ಅಂತಿಮ ಏಕದಿನ: ಟಾಸ್ ಜಯಿಸಿದ ಆಸ್ಟ್ರೇಲಿಯ ಬ್ಯಾಟಿಂಗ್

ದಿಲ್ಲಿ, ಮಾ.13: ಐದನೇ ಹಾಗೂ ಅಂತಿಮ ಏಕದಿನ ಅಂತರ್ ರಾಷ್ಟ್ರೀಯ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಟಾಸ್ ಜಯಿಸಿದ ಆಸ್ಟ್ರೇಲಿಯ ನಾಯಕ ಆ್ಯರೊನ್ ಫಿಂಚ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
ಐದು ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು ತಲಾ 2 ಪಂದ್ಯಗಳಲ್ಲಿ ಜಯ ಗಳಿಸಿದೆ. ಸರಣಿ ಗೆಲುವಿಗೆ ಎರಡೂ ತಂಡಗಳಿಗೂ ಅಂತಿಮ ಪಂದ್ಯ ಮಹತ್ವದ್ದಾಗಿದೆ. ಈ ಪಂದ್ಯಕ್ಕೆ ಟೀಮ್ ಇಂಡಿಯಾದ ಅಂತಿಮ ಹನ್ನೊಂದರ ಬಳಗಕ್ಕೆ ವೇಗಿ ಮುಹಮ್ಮದ್ ಶಮಿ ಮತ್ತು ಆಲ್ ರೌಂಡರ್ ರವೀಂದ್ರ ಜಡೇಜ ವಾಪಸಾಗಿದ್ದಾರೆ.
Next Story





