗ ಶಾಮಣ್ಣನಂತಹ ಜನ ನಮ್ಮೆದುರಿಗೆ ಇದ್ದರೆ, ಅವರ ಬದುಕು ನಿಜವೇ ಎನ್ನುವ ಮಟ್ಟಿಗೆ ಅನುಮಾನ ಬರುತ್ತದೆ. ಹಣ, ಹೆಂಡ, ತೋಳ್ಬಲದ ಆಧಾರದ ಮೇಲೆ ಚುನಾವಣೆಯ ಫಲಿತಾಂಶವನ್ನು ಬದಲಾಯಿಸಬಹುದು ಎನ್ನುವಂತಹ ಹಂತದಲ್ಲಿ ಚುನಾವಣಾ ಪ್ರಕ್ರಿಯೆಗಳು ಬಂದು ನಿಂತಿರುವ ಸಂದರ್ಭದಲ್ಲಿ ಹಣ, ಹೆಂಡ ಇವುಗಳಿಂದ ದೂರವಿದ್ದು, ಚುನಾವಣೆಯನ್ನು ಗೆಲ್ಲಬಹುದೆಂಬುದನ್ನು ತೋರಿಸಿಕೊಟ್ಟವರು ಟಿ.ಆರ್. ಶಾಮಣ್ಣ. ಟಿ.ಆರ್. ಶಾಮಣ್ಣ, ಬೆಂಗಳೂರು ನಗರದ ಅಭಿವೃದ್ಧಿ ಹರಿಕಾರರಲ್ಲಿ ಮೊದಲ ಪಂಕ್ತಿಯಲ್ಲಿ ನಿಲ್ಲುವವರು. ಅನೇಕರು ಬೆಂಗಳೂರು ನಗರವನ್ನು ಮತ್ತು ತಾವು ಪ್ರತಿನಿಧಿಸುವ ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಿದ್ದೇವೆ ಎಂದು ಕೊಚ್ಚಿಕೊಳ್ಳಬಹುದು. ಆದರೆ, ಜನರು ಇನ್ನೂ ಇಂದಿಗೂ ನೆನಪಿಸಿಕೊಳ್ಳುವುದು ಟಿ.ಆರ್. ಶಾಮಣ್ಣನವರನ್ನು. ಜನರಿಗೆ ಬೇಕಾದಂತಹ ಮೂಲಭೂತ ಸೌಕರ್ಯ, ಸೌಲಭ್ಯಗಳನ್ನು ಕಲ್ಪಿಸಿಕೊಟ್ಟ ಮೊದಲಿಗರು ಅವರು. ಒಬ್ಬ ಚುನಾಯಿತ ಪ್ರತಿನಿಧಿ ಹೇಗೆ ಕೆಲಸವನ್ನು ಮಾಡಬೇಕು ಎಂಬುದಕ್ಕೆ ಅವರ ದಿನಚರಿಯೇ ಒಂದು ನಿದರ್ಶನ.

