ಅಂತಿಮ ಏಕದಿನ: ಭಾರತದ ಗೆಲುವಿಗೆ 273 ರನ್ ಗಳ ಸವಾಲು

ಉಸ್ಮಾನ್ ಖ್ವಾಜಾ 100 ರನ್ (106ಎ, 10ಬೌ,2ಸಿ)
ಹೊಸದಿಲ್ಲಿ, ಮಾ.13: ಐದನೇ ಹಾಗೂ ಅಂತಿಮ ಏಕದಿನ ಅಂತರ್ ರಾಷ್ಟ್ರೀಯ ಪಂದ್ಯದಲ್ಲಿ ಆತಿಥೇಯ ಭಾರತದ ವಿರುದ್ಧ ಆಸ್ಟ್ರೇಲಿಯ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 272 ರನ್ ಗಳಿಸಿದೆ.
ಆಸ್ಟ್ರೇಲಿಯದ ಆರಂಭಿಕ ದಾಂಡಿಗ ಉಸ್ಮಾನ್ ಖ್ವಾಜಾ ಶತಕ (100) ದಾಖಲಿಸಿದರು. ಪೀಟರ್ ಹ್ಯಾಂಡ್ಸ್ ಕಂಬ್ ಅರ್ಧಶತಕ(52) , ನಾಯಕ ಆ್ಯರೊನ್ ಫಿಂಚ್ 27ರನ್, ಮಾರ್ಕುಸ್ ಸ್ಟೋನಿಸ್ 20 ರನ್ , ಅಸ್ಟನ್ ಟರ್ನರ್ 20ರನ್, ಜೆ. ರಿಚರ್ಡ್ಸನ್ 29ರನ್, ಪ್ಯಾಟ್ ಕಮಿನ್ಸ್ 15ರನ್ ಗಳಿಸಿದರು.
ಭಾರತದ ಭುವನೇಶ್ವರ್ ಕುಮಾರ್ 48ಕ್ಕೆ 3, ಮುಹಮ್ಮದ್ ಶಮಿ 57ಕ್ಕೆ 2, ರವೀಂದ್ರ ಜಡೇಜ 45ಕ್ಕೆ 2 ಮತ್ತು ಕುಲ್ ದೀಪ್ ಯಾದವ್ 74ಕ್ಕೆ 1 ವಿಕೆಟ್ ಪಡೆದರು.
Next Story