ಬೆಳಗ್ಗೆ 2 ಗಂಟೆಗಳ ಕಾಲ ಜನರನ್ನು ಭೇಟಿ ಮಾಡುವುದು, ಆನಂತರ ಸರಕಾರದ ಕಚೆೇರಿಗಳಲ್ಲಿ ಜನರ ಸಮಸ್ಯೆಗಳ ಕಡೆ ಗಮನ ನೀಡುವುದು ಇವರು ಮಾಡುತ್ತಿದ್ದ ಮಹತ್ತರ ಕೆಲಸವಾಗಿತ್ತು. ಮಧ್ಯಾಹ್ನದ ಹೊತ್ತು ಮಹಾನಗರ ಪಾಲಿಕೆ, ಜಲಮಂಡಳಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ವಿಧಾನಸೌಧ ಹೀಗೆ... ಇಲ್ಲೆಲ್ಲ ಶಾಮಣ್ಣರವರ ಆಗಮನಕ್ಕಾಗಿ ಪ್ರತಿದಿನ ಜನರು ಕಾಯುತ್ತಿದ್ದರು. ಶಾಮಣ್ಣನವರು ಪ್ರತಿದಿನ ಮಧ್ಯಾಹ್ನದ ವೇಳೆಯಲ್ಲಿ ಜನ ಸಾಮಾನ್ಯರ ಕೆಲಸಗಳನ್ನು ಅಧಿಕಾರಿಗಳಿಗೆ ಹೇಳಿ ಮಾಡಿಸುವ ಸಲುವಾಗಿ ಈ ಕಚೆೇರಿಗಳ ಮುಂದೆ ಬಂದು ತಮ್ಮ ಆಟೊವನ್ನು ನಿಲ್ಲಿಸುತ್ತಿದ್ದಂತೆಯೇ ಅಧಿಕಾರಿಗಳ ಹಿಂಡು ಇವರ ಆದೇಶಗಳಿಗಾಗಿ ಕಾಯುತ್ತಿತ್ತು. ಇದು ಒಬ್ಬ ಚುನಾಯಿತ ಪ್ರತಿನಿಧಿಗೆ ಇರುವಂತಹ ಅಧಿಕಾರ ಚಲಾವಣೆಯ ರೀತಿ ಎಂಬುದನ್ನು ಅವರು ಸದಾ ತೋರಿಸುತ್ತಿದ್ದರು. ಜನಸಾಮಾನ್ಯರು ಎಂತಹದೇ ಸಮಸ್ಯೆಯನ್ನು ತಂದರೂ ಅದನ್ನು ಅಷ್ಟೇ ತಾಳ್ಮೆಯಿಂದ ಕೇಳಿ ಅದನ್ನು ಪರಿಹರಿಸಿಕೊಡುತ್ತಿದ್ದರು. ಜಾತಿ,ಮತ, ಬಡವ, ಬಲ್ಲಿದ ಎಂಬ ಭೇದಗಳು ಇವರ ಬದುಕಿನಲ್ಲಿ ಎಂದೂ ಸುಳಿಯಲಿಲ್ಲ. ಭ್ರಷ್ಟಾಚಾರಿಯನ್ನು ನೇರವಾಗಿ ನಿಷ್ಠೂರವಾಗಿಯೇ ಎಚ್ಚರಿಸುತ್ತಿದ್ದರು. ಸತ್ಯವನ್ನು ಹೇಳಲು ಎಂದೂ ಹಿಂದು ಮುಂದು ನೋಡಿದವರಲ್ಲ. ಜನಸಾಮಾನ್ಯರಿಗೆ ತೊಂದರೆಯಾದಾಗ ತನ್ನ ನಾಯಕ, ತನ್ನ ಪಕ್ಷ ಯಾವುದನ್ನೂ ಇವರು ಗಣನೆಗೆ ತೆಗೆದುಕೊಳ್ಳುತ್ತಿರಲಿಲ್ಲ.

ಟಿ. ಆರ್. ಶಾಮಣ್ಣ ಸಾಧಾರಣವಾದಂತಹ ಒಂದು ಬಡ ಕುಟುಂಬದಲ್ಲಿ ಹುಟ್ಟಿ, ಸ್ವಾತಂತ್ರ್ಯ ಚಳವಳಿಯಲ್ಲಿ ಹೇಳದೆ ಕೇಳದೆ ಮನೆ ಬಿಟ್ಟು ಭಾಗವಹಿಸಿ, ಅನೇಕ ವರ್ಷಗಳ ಕಾಲ ಸೆರೆಮನೆಯಲ್ಲಿ ಶಿಕ್ಷೆಯನ್ನು ಅನುಭವಿಸಿದವರು. ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವ ಸಲುವಾಗಿ ಕಠಿಣ ಶಿಕ್ಷೆಯನ್ನು ಅನುಭವಿಸಿದವರು. ನ್ಯಾಯಾಲಯದಲ್ಲಿ ತಪ್ಪನ್ನು ಒಪ್ಪಿಕೊಳ್ಳದೆ ಸೆರೆಮನೆ ವಾಸವನ್ನು ಅನುಭವಿಸಿದಂತಹ ಧೈರ್ಯಶಾಲಿ. ಅನೇಕ ಸಂದರ್ಭಗಳಲ್ಲಿ ಮಾರುವೇಶದಲ್ಲಿ ಸ್ವಾತಂತ್ರ್ಯ ಚಳವಳಿಗೆ ಬೇಕಾದಂತಹ ಪುಸ್ತಕ ಮತ್ತು ಕರಪತ್ರಗಳನ್ನು ಬೇರೆ ಬೇರೆ ಊರುಗಳಿಗೆ ಸಾಗಿಸುತ್ತಾ ಪೊಲೀಸರ ಕೈಗೆ ಸಿಗದಂತೆ ಚಾಣಾಕ್ಷತನದಿಂದ ಸನ್ನಿವೇಶವನ್ನು ಎದುರಿಸಿದಂತಹ ಅನೇಕ ಉದಾಹರಣೆಗಳು ಇವರ ಬದುಕಿನ ಚರಿತ್ರೆಯಲ್ಲಿ ದಾಖಲಾಗಿವೆ. ತನ್ನ ಮನೆಯನ್ನು ಮರೆತು ಸ್ವಾತಂತ್ರ್ಯ ಚಳವಳಿಯ ಹೋರಾಟದಲ್ಲಿ ಭಾಗವಹಿಸಿ, ನಂತರ ತಂದೆಯ ಅನಾರೋಗ್ಯದ ಬಗ್ಗೆ ತಿಳಿದಾಗ ಮನೆಗೆ ಮರಳಿ, ಮನೆಯ ಪರಿಸ್ಥಿತಿಯನ್ನು ಮನಗಂಡು, ಬದುಕಿಗಾಗಿ ಸ್ವಂತ ಉದ್ಯೋಗವನ್ನು ಆರಂಭಿಸಿ, ಸ್ವಾವಲಂಬನೆಯ ಬದುಕನ್ನು ಆರಂಭಿಸಿದವರು. ಯರವಾಡ ಜೈಲಿನಲ್ಲಿ ಅನೇಕ ಮಹತ್ತರ ಘಟನೆಗಳನ್ನು ಹತ್ತಿರದಿಂದ ಕಂಡವರಾಗಿದ್ದರು.

ತನ್ನ ಬದುಕಿನಲ್ಲಿ ಮದ್ಯಪಾನ, ಕಾಫಿ, ಟೀ ಮತ್ತು ಇತರ ಚಟಳಿಗೆ ದಾಸನಾಗದೆ ಸರಳವಾಗಿ ಬದುಕಿ, ಗಾಂಧೀಜಿಯವರ ಬಯಕೆಯಾಗಿರುವ ಖಾದಿಯನ್ನು ಸದಾಕಾಲ ಧರಿಸಬೇಕು ಎಂಬೆಲ್ಲಾ ನಿಲುವುಗಳಿಗೆ ಬದುಕಿನ ಕೊನೆಯ ಕ್ಷಣದ ತನಕ ಅಂಟಿಕೊಂಡಿದ್ದವರು ಅವರು. 1957ರಲ್ಲಿ ನಗರಸಭೆಯ ಸದಸ್ಯರಾಗಿ, ಆರ್ಥಿಕ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ತಮ್ಮ ರಾಜಕೀಯ ಬದುಕನ್ನು ಆರಂಭಿಸಿದ ಶ್ಯಾಮಣ್ಣನವರು ಬಸವನಗುಡಿ ಕ್ಷೇತ್ರದ ಶಾಸಕರಾಗಿ, ಲೋಕಸಭಾ ಸದಸ್ಯರಾಗಿ, ವಿಧಾನ ಪರಿಷತ್ತಿನ ಸದಸ್ಯರಾಗಿ, ಭಿಕ್ಷುಕರ ಪರಿಹಾರ ನಿಧಿ ಸಂಸ್ಥೆಯ ಅಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿದವರು. ಬಸವನಗುಡಿ ಕ್ಷೇತ್ರದಲ್ಲಿ ಶಾಮಣ್ಣನವರ ಹೆಸರು ಮತಗಳನ್ನು ತಂದುಕೊಡುವ ಶಕ್ತಿಯಾಗಿತ್ತು. ಶಾಮಣ್ಣನವರು ಹೇಳಿದ ಮೇಲೆ ಅವರ ವಿರುದ್ಧವಾಗಿ ಮತದಾರರು ತೀರ್ಪು ನೀಡುತ್ತಲೇ ಇರಲಿಲ್ಲ. ಶಾಮಣ್ಣನವರು ಮನಸ್ಸು ಮಾಡಿದರೆ, ಯಾರನ್ನೂ ಬೇಕಾದರೂ ಇಲ್ಲಿ ಗೆಲ್ಲಿಸಿಕೊಳ್ಳುತ್ತಾರೆ ಎಂಬುದು ಸತ್ಯವಾಗಿತ್ತು. ಶಾಮಣ್ಣ ಎಂದರೆ ಇಲ್ಲಿನ ಜನರ ಬದುಕಿನ ಒಂದು ಭಾಗವಾಗಿದ್ದರು.

1980ರಲ್ಲಿ ಶಾಮಣ್ಣನವರು ಲೋಕಸಭಾ ಚುನಾವಣೆಯಲ್ಲಿ ಗೆದ್ದ ಆನಂತರ ಬಸವನಗುಡಿ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಜನತಾ ಪಕ್ಷದಿಂದ ಹುಣಸೂರಿನ ಎಚ್.ಎಲ್. ತಿಮ್ಮೇಗೌಡರು ಅಭ್ಯರ್ಥಿಯಾಗಿದ್ದರು. ಕಾಂಗ್ರೆಸ್‌ನ ಪರವಾಗಿ ಲಕ್ಷ್ಮಣರಾಯರು ಅಭ್ಯರ್ಥಿಯಾಗಿದ್ದರು. ಅಂದಿನ ಮುಖ್ಯಮಂತ್ರಿ ಗುಂಡೂರಾಯರು ಈ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ಸ್ವೀಕರಿಸಿದರು. ಆಡಳಿತದಲ್ಲಿರುವ ಪಕ್ಷ ಏನೆಲ್ಲಾ ಒತ್ತಡ ತಂತ್ರಗಳನ್ನು ಹೂಡಿದರೂ ಸಹ ಚುನಾವಣೆಯ ಫಲಿತಾಂಶ ತಿಮ್ಮೇಗೌಡರ ಪರವಾಯಿತು. ಇಲ್ಲಿ ಜನ ಹೇಳಿದ್ದು, ಈ ಕ್ಷೇತ್ರದಲ್ಲಿ ಶಾಮಣ್ಣನವರ ಮಾತೇ ಅಂತಿಮ. ಹಾಗಾಗಿಯೇ ತಿಮ್ಮೇಗೌಡರು ಗೆದ್ದಿದ್ದರು.

1985ರಲ್ಲಿ ಜನಪ್ರಿಯತೆಯ ಉತ್ತುಂಗದಲ್ಲಿದ್ದ ರಾಮಕೃಷ್ಣ ಹೆಗಡೆಯವರು ಈ ಕ್ಷೇತ್ರದ ಶಾಸಕರಾದರು. ಆದರೆ 1989ರಲ್ಲಿ ಅವರ ಜನಪ್ರಿಯತೆಯೂ ಕುಸಿದಿತ್ತು. ಕ್ಷೇತ್ರದಲ್ಲಿ ಅನೇಕ ರೀತಿಯ ಅಭಿಪ್ರಾಯಗಳು ಅವರ ವಿರುದ್ಧ ಎದ್ದಿತ್ತು. ಈ ಚುನಾವಣೆಯಲ್ಲಿ ರಾಮಕೃಷ್ಣ ಹೆಗಡೆಯವರು ಸೋಲುತ್ತಾರೆ ಎಂಬುದು ಪತ್ರಿಕೆಗಳ ಅಭಿಪ್ರಾಯವೂ ಆಗಿತ್ತು. ಆದರೆ ಚುನಾವಣೆಯಲ್ಲಿ ಹೆಗಡೆಯವರು ಜಯಶೀಲರಾದರು. ಇದಕ್ಕೆ ಕಾರಣ, ಟಿ.ಆರ್. ಶಾಮಣ್ಣ ಎಂಬುದು ಸತ್ಯ ಸಂಗತಿಯಾಗಿತ್ತು. ಶಾಮಣ್ಣ ಒಬ್ಬ ಸಮಾಜ ಸೇವಕರಾಗಿ, ಒಬ್ಬ ಸಮರ್ಥ ಪ್ರತಿನಿಧಿಯಾಗಿ ಕಾಣುವುದಷ್ಟೇ ಅಲ್ಲದೆ, ಒಬ್ಬ ಸಹಕಾರಿ ಧುರೀಣರೂ ಹೌದು. ದಿವಂಗತ ವೈ.ವಿ. ಕೇಶವ ಮೂರ್ತಿಯವರೊಂದಿಗೆ ಸೇರಿ, ಶ್ಯಾಮಣ್ಣನವರು ಸ್ಥಾಪಿಸಿರುವ ದಿ ನ್ಯಾಷನಲ್ ಕೋ-ಆಪರೇಟಿವ್ ಬ್ಯಾಂಕ್ ಇಂದು ರಾಜ್ಯದಲ್ಲಿಯೇ ಉನ್ನತ ಸ್ಥಾನದಲ್ಲಿದೆ. ಇದರ ಮೂಲಕ ಈ ಪ್ರದೇಶದ ಸಹಸ್ರಾರು ಜನರ ಬದುಕಿಗೆ ಆರ್ಥಿಕ ಸಹಾಯವನ್ನು ಕಲ್ಪಿಸಿ ಕೊಟ್ಟವರು.

ಶಾಮಣ್ಣನವರು ಇಂದು ನಮ್ಮೆದುರಿಗೆ ಇಲ್ಲದಿದ್ದರೂ ಅವರ ಅನೇಕ ಹೋರಾಟಗಳು, ಜನಪರಕೆಲಸಗಳು ಅವರ ಇರುವಿಕೆಯನ್ನು ಸಾರುತ್ತವೆ.

share
ಕೆ.ಎಸ್. ನಾಗರಾಜ್
ಕೆ.ಎಸ್. ನಾಗರಾಜ್
Next Story
X